ಮಾರುಕಟ್ಟೆಗೆ ಎಂಟ್ರಿ ನೀಡಲು ತಯಾರಾಗಿದೆ ರೆಡ್‌ಮಿಯ ಇನ್ನೊಂದು ಫೋನ್‌

ಭಾರತದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ರೆಡ್‌ಮಿ ಕಂಪನಿ ಮಾರುಕಟ್ಟೆಯಲ್ಲಿ ಸದ್ದು ಮಾಡಲು ತಯಾರಿ ನಡೆಸಿದೆ. ಬಜೆಟ್‌ ಫ್ರೆಂಡ್ಲಿ ಸೆಗ್ಮೆಂಟ್‌ನಲ್ಲಿ ಕಂಪನಿ ಮತ್ತೊಂದು ಫೋನ್‌ ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಫೋನ್‌ ನಿಜಕ್ಕೂ ಗ್ರಾಹಕರನ್ನು ಸೆಳೆಯಲು ಸಿದ್ಧವಾಗಿದೆ.

ರೆಡ್‌ಮಿ ತನ್ನ ಕಂಪನಿಯ ಹಳೆಯ ಫೋನ್‌ಗಳಂತೆ ಈ ಫೋನ್‌ ಲುಕ್‌ ಮೇಲೆ ಕೆಲಸ ಮಾಡಿದೆ. ಮಿಡ್ ರೇಂಜ್‌ನಲ್ಲಿ ಕ್ಲಾಸಿಕ್‌ ಲುಕ್‌ನಲ್ಲಿ ಮೊಬೈಲ್‌ ಗ್ರಾಹಕರನ್ನು ಸೆಳೆಯಲಿದೆ. ಪ್ರೀಮಿಯಂ ಫೋನ್‌ಗಳನ್ನು ಹೊಂದಿರುವ ರೆಡ್‌ಮಿ ಬಜೆಟ್‌ ಫ್ರೆಂಡ್‌ ಸೆಗ್ಮೆಂಟ್‌ನಲ್ಲಿ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ತಳವೂರಲು ಪ್ಲ್ಯಾನ್ ಮಾಡಿಕೊಂಡಿದೆ. ರೆಡ್‌ಮಿ ನೂತನವಾಗಿ ಮಾರುಕಟೆಗೆ ಬಿಡುಗಡೆ ಮಾಡಲು ಹೊರಟಿರುವ ಮೊಬೈಲ್‌ಗೆ Redmi 13 5G ಎಂದ ನಾಮಕರಣ ಮಾಡಿದೆ.

Leaked Details Unveil Redmi 13 5G Battery Charging and Processor Insights Revealed

ನಿಜಕ್ಕೂ ಈ ಫೋನ್‌ ಲುಕ್‌ ಯಾವುದೇ ಪ್ರೀಮಿಯಂ ಫೋನ್‌ನ ಲುಕ್‌ಗೆ ಕಮ್ಮಿ ಇಲ್ಲ. ಸಾಮಾನ್ಯವಾಗಿ ನೋಟ್‌ ಸೀರಿಸ್‌ನಲ್ಲಿ ಕಾಣಿಸಿಕೊಳ್ಳವ ಗ್ಲಾಸ್‌ ಫಿನಿಷ್‌, Redmi 13 5G ಫೋನ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಫೋನ್‌ ಈ ರೇಂಜ್‌ನಲ್ಲಿ ಸಿಗುವ ಹಲವು ಕಂಪನಿಗಳ ಮೊಬೈಲ್‌ ಫೋನ್‌ಗೆ ಭಾರೀ ಪೈಪೋಟ ನೀಡುವುದಂತು ಸುಳ್ಳು ಅಲ್ಲವೇ ಅಲ್ಲ.

ಈಗಾಗಲೇ ರಿಯಲ್‌ಮಿ ಸಹ ಭಾರತೀಯ ಮಾರುಕಟ್ಟೆಗೆ ಭರ್ಜರಿ ಬ್ಯಾಟರಿ ಫೀಚರ್‌ ಇರುವ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದಕ್ಕೆ ಪೈಪೋಟಿಯಾಗಿ ರೆಡ್‌ಮಿ 13 ಜಿ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ.

ಏನೆಲ್ಲಾ ವಿಶೇಷತಗಳಿಂದ ಕೂಡಿದೆ

ಚೈನೀಸ್ ಟಿಪ್‌ಸ್ಟರ್ ಎಕ್ಸ್‌ಪೀರಿಯೆನ್ಸ್ ಮೋರ್ ರೆಡ್‌ಮಿಯ ಮುಂಬರುವ ಸ್ಮಾರ್ಟ್‌ಫೋನ್ ರೆಡ್‌ಮಿ 13 5 ಜಿ ವಿವರಗಳನ್ನು ಹಂಚಿಕೊಂಡಿದೆ. ಈ Redmi ಸ್ಮಾರ್ಟ್ಫೋನ್ ಕ್ವಾಲ್ಕಮ್‌ ಸ್ನ್ಯಾಪ್‌ ಡ್ರ್ಯಾಗನ್‌ 4 Gen 2 ಪ್ರೊಸೆಸರ್ನೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್‌ನ ಪ್ರೊಸೆಸರ್‌ನಲ್ಲಿ ಕಂಪನಿಯು ಯಾವುದೇ ಅಪ್‌ಗ್ರೇಡ್ ಮಾಡುವುದಿಲ್ಲ. ಇದಲ್ಲದೆ, ಈ ಸ್ಮಾರ್ಟ್‌ಫೋನ್ 5000mAh ಬ್ಯಾಟರಿ ಮತ್ತು 33W USB ಟೈಪ್ C ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ. ಕಳೆದ ವರ್ಷ ಬಿಡುಗಡೆಯಾದ Redmi ಫೋನ್‌ನ ಚಾರ್ಜಿಂಗ್ ವೇಗವು 18W ಆಗಿತ್ತು.

ಮೂರು ರೂಪಾಂತರದಲ್ಲಿ ಫೋನ್‌

ಇದು ಮೂರು ವಿಧದಲ್ಲಿ ಲಭ್ಯವಿದೆ. 4GB + 128GB ಇಂಟರ್ನಲ್‌ ಸ್ಟೋರೆಜ್‌ ಫೋನ್‌ ಬೆಲೆ 10,999 ರೂ. ಆಗುವ ಸಾಧ್ಯತೆ ಇದೆ. ಇದರ 6GB/128GB ರೂಪಾಂತರದ ಬೆಲೆ ರೂ 12499 ಮತ್ತು 8GB/256GB ರೂಪಾಂತರದ ಬೆಲೆ ರೂ 14499 ಆಗುವ ಸಂಭವವಿದೆ.

ಈ ಮೊಬೈಲ್ 6.74 ಇಂಚಿನ ಎಚ್‌ಡಿ ಪ್ಲಸ್‌ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಈ ಫೋನ್ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ 90Hz ರಿಫ್ರೆಶ್ ರೇಟ್ ಬೆಂಬಲವನ್ನು ಹೊಂದಿರುವ ಸಾಧ್ಯತೆ ಇದೆ. ಇದರ ರೆಸಲ್ಯೂಶನ್ 720×1600 ಪಿಕ್ಸೆಲ್‌ಗಳು. ಹಿಂಬಾಗದಲ್ಲಿ 50 ಮೆಗಾ ಪಿಕ್ಸಲ್‌ ಪ್ರೈಮರಿ ಕ್ಯಾಮೇರಾವನ್ನು ಹೊಂದಿರಲಿದೆ. ಇದು 8 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+