ರಕ್ತಪಾತಕ್ಕೆ ಸಿದ್ಧವಾಗಿ ನಿಂತನಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್?
ಬೇಡ ಅಂದ್ರೂ ಕೆಣಕುತ್ತಾ, ಸಣ್ಣಪುಟ್ಟ ವಿಷಯಕ್ಕೂ ಸರ್ವಾಧಿಕಾರಿ ವಿರುದ್ಧ ಮಾತನಾಡುತ್ತಾ ಅಮೆರಿಕ ಏನೋ ಎಡವಟ್ಟು ಮಾಡಿಕೊಳ್ಳುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಎಲ್ಲಾ ಆರೋಪಗಳ ನಡುವೆ ಇದೀಗ ಕಿಮ್ ಜಾಂಗ್ ಉನ್ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದು ಶತ್ರುಗಳಿಗೆ ನೇರ ಎಚ್ಚರಿಕೆ ರವಾನೆ ಮಾಡಿದ್ದಾನೆ. ಮೊನ್ನೆ ಮೊನ್ನೆ ತಾನೆ ಸೈನಿಕರಿಗೆ ಅಸ್ತ್ರ ಸಿದ್ಧವಾಗಿಸಿಕೊಳ್ಳಿ ಎಂದಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಈಗ ಏನ್ ಹೇಳಿದ್ದಾನೆ ಗೊತ್ತಾ?
ಹೌದು, ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ವಿರುದ್ಧ ಶತ್ರು ದೇಶಗಳು ಹಿಡಿಶಾಪ ಹಾಕುತ್ತವೆ ಕಿಮ್ ಜಾಂಗ್ ಉನ್ ವಿರೋಧಿಗಳು 'ಅವನೊಬ್ಬ ಸೆಡೆ'.. 'ಸೈಕೋ'.. ಅಂತೆಲ್ಲಾ ಬೈಯುತ್ತಾರೆ. ಆದರೆ ಕಿಮ್ ಮಾತ್ರ ತಾನು ಇಷ್ಟೆಲ್ಲಾ ಮಾಡುತ್ತಿರುವುದು ತಮ್ಮ ದೇಶದ ಪ್ರಜೆಗಳ ರಕ್ಷಣೆಗೆ ಅಂತಿದ್ದಾನೆ. ಹೀಗೆ ಎಲ್ಲವೂ ಬರೀ ಬೈಗುಳ, ಮಾತ್ ಮಾತಿನಲ್ಲೇ ಮುಗಿದು ಹೋಗುತ್ತೆ ಅನ್ನುವಷ್ಟರಲ್ಲಿ ಹೊಸ ಕಿರಿಕ್ ಶುರುವಾಗಿದೆ. ಖುದ್ದು ಸರ್ವಾಧಿಕಾರಿ ಪರಮಾಣು ಅಸ್ತ್ರ ಅಂದ್ರೆ ನ್ಯೂಕ್ಲಿಯರ್ ದಾಳಿ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾನೆ.

ಪರಮಾಣು ದಾಳಿಗೆ ಉ.ಕೊರಿಯಾ ಸಿದ್ಧತೆ?
ಇದೀಗ ಕಿಮ್ ಜಾಂಗ್ ಉನ್ ಕೊಟ್ಟಿರುವ ಎಚ್ಚರಿಕೆ ಪ್ರಕಾರ 'ಶತ್ರು ರಾಷ್ಟ್ರಗಳು ಅಕಸ್ಮಾತ್ ಉತ್ತರ ಕೊರಿಯಾನ ಕೆಣಕಿದರೆ, ಅವರ ವಿರುದ್ಧ ಅಣ್ವಸ್ತ್ರ ಪ್ರಯೋಗಿಸುವ ನೀತಿಯನ್ನು ನಾವು ಇಟ್ಟುಕೊಂಡಿದ್ದೇವೆ' ಅಂತಾ ಹೇಳಿದ್ದಾನೆ. ಈ ಮೂಲಕ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ವಾರ್ನಿಂಗ್ ಹೊಸ ಭಯ ಹುಟ್ಟುಹಾಕಿದೆ. ಯಾಕಂದ್ರೆ ಈಗಾಗಲೇ ಈ ದೇಶದ ಬಳಿ ಸಾಕಷ್ಟು ಪರಮಾಣು ಅಸ್ತ್ರಗಳು ಹಾಗೂ ಪರಮಾಣು ಅಸ್ತ್ರಗಳನ್ನು ಹೊತ್ತೊಯ್ಯುವ ಶಕ್ತಿ ಹೊಂದಿರುವ ಮಿಸೈಲ್ ಅಂದ್ರೆ ಕ್ಷಿಪಣಿಗಳು ಇವೆ.
ಇತ್ತೀಚೆಗೆ ಹೊಸ ಅಸ್ತ್ರ ಪರೀಕ್ಷೆ
ಕೆಲವು ದಿನಗಳ ಹಿಂದಷ್ಟೇ ಉತ್ತರ ಕೊರಿಯಾ 'ಹ್ವಸಾಂಗ್-18' ಎಂಬ ಕ್ಷಿಪಣಿಯನ್ನ ಟೆಸ್ಟ್ ಮಾಡಿತ್ತು. ಇನ್ನು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸೇನೆ & ಸೈನಿಕರಿಗೆ ಈಗ ಕಿಮ್ ಜಾಂಗ್ ಉನ್ ಭೇಷ್ ಎಂದಿದ್ದಾನೆ. ಅಲ್ಲದೆ 'ಶಾಂತಿ ಕಾಪಾಡಾಲು ಶತ್ರು ಮೇಲೆ ಮೊದಲೇ ಅಣ್ವಸ್ತ್ರ ಪ್ರಯೋಗಿಸಬೇಕು, ಹೀಗೆ ಭಯ ಸೃಷ್ಟಿಸಿದರೆ ಮಾತ್ರ ಶಾಂತಿ ಕಾಪಾಡಲು ಸಾಧ್ಯ' ಎಂಬ ಅರ್ಥದಲ್ಲಿ ಕಿಮ್ ಜಾಂಗ್ ಉನ್ ಮಾತನಾಡಿದ್ದಾನೆ ಎನ್ನಲಾಗಿದೆ. ಹೀಗಾಗಿ ಜಗತ್ತು ಮತ್ತೊಮ್ಮೆ ನ್ಯೂಕ್ಲಿಯರ್ ದಾಳಿಯ ಭೀತಿಯಲ್ಲಿ ಮುಳುಗುವಂತಾಗಿದೆ.

