Nuclear Waste: ಮೀನುಗಳ ಒಳಗೆ ವಿಷಕಾರಿ ಪರಮಾಣು ಅಂಶ?
ಮನುಷ್ಯ ಪ್ರಕೃತಿ ಮೇಲೆ ನಡೆಸುತ್ತಿರುವ ದೌರ್ಜನ್ಯಗಳ ಪರಿಣಾಮ ಅವನೇ ಸಾಯುವ ಸ್ಥಿತಿ ಬಂದಿದೆ. ಹೀಗೆ ಪ್ರಕೃತಿ ಮಾತೆ ಅದೆಷ್ಟೇ ಶಿಕ್ಷೆ ಕೊಟ್ಟರೂ ಮನುಷ್ಯ ಬದಲಾಗುತ್ತಿಲ್ಲ. ಈ ನಡುವೆ ಮತ್ತೆ ಮತ್ತೆ ತಾನು ಮಾಡಿದ ತಪ್ಪನ್ನೇ ಮಾಡುತ್ತಿದ್ದಾನೆ ಮಾನವ. ಭೂಮಿಯನ್ನ ನಾಶ ಮಾಡಬಲ್ಲ ಪರಮಾಣು ಸ್ಥಾವರಗಳ ಜೊತೆ ಆಟ ಮುಂದುವರಿದಿದ್ದು ವಿಜ್ಞಾನಿಗಳು ಅಲರ್ಟ್ ಆಗಿ ಜಪಾನ್ ಸಮುದ್ರಕ್ಕೆ ಧುಮುಕಿದ್ದಾರೆ!
ಜಪಾನ್ ಫುಕೋಶಿಮಾ ಪರಮಾಣು ವಿದ್ಯುತ್ ಸ್ಥಾವರದ ಸಂಸ್ಕರಿಸಿದ ತ್ಯಾಜ್ಯ ನೀರನ್ನ ಫೆಸಿಫಿಕ್ ಮಹಾ ಸಾಗರಕ್ಕೆ ಬಿಡ್ತಿದೆ. ಜಪಾನ್ ಸರ್ಕಾರ ಈಗಾಗಲೇ 2ನೇ ಹಂತದ ಕಾರ್ಯಾಚರಣೆ ಕೂಡ ಮುಗಿಸಿದೆ. ಇದರಿಂದ ಸಮುದ್ರ ನೀರಿನಲ್ಲಿಯೂ ಪರಮಾಣು ತ್ಯಾಜ್ಯ ಸೇರಿ, ವಿಕಿರಣ ಸಮಸ್ಯೆ ಉಂಟಾಗುವ ಭೀತಿ ಎದುರಾಗಿದೆ. 7,800 ಹಾಗೂ 7,800 ಟನ್ ಅಣು ತ್ಯಾಜ್ಯದ ನೀರನ್ನ 2 ಹಂತದಲ್ಲಿ ರಿಲೀಸ್ ಮಾಡಿದೆ ಜಪಾನ್. ಈಗ ಅಣುತ್ಯಾಜ್ಯ ಮೀನುಗಳ ಮೇಲೆ ಪರಿಣಾಮ ಬೀರಿರುವ ಸಾಧ್ಯತೆ ಇದ್ದು, ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ಆರಂಭಿಸಿದ್ದಾರೆ.

ಮೀನುಗಳ ಹೊಟ್ಟೆ ಸೇರಿದ ಪರಮಾಣು?
ಅಂದಹಾಗೆ ಸಂಸ್ಕರಿಸಿದ ವಿಕಿರಣಶೀಲ ತ್ಯಾಜ್ಯ ನೀರನ್ನು ಸಮುದ್ರಕ್ಕೆ ರಿಲೀಸ್ ಮಾಡಿದ ಬಳಿಕ, ಇದೇ ಮೊದಲ ಬಾರಿ ಜಪಾನ್ ಫುಕುಶಿಮಾ ಪರಮಾಣು ವಿದ್ಯುತ್ ಸ್ಥಾವರದ ಬಳಿಯ ಬಂದರು ಪಟ್ಟಣಕ್ಕೆ ವಿಜ್ಞಾನಿಗಳು ಭೇಟಿ ನೀಡಿದ್ದರು. ಹೀಗೆ ಬಂದ ವಿಜ್ಞಾನಿಗಳು ಮೀನಿನ ಮಾದರಿ ಸಂಗ್ರಹಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಚೀನಾ, ದಕ್ಷಿಣ ಕೊರಿಯಾ ಹಾಗೂ ಕೆನಡಾದ ವಿಜ್ಞಾನಿಗಳು ಪರಿಶೀಲನೆ ಆರಂಭಿಸಿದ್ದಾರೆ. ಹೀಗೆ ಜಪಾನ್ ಬಿಟ್ಟಿರುವ ಪರಮಾಣು ತ್ಯಾಜ್ಯ ನೀರು ಯಾವ ರೀತಿ ಪರಿಣಾಮ ಬೀರಿದೆ ಎಂಬ ಬಗ್ಗೆ ಪರಿಶೀಲನೆ ಶುರುವಾಗಿದೆ.
ಮಾನವನ ಸಾವಿಗೂ ಕಾರಣವಾಗುತ್ತದೆ ವಿಕಿರಣ!
ಪರಮಾಣು ವಿಕಿರಣಗಳೇ ನ್ಯೂಕ್ಲಿಯರ್ ಬಾಂಬ್‌ನಲ್ಲಿ ಪ್ರಮುಖ ಆಯುಧ. ಈ ಕಾರಣಕ್ಕೇ, ಮಾನವ ಪರಮಾಣು ಸ್ಥಾವರದಿಂದ ವಿದ್ಯುತ್ ತಯಾರಿಕೆ ನಿಲ್ಲಿಸಲಿ ಎಂಬ ಸಲಹೆಯನ್ನೂ ಕೊಡ್ತಾರೆ ವಿಜ್ಞಾನಿಗಳು. ಇಷ್ಟಾದರೂ ಜಗತ್ತಿನ ಪ್ರತಿಯೊಂದು ದೇಶ ಕೂಡ, ನ್ಯೂಕ್ಲಿಯರ್ ಮೇಲೆ ತನ್ನ ವ್ಯಾಮೋಹ ಬಿಡುತ್ತಿಲ್ಲ. ಹೀಗೆ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿದ್ದು, ಇದೇ ರೀತಿ 2011ರಲ್ಲಿ ಭೂಕಂಪ ಸಂಭವಿಸಿ ಜಪಾನ್ ಫುಕೋಶಿಮಾ ಪರಮಾಣು ವಿದ್ಯುತ್ ಸ್ಥಾವರವು ಸ್ಫೋಟಗೊಂಡಿತ್ತು. ಅದನ್ನ ಸುಧಾರಿಸಲು ಈಗ ಜಪಾನ್ ಪರದಾಡುತ್ತಿದೆ.

