Earthquake: ಬೆಳ್ಳಂಬೆಳಗ್ಗೆ ಇಂಡೋನೇಷ್ಯಾದಲ್ಲಿ ಅತ್ಯಧಿಕ ತೀವ್ರತೆಯ ಭೂಕಂಪ
ಬೆಂಗಳೂರು, ಜನವರಿ 09: ಜಪಾನ್ ದೇಶದಲ್ಲಿನ ತೀವ್ರ ಸ್ವರೂಪ ಭೂಕಂಪ ಸಂಭವಿಸಿತ್ತು. ಅದು ಮಾಸುವ ಮುನ್ನವೇ ಮತ್ತೊಂದು ಅಧಿಕ ತೀವ್ರತೆಯ ಭೂಕಂಪ ಮಂಗಳವಾರ ನಸುಕಿನ ಜಾವ ಇಂಡೋನೇಷ್ಯಾಯಾದಲ್ಲಿ ಜರುಗಿದೆ.
ಹೌದು, ಮಂಗಳವಾರ ಬೆಳಗ್ಗೆ 2.18 ಗಂಟೆಗೆ 6.7 ರ ತೀವ್ರತೆಯ ಭೂಕಂಪವು ಇಂಡೋನೇಷಿಯಾದಲ್ಲಿ ತಲೌಡ್ ದ್ವೀಪಗಳಲ್ಲಿ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಅಧಿಕೃತ ಮಾಹಿತಿ ನೀಡಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ತನ್ನ ಸಾಮಾಜಿಕ ಜಾಲತಾಣ x ನಲ್ಲಿ ಪೋಸ್ಟ್ ಮಾಡಿದ್ದು, ಜನವರಿ 9 ರಂದು 6.7 ತೀವ್ರತೆಯ ಭೂಕಂಪ ದಾಖಲಾಗಿದೆ. ಇದರ ಲ್ಯಾಟ್ 4.75 ರಷ್ಟಿದ್ದು, ಮತ್ತು ಉದ್ದವು 126.38 ಉದ್ದವಿದೆ. ಭೂಮಿಯ ಆಳಕ್ಕೆ ಸುಮಾರು 80 ಕಿಮೀ ನಷ್ಟು ಇದರ ತೀವ್ರತೆ ಕಂಡು ಬಂದಿದೆ ಎಂದು ತಿಳಿಸಿದೆ.
ಹೊಸ ವರ್ಷಕ್ಕೆ ಜಪಾನ್‌ಗೆ ಭೂಕಂಪ: ಆಘಾತ
ಒಂದು ವಾರದ ಹಿಂದೆ ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪವಾಗಿತ್ತು. ಇದರ ಪರಿಣಾಮದಿಂದ ಇಲ್ಲಿ ಸಾವನ್ನಪ್ಪಿರುವ ಸಂಖ್ಯೆ 128 ರಿಂದ 161 ಕ್ಕೆ ಏರಿದೆ ಎಂದು ಅಲ್ಲಿನ ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ.

ಭೂಕಂಪದಿಂದ ಹಾನಿಗೊಳಗಾದ ಮಧ್ಯ ಇಶಿಕಾವಾ ಪ್ರದೇಶದ ಅಧಿಕಾರಿಗಳ ಪ್ರಕಾರ, ಲೆಕ್ಕಕ್ಕೆ ಸಿಗದ ಜನರ ಸಂಖ್ಯೆ 195 ರಿಂದ 103ಕ್ಕೆ ಇಳಿಕೆ ಆಗಿದೆ. ಇಲ್ಲಿ ಅನೇಕ ಕಟ್ಟಡಗಳು ಉರುಳಿವೆ, ದೊಡ್ಡ ಬೆಂಕಿಯನ್ನು ಹುಟ್ಟು ಹಾಕಿತ್ತು.
ಜಪಾನ್‌ನಾದ್ಯಂತ ಸಾವಿರಾರು ರಕ್ಷಣಾ ತಂಡ ರಚಿಸಲಾಗಿದೆ. ಭೂಕಂಪದಿಂದ ಅಂದಾಜು 1,000 ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಇಲ್ಲಿನ ಜನರ ಜೀವನ ದುಸ್ತರವಾಗಿದೆ. ಕಳೆದ ಎರಡು ದಿನಗಳಲ್ಲಿ, ಈ ಪ್ರದೇಶವು ಹಿಮದಿಂದ ಆವೃತವಾಗಿದ್ದು, ಕಾರ್ಯಾಚರಣೆಯನ್ನು ಇನ್ನೂ ಕಷ್ಟಕರವಾಗಿಸಿದೆ ಎಂದು ತಿಳಿದು ಬಂದಿದೆ.












Click it and Unblock the Notifications