Japan earthquake: ಜಪಾನ್‌ನಲ್ಲಿ 6.6 ತೀವ್ರತೆಯ ಭೂಕಂಪ: ಕರಾವಳಿ ಪ್ರದೇಶದಲ್ಲಿ ಸುನಾಮಿ ಎಚ್ಚರಿಕೆ!

ಭಾರತದಲ್ಲಿ ಮಾತ್ರವಲ್ಲದೆ ಜಪಾನ್‌ನಲ್ಲೂ 6.6 ತೀವ್ರತೆಯ ಭೂಕಂಪ ಸಂಭವಿಸಿದೆ. ಬಳಿಕ ಪೂರ್ವ ಜಪಾನ್ ಕರಾವಳಿ ಪ್ರದೇಶದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಜಪಾನ್‌ನ ಪೂರ್ವ ಕರಾವಳಿಯಲ್ಲಿ 6.6 ತೀವ್ರತೆಯ ಭೂಕಂಪ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಸುನಾಮಿ ಎಚ್ಚರಿಕೆಯು ಮುಂದಿನ ಒಂದು ಗಂಟೆಯಲ್ಲಿ ಕೋಮಾ ತೀರಕ್ಕೆ ಬರುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. 1 ಮೀಟರ್ ವರೆಗೆ ಎತ್ತರದ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ.

Japan earthquake: Tsunami warning for coastal areas!

ತೊರಿಶಿಮಾ ದ್ವೀಪದ ಬಳಿ ಬೆಳಗ್ಗೆ 11 ಗಂಟೆಗೆ ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಭೂಕಂಪದ ಕೇಂದ್ರಬಿಂದುವು ಜಪಾನ್‌ನ ಟೋಕಿಯೊದಿಂದ ದಕ್ಷಿಣಕ್ಕೆ 550 ಕಿ.ಮೀ ದೂರದಲ್ಲಿ ಪೆಸಿಫಿಕ್ ಸಾಗರದಲ್ಲಿದೆ. ಇದರಿಂದಾಗಿ ದೇಶದ ಪೂರ್ವ ಕರಾವಳಿಯ ಇಝು ಪೆನಿನ್ಸುಲಾದಲ್ಲಿರುವ ದ್ವೀಪಗಳಿಗೆ 1 ಮೀಟರ್ ಎತ್ತರದ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ.

ಪೆಸಿಫಿಕ್ ಕರಾವಳಿಯ ಪ್ರದೇಶಗಳು 20 ಸೆಂಟಿಮೀಟರ್‌ಗಳವರೆಗೆ ಸಮುದ್ರ ಮಟ್ಟದಲ್ಲಿ ಸ್ವಲ್ಪ ಬದಲಾವಣೆಗಳನ್ನು ಕಾಣಬಹುದು ಎನ್ನಲಾಗಿದೆ.

ಭಾರತದಲ್ಲಿ ಹಲವೆಡೆ ಭೂಕಂಪ:-

ಗುರುವಾರ ಮುಂಜಾನೆ ಉತ್ತರಾಖಂಡದ ಉತ್ತರಕಾಶಿಯಲ್ಲಿ 3.2 ತೀವ್ರತೆಯ ಭೂಕಂಪ ಸಂಭವಿಸಿದ್ದು ಜನ ಆತಂಕಗೊಂಡಿದ್ದಾರೆ. ಇಂದು ಬೆಳಗಿನ ಜಾವ 3:49ಕ್ಕೆ 5 ಕಿಮೀ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ಎಕ್ಸ್ (ಹಿಂದಿನ ಟ್ವಿಟರ್) ಪೋಸ್ಟ್‌ನಲ್ಲಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಮಾಹಿತಿ ಹಂಚಿಕೊಂಡಿದೆ.

ರಾಜ್ಯದಲ್ಲಿ 48 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ದಾಖಲಾದ ಎರಡನೇ ಭೂಕಂಪ ಇದಾಗಿದೆ. ಮಂಗಳವಾರ ಪಿಥೋರಗಢದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಅದೇ ದಿನ ನೇಪಾಳದಲ್ಲಿ ಸರಣಿ ನಾಲ್ಕು ಭೂಕಂಪಗಳು ಸಂಭವಿಸಿದೆ. ಅತ್ಯಂತ ಶಕ್ತಿಶಾಲಿ ಭೂಕಂಪದ ಕೇಂದ್ರಬಿಂದು ಉತ್ತರಾಖಂಡದ ಜೋಶಿಮಠದ ಆಗ್ನೇಯಕ್ಕೆ 206 ಕಿಮೀ ಮತ್ತು ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ 284 ಕಿಮೀ ಉತ್ತರದಲ್ಲಿದೆ.

ದೆಹಲಿ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಈ ಭೂಕಂಪದ ಕಂಪನದ ಅನುಭವವಾಗಿದೆ.

ಎನ್‌ಸಿಎಸ್‌ನ ಅಧಿಕಾರಿಯ ಪ್ರಕಾರ, ಮಂಗಳವಾರ ನೇಪಾಳದ ಭೂಕಂಪಗಳ ಅನುಕ್ರಮ ಹೀಗಿದೆ- ಪಶ್ಚಿಮ ನೇಪಾಳದಲ್ಲಿ ಮಧ್ಯಾಹ್ನ 2:25ರ ಸುಮಾರಿಗೆ 10 ಕಿಲೋಮೀಟರ್ ಆಳದಲ್ಲಿ 4.6 ತೀವ್ರತೆಯ ಭೂಕಂಪ ಆಯಿತು. ಇದರ ನಂತರ ಮಧ್ಯಾಹ್ನ 2:51 ಕ್ಕೆ 6.2 ತೀವ್ರತೆಯ ಮತ್ತೊಂದು ಕಂಪನ ಸಂಭವಿಸಿದೆ. ತರುವಾಯ, ಅದೇ ಪ್ರದೇಶದಲ್ಲಿ 3.6 ಮತ್ತು 3.1 ತೀವ್ರತೆಯ ಎರಡು ಕಂಪನಗಳು ಕ್ರಮವಾಗಿ 15 ಕಿಮೀ ಮತ್ತು 10 ಕಿಮೀ ಆಳದಲ್ಲಿ ಮಧ್ಯಾಹ್ನ 3:06 ಮತ್ತು 3:19 ಕ್ಕೆ ಸಂಭವಿಸಿದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+