ಕ್ಷಿಪಣಿಗಳ ಶತಕ ಬಾರಿಸಿದ ಕಿಮ್!
ಒಟ್ನಲ್ಲಿ ಕಿಮ್ ಜಾಂಗ್ ಉನ್ ಎಲ್ಲದಕ್ಕೂ ಸನ್ನದ್ಧವಾಗಿ ಈ ಮಾತು ಹೇಳಿರುವಂತೆ ಕಾಣ್ತಾ ಇದೆ. ಅದರಲ್ಲೂ ಕಳೆದ 1 ವರ್ಷದಿಂದ ಕಿಮ್ ಜಾಂಗ್ ಉನ್ ಬಳಿ ಸಾಕಷ್ಟು ಕ್ಷಿಪಣಿಗಳ, ಸಾಲು ಸಾಲು ಪರೀಕ್ಷೆ ನಡೆದಿದೆ. 2022 ರಿಂದ ಈವರೆಗೆ ಉತ್ತರ ಕೊರಿಯಾ, 100ಕ್ಕೂ ಹೆಚ್ಚು ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿದ್ದು, ಅವುಗಳಲ್ಲಿ ಬಹುಪಾಲು ಅಮೆರಿಕ ಮತ್ತು ದಕ್ಷಿಣ ಕೊರಿಯಾ ದೇಶಗಳನ್ನು ಟಾರ್ಗೆಟ್ ಮಾಡಿ ದಾಳಿ ನಡೆಸುವ ಸಾಮರ್ಥ್ಯ ಇರುವ ಮಿಸೈಲ್‌ಗಳೇ ಆಗಿವೆ ಎಂಬುದು ವಿಶೇಷ.
3ನೇ ಮಹಾಯುದ್ಧ ಫಿಕ್ಸ್?
ಕಿಮ್ ಜಾಂಗ್ ಉನ್ ಪಟಾಲಂ ಬಳಿ ಇರುವ ಮಿಸೈಲ್‌ಗಳು ಭಯಾನಕವಾಗಿವೆ. ಈ ಕ್ಷಿಪಣಿ, ಅಥವಾ ಮಿಸೈಲ್‌ಗಳು ಹೇಗಿವೆ ಅಂದ್ರೆ ಅಮೆರಿಕದ ಪ್ರಮುಖ ನಗರಗಳ ಮೇಲೆ ಕ್ಷಣಮಾತ್ರದಲ್ಲಿ ದಾಳಿ ಮಾಡುವ ಸಾಮರ್ಥ್ಯ ಇದೆ. ಹಾಗೆಯೇ ಯುರೋಪ್ ದೇಶಗಳಿಗೂ ಹೊಸ ಕ್ಷಿಪಣಿಯಿಂದ ಭಯ ಶುರುವಾಗಿದೆ. ಕಿಮ್ ಜಾಂಗ್ ಉನ್ ದಕ್ಷಿಣ ಕೊರಿಯಾ, ಅಮೆರಿಕ, ಜಪಾನ್ ಜೊತೆ ಯುರೋಪ್ ದೇಶಗಳನ್ನೂ ಟಾರ್ಗೆಟ್ ಮಾಡಿ ಕ್ಷಿಪಣಿ ಪರೀಕ್ಷೆ ನಡೆಸುತ್ತಿರುವ ಆರೋಪವು ಕೇಳಿಬರುತ್ತಿದೆ. ಹೀಗಾಗಿ ದೂರದ ದೇಶಗಳಲ್ಲೂ ಈಗ ನಡುಕ ಶುರುವಾಗಿದ್ದು, ಅಕಸ್ಮಾತ್ ಈ ಸರ್ವಾಧಿಕಾರಿ ಭಯಾನಕ ಅಸ್ತ್ರಗಳನ್ನು ಪ್ರಯೋಗ ಮಾಡಿದರೆ 3ನೇ ಮಹಾಯುದ್ಧವೇ ಫಿಕ್ಸ್ ಎಂಬಂತಾಗಿದೆ!












Click it and Unblock the Notifications