ಟೋಕಿಯೋದಲ್ಲಿ ವಿಮಾನಗಳ ನಡುವೆ ಡಿಕ್ಕಿ: ಹೊತ್ತಿ ಉರಿದ ವಿಮಾನ

ಟೋಕಿಯೋ-ಹನೇಡಾ ವಿಮಾನ ನಿಲ್ದಾಣದಲ್ಲಿ ರನ್‌ವೇಯಲ್ಲಿ ಕೋಸ್ಟ್ ಗಾರ್ಡ್ ವಿಮಾನಕ್ಕೆ ಡಿಕ್ಕಿ ಹೊಡೆದ ನಂತರ ಜಪಾನ್ ಏರ್‌ಲೈನ್ಸ್ ಪ್ರಯಾಣಿಕ ವಿಮಾನವು ಬೆಂಕಿಗೆ ಆಹುತಿಯಾಗಿದೆ. ಎಲ್ಲಾ 367 ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.

ಟೋಕಿಯೊದ ಹನೆಡಾ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಬೆಂಕಿ ಹೊತ್ತಿಕೊಂಡಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ಯ ಭಾರಿ ವೈರಲ್ ಆಗಿದೆ.

Japan Airlines Plane in Flames on Tokyo Haneda Airport Runway

ಬ್ರಾಡ್‌ಕಾಸ್ಟರ್ ಎನ್‌ಹೆಚ್‌ಕೆಯಲ್ಲಿನ ಚಿತ್ರಗಳು ವಿಮಾನವು ರನ್‌ವೇ ಉದ್ದಕ್ಕೂ ಚಲಿಸುತ್ತಿರುವುದನ್ನು ತೋರಿಸಿದೆ, ಅದರ ಕೆಳಗಿನಿಂದ ಜ್ವಾಲೆಯ ಸ್ಫೋಟವು ಸಿಡಿದಿದೆ.

ಘಟನೆಯ ಕಾರಣವು ತಕ್ಷಣವೇ ಸ್ಪಷ್ಟವಾಗಿಲ್ಲ, ಆದರೆ ಟೆಲಿವಿಷನ್ ವರದಿಗಳು ಏರ್‌ಬಸ್ ಕೋಸ್ಟ್‌ಗಾರ್ಡ್ ವಿಮಾನಕ್ಕೆ ಡಿಕ್ಕಿ ಹೊಡೆದಿದ್ದು, ದುರಂತಕ್ಕೆ ಕಾರಣ ಎಂದು ಹೇಳಲಾಗಿದೆ.

ವಿಮಾನ ನಿಲ್ದಾಣದಲ್ಲಿ ಮತ್ತೊಂದು ವಿಮಾನಕ್ಕೆ ಡಿಕ್ಕಿ ಹೊಡೆದ ನಂತರ ಸುಮಾರು 367 ಪ್ರಯಾಣಿಕರನ್ನು ವಿಮಾನದಿಂದ ಸ್ಥಳಾಂತರಿಸಲಾಗಿದೆ. ಪ್ರತಿಕ್ರಿಯೆಗೆ ಅಧಿಕಾರಿಗಳು ತಕ್ಷಣ ಲಭ್ಯವಾಗಿಲ್ಲ ಎಂದು ಹೇಳಲಾಗಿದೆ.

ಟೆಲಿವಿಷನ್ ದೃಶ್ಯಾವಳಿಗಳು ಕಿಟಕಿಗಳಿಂದ ಜ್ವಾಲೆಗಳು ಮತ್ತು ರಕ್ಷಣಾ ಕಾರ್ಯಕರ್ತರು ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ರನ್‌ವೇಯಲ್ಲೂ ಭಗ್ನಾವಶೇಷಗಳು ಸುಟ್ಟು ಕರಕಲಾಗಿವೆ.

ಭೂಕಂಪದ ಬೆನ್ನಲ್ಲೇ ಜಪಾನ್‌ಗೆ ಆಘಾತ

ಹೊಸ ವರ್ಷದ ಸಂಭ್ರಮದ ದಿನವೇ ಜಪಾನ್ ಭೂಕಂಪದಿಂದ ತತ್ತರಿಸಿತ್ತು. ಸುನಾಮಿ ಎಚ್ಚರಿಕೆಯನ್ನು ಕೂಡ ನೀಡಲಾಗಿತ್ತು. ಭೂಕಂಪದಲ್ಲಿ 30ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಭೂಕಂಪದ ಆಘಾತದಿಂದ ಸುಧಾರಿಸಿಕೊಳ್ಳುವ ಮುನ್ನವೇ ವಿಮಾನ ಬೆಂಕಿಗೆ ಆಹುತಿಯಾಗಿದ್ದು, ಸದ್ಯ ಏರ್‍‌ಪೋರ್ಟ್‌ನಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಅವಶೇಷಗಳನ್ನು ತೆರವು ಮಾಡಿದ ಬಳಿಕ, ಮತ್ತೆ ವಿಮಾನ ಹಾರಾಟಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+