ಈ ರೆಸ್ಟೋರೆಂಟ್‌ನಲ್ಲಿ ದುಡ್ಡು ಕೊಟ್ಟು ಕೆನ್ನೆಗೆ ಹೊಡಿಸಿಕೊಳ್ಳುವುದೂ ಮೆನುನಲ್ಲಿದೆ: ದಂಗಾಗಿಸುವ ವಿಡಿಯೋ ವೈರಲ್!

ಗ್ರಾಹಕರನ್ನು ಸೆಳೆಯಲು ರೆಸ್ಟೋರೆಂಟ್‌ಗಳು ವಿವಿಧ ಖಾದ್ಯಗಳನ್ನು ಪ್ರಸ್ತುಪಡಿಸುತ್ತವೆ. ನಾನಾ ಬಗೆಯ ರುಚಿಯೊಂದಿಗೆ, ನೋಡಲು ಆಕರ್ಷಕವಾದ ಹಾಗೂ ಉತ್ತಮ ಸೇವೆ ನೀಡುವ ಮೂಲಕ ಗ್ರಾಹಕರನ್ನು ತಮ್ಮತ್ತ ಸೆಳೆಯುತ್ತವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವೊಂದು ನೋಡುಗರನ್ನು ಬೆಚ್ಚಿ ಬೀಳಿಸಿದೆ. ಈ ರೆಸ್ಟೋರೆಂಟ್‌ನಲ್ಲಿ ಗ್ರಾಹಕರಿಗೆ ಕಪಾಳಮೋಕ್ಷ ಮಾಡುವುದು ಮೆನುವಿನಲ್ಲಿದೆ.

ರೆಸ್ಟೋರೆಂಟ್‌ಗೆ ಬರುವ ಗ್ರಾಹಕರಿಗೆ ಮಹಿಳಾ ವೆಟರ್ ಕಪಾಳಮೋಕ್ಷ ಮಾಡುತ್ತಾರೆ. ಗ್ರಾಹಕರು ಸುಮ್ಮನೆ ಕುಳಿತು ಕೆನ್ನೆ ಕೆಂಪಾಗುವಷ್ಟು ಜೋರಾಗಿ ಹೊಡೆಸಿಕೊಳ್ಳುತ್ತಾರೆ. ಈ ವಿಡಿಯೋ ಕಂಡು ಜನ ಶಾಕ್ ಆಗಿದ್ದಾರೆ. ಪ್ರಪಂಚದಾದ್ಯಂತದ ರೆಸ್ಟೋರೆಂಟ್‌ಗಳು ತಮಗೆ ಸಾಧ್ಯವಾದಷ್ಟು ಗ್ರಾಹಕರನ್ನು ಸೆಳೆಯಲು ನವೀನ ವಿಧಾನಗಳನ್ನು ಬಳಸುತ್ತವೆ. ಆದರೆ ಜಪಾನ್‌ನ ನಗೋಯಾದಲ್ಲಿನ ಈ ರೆಸ್ಟೋರೆಂಟ್‌ನಲ್ಲಿ ವಿಶೇಷವಾದ ಸತ್ಕಾರ ಮಾಡಲಾಗುತ್ತದೆ.

Why In this Weird Restaurant, People Pay for Getting Slapped: Video Goes Viral

ಜಪಾನ್‌ನ ನಗೋಯಾದಲ್ಲಿರುವ ಶಚಿಯಾ ಇಜಕಾಯ (Shachihoko-ya izakaya) ಎಂಬ ಹೆಸರಿನ ಈ ರೆಸ್ಟೋರೆಂಟ್‌ನಲ್ಲಿ ಕಪಾಳಮೋಕ್ಷ ಮಾಡಿಸಿಕೊಳ್ಳಲು ಗ್ರಾಹಕರೇ ಬಯಸಿ ಬರುತ್ತಾರೆ. ಇದಕ್ಕಾಗಿ ಒಬ್ಬ ಗ್ರಾಹಕ ಎರಡು ಡಾಲರ್ ಕೊಡಬೇಕು. ಇದು ಜಪಾನ್‌ನಲ್ಲಿ ಅತ್ಯಂತ ಜಪ್ರಿಯವಾದ ರೆಸ್ಟೋರೆಂಟ್ ಆಗಿದೆ. ಇಲ್ಲಿಗೆ ಜನನೇ ಇಷ್ಟ ಪಟ್ಟು ಹೋಗುತ್ತಾರೆ. ಸ್ಪೆಷಲ್ ವೆಟರ್ ಕಡೆಯಿಂದ ಹೊಡೆಸಿಕೊಳ್ಳಲು ಒಬ್ಬ ವ್ಯಕ್ತಿ 3.4 ಡಾಲರ್ ಹಣವನ್ನು ಕೊಡಬೇಕಾಗುತ್ತದೆ.

ವೈರಲ್ ವಿಡಿಯೋವನ್ನು ಇಲ್ಲಿ ವೀಕ್ಷಿಸಿ:-

ಹಾಗಂತ ಎಲ್ಲರೂ ಕೂಡ ಈ ರೆಸ್ಟೊರೆಂಟ್‌ನಲ್ಲಿ ಹೊಡೆಸಿಕೊಳ್ಳುವುದಿಲ್ಲ. ಹೊಡೆಸಿಕೊಳ್ಳುವುದಕ್ಕಾಗಿಯೇ ಹೋಗುವುದಿಲ್ಲ. ಅದಕ್ಕಾಗಿಯೇ ಸೆಷಲ್ ಕೊಠಡಿ ಇರುತ್ತದೆ. ನೋವಿನ ಅನುಭವವನ್ನು ಬಯಸುವವರು ಮಾತ್ರ ಇಲ್ಲಿಗೆ ಹೋಗುತ್ತಾರೆ. ಇಲ್ಲಿಗೆ ಹೋಗುವವರಿಗೆ ಮಾತ್ರ ಹೊಡೆಯಲಾಗುತ್ತದೆ. ಅದಕ್ಕಾಗಿ ಹಣವನ್ನು ಪಡೆಯಲಾಗುತ್ತದೆ. ಮಹಿಳಾ ಸಿಬ್ಬಂದಿ ಕೈಯಲ್ಲಿ ಹೊಡೆಸಿಕೊಳ್ಳಲು ಜನ ಉತ್ಸುಕರಾಗಿರುತ್ತಾರೆ. ಫುಡ್‌ ಕ್ಕಿಂತಲೂ ಈ ಸೇವೆಗೆ ಈ ರೆಸ್ಟೋರೆಂಟ್ನಲ್ಲಿ ತುಂಬಾ ಫೇಮಸ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+