ಸೂರ್ಯ ಗ್ರಹಣದಂದು ಜನಿಸಿದ್ದಕ್ಕೆ ಈ ಮಗುವಿಗೆ ಇಟ್ಟ ಹೆಸರೇನು ಗೊತ್ತಾ?

Posted By:
Subscribe to Oneindia Kannada

ವಾಷಿಂಗ್ಟನ್, ಆಗಸ್ಟ್ 23: ಇತ್ತೀಚೆಗೆ ಸಂಭವಿಸಿದ್ದ ಸೂರ್ಯ ಗ್ರಹಣ ದಿನದಂದು ಜನಿಸಿದ್ದಕ್ಕೆ ಈ ಮಗುವಿಗೆ ಎಕ್ಲಿಪ್ಸ್ ಎಂದು ಹೆಸರಿಡಲಾಗಿದೆ. ಉತ್ತರ ಅಮೆರಿಕಕ್ಕೆ ಸೇರಿದ ಸೌತ್ ಕರೋಲಿನಾದ ಸ್ಪಾರ್ಟನ್ ಬರ್ಗ್ ನಿವಾಸಿಗಳಾದ ಫ್ರೀಡಂ ಹಾಗೂ ಮೈಕಲ್ ಯುಬ್ಯಾಂಕ್ಸ್ ದಂಪತಿಗೆ ಜನಿಸಿರುವ ಈ ಮಗು ಈಗ ತನ್ನ ಹೆಸರಿನಿಂದಾಗಿ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.

ಅಸಲಿಗೆ, ಫ್ರೀಡಂ ಅವರಿಗೆ ಸೆಪ್ಟಂಬರ್ 3ರಂದು ಹೆರಿಗೆ ದಿನಾಂಕ ನೀಡಲಾಗಿತ್ತು. ಆದರೆ, ಆಗಸ್ಟ್ 21ರ ಮಧ್ಯರಾತ್ರಿಯೇ ಫ್ರೀಡಂ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ತಕ್ಷಣವೇ ಅವರನ್ನು ಗ್ರೀನ್ ವಿಲ್ಲೆ ಮೆಮೊರಿಯಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಗ್ರಹಣ ಶುರುವಾಗಲು ಎರಡೂವರೆ ಗಂಟೆಗಳು ಬಾಕಿಯಿರುವಾಗಲೇ ಫ್ರೀಡಂ ಅವರು, ಹೆಣ್ಣು ಮಗುವಿಗೆ ಜನ್ಮ ನೀಡಿದರು.

South Carolina Woman Who Gave Birth on Day of the Solar Eclipse names her baby as Eclipse

ಅದಾಗಿ, ಕೆಲವೇ ಹೊತ್ತಿನಲ್ಲಿ ಎಲ್ಲೆಲ್ಲೂ ಗ್ರಹಣದ ವಿಚಾರಗಳೇ ಹರಿದಾಡ ತೊಡಗಿದವು. ಇದರಿಂದ ಸ್ಫೂರ್ತಿಗೊಂಡ ದಂಪತಿ ತಮ್ಮ ಮಗುವಿಗೆ ಎಕ್ಲಿಪ್ಸ್ ಎಲಿಜಬೆತ್ ಯುಬ್ಯಾಂಕ್ ಎಂದು ನಾಮಕರಣ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A couple legally named their baby girl Eclipse to commemorate the celestial event that captivated North America on August 21, the day she was unexpectedly born.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