ದೆಹಲಿ ಮೆಟ್ರೋ ಅಸಭ್ಯ ದೃಶ್ಯಗಳನ್ನು ಮೀರಿಸಿದ ಜಪಾನ್ ಜೋಡಿ: ಛೀ.. ಥೂ... ಎಂದ ನೆಟ್ಟಿಗರು... ವಿಡಿಯೋ ವೈರಲ್
ಮೆಟ್ರೋ ಪ್ರಯಾಣಿಕರಿಗೆ ತ್ವರಿತ ಹಾಗೂ ಆರಾಮದಾಯಕ ಸೇವೆಯನ್ನು ಒದಗಿಸುತ್ತದೆ. ಆದರೆ ಪ್ರಯಾಣಿಕರಿಗೆ ಮೆಟ್ರೋ ಪ್ರಯಾಣಿಸಲು ಮಾತ್ರ ಬಳಕೆಯಾಗುತ್ತಿಲ್ಲ. ಬದಲಿಗೆ ರೀಲ್ಸ್ ಮಾಡಲು, ಮೈಮರೆತು ಪ್ರಯಾಣಿಸಲು, ಅಡುಗೆ ಮಾಡಲು ಅಲ್ಲದೆ ಮತ್ತಿತರ ಕಾರಣಗಳಿಗೂ ಬಳಕೆಯಾಗುತ್ತಿದೆ.
ಹೀಗೆ ದೆಹಲಿ ಮೆಟ್ರೋದಲ್ಲಿ ಹಲವು ಅಸಭ್ಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಇವುಗಳಲ್ಲಿ ಕೆಲವೊಂದು ನೋಡಲು ಕೂಡ ಯೋಗ್ಯವಾಗಿರುವುದಿಲ್ಲ. ಯುವ ಜೋಡಿಗಳಿಂದ ಹಿಡಿದು ಮೆಟ್ರೋದಲ್ಲಿ ಮೂತ್ರ ವಿಸರ್ಜನೆಯವರೆಗೂ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ.

ಹೀಗೆ ಒಂದಲ್ಲಾ ಎರಡಲ್ಲ ಮೆಟ್ರೋದಲ್ಲಿ ವಿಚಿತ್ರವಾದ ಕೆಲಸಗಳು ನಡೆಯುತ್ತಲೇ ಇರುತ್ತವೆ. ಆದರೆ ಈಗ ದೆಹಲಿ ಮೆಟ್ರೋ ಇತರ ಮೆಟ್ರೋಗಳ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆ. ಇತ್ತೀಚೆಗೆ ಮತ್ತೊಂದು ವೀಡಿಯೊ ವೈರಲ್ ಆಗುತ್ತಿದೆ ಇದು ಜಪಾನ್ ಮೆಟ್ರೋದ್ದು ಎಂದು ಹೇಳಲಾಗಿದೆ.
Delhi Metro की अपार सफलता के बाद
— HasnaZarooriHai🇮🇳 (@HasnaZaruriHai) November 14, 2023
पेश है Japan Metro की झांकी
😂😂😂😂😂😂😂 pic.twitter.com/UO7ypmCCf8
ವೈರಲ್ ಆಗಿರುವ ವಿಡಿಯೋದಲ್ಲಿ ಮೆಟ್ರೋ ಸೀಟಿನ ಮೇಲೆ ಯುವ ಜೋಡಿ ಕುಳಿತಿರುವುದನ್ನು ಕಾಣಬಹುದು. ವೈರಲ್ ದೃಶ್ಯದಲ್ಲಿ ಯುವ ಜೋಡಿ ಅಸಭ್ಯವಾಗಿ ವರ್ತಿಸಿರುವುದನ್ನು ಕಾಣಬಹುದು. ಸಹ ಪ್ರಯಾಣಿಕರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ವಿಡಿಯೋ ಎಲ್ಲಿಂದ ಬಂದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಇದು ಜಪಾನ್ ಮೆಟ್ರೋಗೆ ಸೇರಿದೆ ಎಂದು ವರದಿಯಾಗಿದೆ. ಯಾಕೆಂದರೆ ಮೆಟ್ರೋ ಸೀಟ್ ಮೇಲೆ ಬರೆದ ಅಕ್ಷರಗಳು ಹಿಂದಿ ಅಥವಾ ಇಂಗ್ಲೀಷ್ ಭಾಷೆಯಲ್ಲಿ ಇಲ್ಲ.
ದೆಹಲಿ ಮೆಟ್ರೋದಲ್ಲಿ ಕಾಣಿಸಿಕೊಳ್ಳುತ್ತಿದ್ದ ಇಂಥಹ ದೃಶ್ಯಗಳು ಸದ್ಯ ಜಪಾನ್ ಮೆಟ್ರೋದಲ್ಲೂ ಕಾಣಿಸಿಕೊಳ್ಳುತ್ತಿದ್ದು ಇದರ ಝಲಕ್ ಇಲ್ಲಿದೆ ಎಂದು ವೀಡಿಯೊದ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ವೀಡಿಯೊ ಪ್ರಕಾರ ಇದು ಜಪಾನ್ ಮೆಟ್ರೋದ ದೃಶ್ಯವಾಗಿದೆ. ಈ ವಿಡಿಯೋವನ್ನು 1,30,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋ ನೋಡಿದ ಹಲವರು ಸಾರ್ವಜನಿಕ ಸ್ಥಳದಲ್ಲಿ ಇದನ್ನು ಹೇಗೆ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೀಡಿಯೋ ನೋಡಿದ ಹಲವರು ಇದು ದೆಹಲಿ ಮೆಟ್ರೋದಿಂದ ಬಂದದ್ದು ಎಂದು ಭಾವಿಸಿದ್ದಾರೆ. ದೆಹಲಿ ಮೆಟ್ರೋದಲ್ಲಿ ಇದೆಲ್ಲ ಯಾವಾಗ ನಿಲ್ಲುತ್ತದೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಅದರ ಪಕ್ಕದ ಸೀಟು ಕೂಡ ಖಾಲಿ ಇದೆ, ಅಲ್ಲಿ ಸಭ್ಯವಾಗಿ ಕುಳಿತು ಪ್ರಯಾಣ ಮಾಡಬಹುದು. ಆದರೂ ಜನ ಹೇಗೆ ಹೀಗೆ ವರ್ತಿಸುತ್ತಾರೆ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ದೆಹಲಿ ಮೆಟ್ರೋ ಎಲ್ಲದಕ್ಕೂ ಕುಖ್ಯಾತಿ ಪಡೆದಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ. ಅಂತಹ ವಿಷಯಗಳಲ್ಲಿ ಜಪಾನ್ ಕುಖ್ಯಾತವಾಗಿದೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.












Click it and Unblock the Notifications