ಏನಿದು ಜಪಾನ್ ಪ್ಲ್ಯಾನ್?
ಅಂದಹಾಗೆ ಮೊಲದ ಹಂತದಲ್ಲಿ ಜಪಾನ್ 7,800 ಟನ್ ಅಣು ತ್ಯಾಜ್ಯದ ನೀರನ್ನು ಸಮುದ್ರಕ್ಕೆ ರಿಲೀಸ್ ಮಾಡಿತ್ತು. ಆಗಸ್ಟ್ 24 ರಿಂದ ಸೆಪ್ಟೆಂಬರ್ 11ರವರೆಗೂ 7,800 ಟನ್ ಅಣು ತ್ಯಾಜ್ಯದ ನೀರನ್ನ ಸಮುದ್ರಕ್ಕೆ ಬಿಟ್ಟಿತ್ತು ಜಪಾನ್. ಈ ಬಗ್ಗೆ ಜಗತ್ತಿನಾದ್ಯಂತ ಆಕ್ರೋಶವೂ ಮೊಳಗಿತ್ತು. ಅಲ್ಲದೆ ಸ್ವತಃ ಜಪಾನ್ ಜನ ಕೂಡ ತಮ್ಮ ಸರ್ಕಾರದ ನಿರ್ಧಾರದ ವಿರುದ್ಧ ಬೀದಿಗಿಳಿದು ತೀವ್ರ ಹೋರಾಟ ನಡೆಸಿದ್ದರು. ಇಷ್ಟಾದರೂ ಜಪಾನ್ ತನ್ನ ಹಠ ಬಿಡುತ್ತಿಲ್ಲ. ಇದರಿಂದ ಇದೀಗ ಉಂಟಾಗುತ್ತಿರುವ ಸಮಸ್ಯೆ ಸರಿಮಾಡಲು, ನೂರಾರು ವರ್ಷಗಳೇ ಬೇಕಾಗುತ್ತೆ ಅಂತಾ ಕೆಲ ವಿಜ್ಞಾನಿಗಳು ಆರೋಪ ಮಾಡುತ್ತಿದ್ದಾರೆ.
ಎಷ್ಟೇ ಆಕ್ರೋಶ ವ್ಯಕ್ತವಾದರೂ ಪ್ರಯೋಜನಕ್ಕೆ ಬಂದಂತೆಯೇ ಕಾಣುತ್ತಿಲ್ಲ. ಹೀಗಾಗಿ ಜಪಾನ್ ಮತ್ತೊಮ್ಮೆ 7800 ಟನ್ ಅಣು ತ್ಯಾಜ್ಯದ ನೀರು ಸಮುದ್ರಕ್ಕೆ ರಿಲೀಸ್ ಮಾಡಿತ್ತು. ಸ್ಥಾವರದಲ್ಲಿ ಸಂಗ್ರಹವಾಗಿರುವ 1.34 ದಶಲಕ್ಷ ಟನ್ ಅಣು ತ್ಯಾಜ್ಯದ ನೀರನ್ನು ಮುಂದಿನ 30 ವರ್ಷಗಳ ಸಮಯದಲ್ಲಿ ಸಮುದ್ರಕ್ಕೆ ಬಿಡಲು ಪ್ಲ್ಯಾನ್ ಮಾಡಿದೆ. ಇದು ಸಮುದ್ರ ಜೀವಿಗಳ ಮೇಲೆಯು ಪ್ರಭಾವ ಬೀರಲಿದ್ದು, ಮನುಷ್ಯರಿಗೂ ಸಮಸ್ಯೆ ಎದುರಾಗಲಿದೆ. ಒಟ್ನಲ್ಲಿ ಮನುಷ್ಯ ತಾನು ಸಾಯುವುದಲ್ಲದೆ, ಭೂಮಿ ಮೇಲಿನ ಇತರ ಜೀವಿಗಳ ಮೇಲೂ ದಬ್ಬಾಳಿಕೆ ನಡೆಸುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ.












Click it and Unblock the Notifications