2023ರಲ್ಲಿ ವಿಶ್ವದ ಉತ್ತಮ & ಕಳಪೆ ಸೇವೆ ನೀಡಿದ ವಿಮಾನ ನಿಲ್ದಾಣಗಳಿವು-ಮಾಹಿತಿ ತಿಳಿಯಿರಿ
2023 ಮುಗಿದು 2024ಕ್ಕೆ ದಾಪುಗಾಲಿಡಲು ಇನ್ನು ಕೆಲವೇ ದಿನಗಳು ಮಾತ್ರ ಬಾಕಿಯಿದೆ. ಆದರೆ 2023ರಲ್ಲಿ ಇಲ್ಲಿಯವರೆಗೂ ಏನೆಲ್ಲ ಆಗಿವೆ, ಒಳ್ಳೆಯ ವಿಚಾರಗಳೇ ಆಗಿರಬಹುದು ಅಥವಾ ಕೆಟ್ಟ ಘಟನೆಗಳೇ ಆಗಿರಬಹುದು ಅವುಗಳನ್ನು ಸಂಗ್ರಹ ಮಾಡಲೇಬೇಕಾಗುತ್ತದೆ. ಹಾಗೆಯೇ 2023ರಲ್ಲಿ ವಿಶ್ವದ ಯಾವೆಲ್ಲ ವಿಮಾನ ನಿಲ್ದಾಣಗಳು ಉತ್ತಮ ಮತ್ತು ಕಳಪೆ ಸ್ಥಾನವನ್ನು ಪಡೆದಿವೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ವಿಮಾನ ನಿಲ್ದಾಣದಲ್ಲಿ ವಿಮಾನಯಾನ ವಿಳಂಬ ಆಗಿರುವುದು, ಸೇವೆಯಲ್ಲಿ ಸಮಸ್ಯೆ ಆಗಿರುವುದು, ತಾಂತ್ರಿಕ ಸೇವೆಗಳ ಕೊರತೆ, ಹೀಗೆ ಅನೇಕ ವಿಚಾರಗಳನ್ನು ಆಧಾರದ ಮೇಲೆ ಈ ಪಟ್ಟಿಯನ್ನು ಮಾಡಲಾಗಿದೆ ಅಂತಾ ಬಿಸಿನೆಸ್ ಸ್ಟಾಂಡರ್ಡ್ ವರದಿ ಮಾಡಿದೆ. ಜನವರಿ 1 ರಿಂದ ಸೆಪ್ಟೆಂಬರ್ 30ರವರೆಗೆ ಸಂಗ್ರಹಿಸಿದ ದತ್ತಂಶಗಳ ಪ್ರಕಾರ ಇದನ್ನು ತಿಳಿಸಲಾಗಿದೆ. 15,800ಕ್ಕೂ ಹೆಚ್ಚು ಪ್ರಯಾಣಿಕರಲ್ಲಿ ಈ ಬಗ್ಗೆ ಅಭಿಪ್ರಾಯವನ್ನು ಸಂಗ್ರಹ ಮಾಡಲಾಗಿದೆ.

ಈ ಪ್ರಕಾರ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣವು ಓಮನ್‌ನ ಮಸ್ಕತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೇಳಲಾಗಿದೆ. 2 ಮತ್ತು 3ನೇ ಸ್ಥಾನದಲ್ಲಿ ಬ್ರೆಜಿಲ್‌ನ ರೆಸಿಫ್-ಗುರಾರಾಪ್ಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ. ಜಪಾನ್ ಮತ್ತು ಬ್ರೆಜಿಲ್ ವಿಮಾನ ನಿಲ್ದಾಣದ ಕಾರ್ಯಕ್ಷಮತೆ ಉತ್ತಮವಾಗಿದೆ ಎಂದು ಹೇಳಿದೆ. ಆದರೆ ಭಾರತ ಈ ಪಟ್ಟಿಯಲ್ಲಿ ಇಲ್ಲ ಎನ್ನುವುದೇ ಅಸಮಾಧನಕರ ಸಂಗತಿಯಾಗಿದೆ. ಬಿಸಿನೆಸ್ ಸ್ಟಾಂಡರ್ಡ್ ವರದಿ ಪ್ರಕಾರ ಪಟ್ಟಿ ಹೀಗಿದೆ.
ವಿಶ್ವದ ಉತ್ತಮ ವಿಮಾನ ನಿಲ್ದಾಣಗಳು
* ಮಸ್ಕತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ - ಓಮನ್
* ರೆಸಿಫ್/ಗ್ವಾರಾರಾಪ್ಸ್-ಗಿಲ್ಬರ್ಟೊ ಫ್ರೈರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ - ಬ್ರೆಜಿಲ್
* ಕೇಪ್ ಟೌನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ - ದಕ್ಷಿಣ ಆಫ್ರಿಕಾ
* ಬ್ರೆಸಿಲಿಯಾ-ಅಧ್ಯಕ್ಷ ಜಸ್ಸೆಲಿನೊ ಕುಬಿಟ್‌ಚೆಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ - ಬ್ರೆಜಿಲ್
* ದೋಹಾ ಹಮದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ - ಕತಾರ್
* ಒಸಾಕಾ ಇಟಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ - ಜಪಾನ್
* ಬೆಲೆಮ್/ವಾಲ್-ಡಿ-ಕಾನ್ಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ - ಬ್ರೆಜಿಲ್
* ಬೆಲೊ ಹಾರಿಜಾಂಟೆ ಟ್ಯಾಂಕ್ರೆಡೊ ನೆವೆಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ - ಬ್ರೆಜಿಲ್
* ಟೋಕಿಯೋ ನರಿಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ - ಜಪಾನ್
* ಅಮಾಮಿ ವಿಮಾನ ನಿಲ್ದಾಣ - ಜಪಾನ್
ವಿಶ್ವದ 10 ಕಳಪೆ ಸೇವೆ ನೀಡಿದ ವಿಮಾನ ನಿಲ್ದಾಣಗಳು
* ಬಂಜರ್ಮಸಿನ್ ಶ್ಯಾಮ್ಸುದಿನ್ ನೂರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ -ಇಂಡೋನೇಷ್ಯಾ (BDJ)
* ಮಾಲ್ಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
* ಲಂಡನ್ ಗ್ಯಾಟ್ವಿಕ್ ವಿಮಾನ ನಿಲ್ದಾಣ - ಯುಕೆ
* ಲಿಸ್ಬನ್ ಹಂಬರ್ಟೊ ಡೆಲ್ಗಾಡೊ ವಿಮಾನ ನಿಲ್ದಾಣ - ಪೋರ್ಚುಗಲ್
* ಬೆಲ್‌ಗ್ರೇಡ್ ನಿಕೋಲಾ ಟೆಸ್ಲಾ ವಿಮಾನ ನಿಲ್ದಾಣ
* ಡೆನ್‌ಪಾಸರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ - ಬಾಲಿ
* ಟೊರೊಂಟೊ ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
* ಸೋಫಿಯಾ ವಿಮಾನ ನಿಲ್ದಾಣ - ಬಲ್ಗೇರಿಯಾ
* ಮಾರ್ಸಿಲ್ಲೆ ಪ್ರೊವೆನ್ಸ್ ವಿಮಾನ ನಿಲ್ದಾಣ - ಫ್ರಾನ್ಸ್
* ಹಲೀಮ್ ಪೆರ್ದನಕುಸುಮಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ - ಇಂಡೋನೇಷ್ಯಾ












Click it and Unblock the Notifications