12 ಲಕ್ಷ ರೂಪಾಯಿ ಖರ್ಚು ಮಾಡಿ 'ನಾನು ಮನುಷ್ಯ ಅಲ್ಲ ನಾಯಿ' ಎಂದ ಜಪಾನಿ
ಪ್ರಾಣಿಯಂತೆ ಕಾಣಬೇಕೆಂದುಕೊಂಡಿದ್ದ ಜಪಾನಿನ ಟೊಕೊ ಎಂಬ ವ್ಯಕ್ತಿ ತನ್ನ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಜೆಪ್ಪೆಟ್ ಎಂಬ ವೃತ್ತಿಪರ ಏಜೆನ್ಸಿಯಿಂದ ನಾಯಿಯ ತಳಿಯಾದ "ಕೋಲಿ" ಆಗಿ ತನ್ನನ್ನು ತಾನು ಮಾರ್ಪಡಿಸಿಕೊಳ್ಳಲು ಬೇಕಾದ ವೇಷಭೂಷಣಕ್ಕಾಗಿ ಟೊಕೊ ಪ್ರಯತ್ನಿಸಿದ್ದಾರೆ. ಜೊತೆಗೆ ಅವರು ಕೋಲಿ (ನಾಯಿಯ ತಳಿ)ಯಂತೆ ವೇಷಭೂಷಣ ತಯಾರಿಸಲು ಅಂದಾಜು 12 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.
ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಅವರ ಇತ್ತೀಚಿನ ಚಿತ್ರಗಳು ಜನರನ್ನು ಆಶ್ಚರ್ಯಗೊಳಿಸಿವೆ. ಅವರು ತನ್ನ ನೆಚ್ಚಿನ ಪ್ರಾಣಿ ನಾಯಿಯಂತೆ ವೇಷಭೂಷಣಕ್ಕಾಗಿ ಸಂಪೂರ್ಣವಾಗಿ ರೂಪಾಂತರಗೊಂಡ ನಂತರ ಅವರು ಮನುಷ್ಯನಂತೆ ಕಾಣುತ್ತಿಲ್ಲ. ವರದಿಗಳ ಪ್ರಕಾರ, ವಿಶಿಷ್ಟವಾದ ವೇಷಭೂಷಣ ತಯಾರಿಸಲು 40 ದಿನಗಳನ್ನು ತೆಗೆದುಕೊಳ್ಳಲಾಗಿದೆ. ಟೊಕೊ ಅವರು ತಮ್ಮ ದೇಹರಚನೆ ಪರಿಪೂರ್ಣವಾಗಿ ನಾಯಿಯಂತೆ ಬದಲಾಗಲು ಬಯಸಿದ್ದರು. ಆದ್ದರಿಂದ ಅವರು ಹಲವಾರು ಸುತ್ತಿನ ಪರಿಷ್ಕರಣೆಗಳನ್ನು ನಡೆಸಿದರು. YouTube ನಲ್ಲಿ ಪೋಸ್ಟ್ ಮಾಡಲಾದ ವಿಡಿಯೊದಲ್ಲಿ, ಜಪಾನಿನ ವ್ಯಕ್ತಿ ತನ್ನ ರೂಪಾಂತರದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಅವರು ನಾಯಿಯಂತ ವೇಷಭೂಷಣ ಧರಿಸಿ ರೂಪಾಂತರಗೊಂಡು ಸಂಪೂರ್ಣವಾಗಿ ನಾಯಿಯಂತೆ ಕಾಣುತ್ತಿದ್ದಾರೆ.

ಈ ವಿಡಿಯೋವನ್ನು ಹಂಚಿಕೊಂಡ ಟೊಕೊ, "ನೀವು ಎಂದಾದರೂ ಪ್ರಾಣಿಯಾಗಲು ಬಯಸಿದ್ದೀರಾ? ನಾನು ಅದನ್ನು ಬಯಸಿದ್ದೇನೆ! ನನ್ನ ಕನಸನ್ನು ಈ ರೀತಿ ನನಸಾಗಿಸಿದೆ" ಎಂದು ಅವರ ಯೂಟ್ಯೂಬ್ ವಿಡಿಯೊ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಟೊಕೊ ನಾಯಿ ವೇಷಭೂಷಣ ತಯಾರಿಸಲು ವಿಶೇಷ ವರ್ಕ್‌ಶಾಪ್ ಜೆಪ್ಪೆಟ್ ಅನ್ನು ಸಂಪರ್ಕಿಸಿದರು ಮತ್ತು ಅಲ್ಟ್ರಾ-ರಿಯಲಿಸ್ಟಿಕ್ ನಾಯಿ ವೇಷಭೂಷಣವನ್ನು ನಿರ್ಮಿಸಲು ಕೇಳಿಕೊಂಡರು. ಇದಕ್ಕೆ ಸುಮಾರು 2 ಮಿಲಿಯನ್ ಯೆನ್ (ಸುಮಾರು 12 ಲಕ್ಷ ರೂಪಾಯಿ) ವೆಚ್ಚವಾಗಿದ್ದು, ಟೊಕೊ ಅವರ ಮಾನವ ರೂಪವನ್ನು ಸಂಪೂರ್ಣವಾಗಿ ಮರೆಮಾಡಲು ಈ ವೇಷಭೂಷಣವನ್ನು ವಿನ್ಯಾಸಗೊಳಿಸಲಾಗಿದೆ.
【制作事例 追加】
— 特殊造型ゼペット (@zeppetJP) April 11, 2022
犬 造型スーツ
個人の方からのご依頼で、犬の造型スーツを制作しました。
コリー犬をモデルにしており、本物の犬と同様に四足歩行のリアルな犬の姿を再現しております🐕
詳細はこちら:https://t.co/0gPoaSb6yn#犬 #Dog #着ぐるみ#特殊造型 #特殊造形 pic.twitter.com/p9072G2846
ಸ್ಪೆಷಲ್ ಎಫೆಕ್ಟ್‌ಗಳಲ್ಲಿ ಪರಿಣತಿ ಹೊಂದಿರುವ ಜೆಪ್ಪೆಟ್ ಕಂಪನಿಯು ಟೊಕೊ ನಾಯಿ ವೇಷಭೂಷಣದ ಫೋಟೋಗಳನ್ನು ಹಂಚಿಕೊಂಡಿದ್ದು ಟ್ವಿಟರ್‌ನಲ್ಲಿ ಹರಿದಾಡುತ್ತಿವೆ. ಮಾಧ್ಯಮ ವರದಿಗಳ ಪ್ರಕಾರ, ಜೆಪ್ಪೆಟ್ ಅವರ ಅಲ್ಟ್ರಾ-ರಿಯಲಿಸ್ಟಿಕ್ ವೇಷಭೂಷಣವನ್ನು ಮಾಡಲು ಟ್ರಿಕಿ ಆಗಿತ್ತು. ಆದಾಗ್ಯೂ, ಸಿದ್ಧಪಡಿಸಿದ ಉತ್ಪನ್ನವನ್ನು ನೋಡುವಾಗ ಅವರು 'ಟೊಕೊ' ಅನ್ನು ನಿಜವಾದ ನಾಯಿಯಂತೆ ಕಾಣುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.
(ಒನ್ಇಂಡಿಯಾ ಸುದ್ದಿ)
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications