ಗೂಗಲ್ Vs ಮೈಕ್ರೋಸಾಫ್ಟ್ ಯಾವ್ದು ಬೆಸ್ಟ್‌? ಈ ಎರಡೂ ಕಂಪನಿಗಳಲ್ಲಿ ಕೆಲಸ ಮಾಡಿದ ಉದ್ಯೋಗಿ ಹೇಳಿದ್ದೇನು ನೋಡಿ..

ಜಗತ್ತಿನ ದೈತ್ಯ ಟೆಕ್ ಕಂಪನಿಗಳಾದ ಗೂಗಲ್ ಮತ್ತು ಮೈಕ್ರೋಸಾಪ್ಟ್‌ಗಳಲ್ಲಿ ಕೆಲಸ ಪಡೆಯಬೇಕೆನ್ನುವುದು ಲಕ್ಷಾಂತರ ಟೆಕ್ ಉದ್ಯೋಗಿಗಳ ದೊಡ್ಡ ಕನಸು. ಆದರೆ ಜಾಬ್‌ ಪಡೆಯುವಾಗ ಯಾವ ಕಂಪೆನಿಯಲ್ಲಿ ಕೆಲಸ ಮಾಡುವುದು ಬೆಸ್ಟ್‌ ಎನ್ನುವ ಗೊಂದಲ ಇರುತ್ತದೆ. ಏಕೆಂದರೆ ಈ ಎರಡೂ ಕಂಪನಿಗಳು ತಮ್ಮದೇ ಆದ ದೊಡ್ಡ ಬ್ರ್ಯಾಂಡ್ ವ್ಯಾಲ್ಯೂ ಹಾಗೂ ಅತ್ಯುತ್ತಮ ಸೌಲಭ್ಯಗಳನ್ನ ಹೊಂದಿವೆ.

ಆದರೆ ಈ ಎರಡೂ ಕಂಪನಿಗಳಲ್ಲಿ ಕೆಲಸ ಮಾಡಿದರೆ ಹೇಗಿರುತ್ತದೆ? ಅಲ್ಲಿನ ಕೆಲಸದ ವಾತಾವರಣ ಹೇಗಿದೆ? ಎಂಬ ಬಗ್ಗೆ ಎರಡೂ ಕಂಪನಿಗಳಲ್ಲಿ ಕೆಲಸ ಮಾಡಿದ ಉದ್ಯಮಿ ಮನು ಅಗರ್ವಾಲ್ ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಇದೀಗ ಭಾರಿ ವೈರಲ್ ಆಗುತ್ತಿದ್ದು, ಟೆಕ್ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

Google vs Microsoft

ಗೂಗಲ್ ಉದ್ಯೋಗದ ಅನುಭವ

ಗೂಗಲ್‌ನಲ್ಲಿ ಕೆಲಸ ಮಾಡುವಾಗ ಅಲ್ಲಿನ ಮ್ಯಾನೇಜರ್‌ಗಿಂತ ಹೆಚ್ಚಾಗಿ ಆ ಗೂಗಲ್‌ ಎನ್ನೋ 'ಬ್ರ್ಯಾಂಡ್'ನಮ್ಮನ್ನಾ ಗಮನಿಸುತ್ತಿರುವಂತೆ ಎನಿಸುತ್ತಿತ್ತು. ಗೂಗಲ್‌ನಲ್ಲಿ ಪ್ರತಿಯೊಂದು ಮೀಟಿಂಗ್, ಪ್ರತಿಯೊಂದು ಪಬ್ಲಿಕ್ ರಿಲೇಶನ್ ಅಂದರೆ ಪಿಆರ್‌ ಕೆಲಸ, ಮತ್ತು ಸ್ಲಾಕ್ ಮೆಸೇಜ್ ಕಳುಹಿಸುವಾಗಲೂ, "ಒಬ್ಬ ಗೂಗಲ್ ಉದ್ಯೋಗಿ ಈ ರೀತಿ ಮಾಡುತ್ತಾನೆಯೇ?" ಎಂಬ ಪ್ರಶ್ನೆ ಕಾಡುತ್ತಿರುತ್ತದೆ. ಅಂದರೆ, ಅಲ್ಲಿನ ಉದ್ಯೋಗಿಗಳು ಕಂಪನಿಯ ಘನತೆ ಮತ್ತು ಬ್ರ್ಯಾಂಡ್ ಇಮೇಜ್‌ಗೆ ತಕ್ಕಂತೆ ಅತ್ಯಂತ ಎಚ್ಚರಿಕೆಯಿಂದ ನಡೆದುಕೊಳ್ಳುವುದು ಅನಿವಾರ್ಯವಾಗಿರುತ್ತದೆ. ಆದರೆ, ಇದು ಬ್ರ್ಯಾಂಡ್‌ನ ಚೌಕಟ್ಟಿನೊಳಗೆ ಬಂಧಿಯಾದಂತೆ ಭಾಸವಾಗುತ್ತದೆ ಎಂಬುದು ಅವರ ಅಭಿಪ್ರಾಯ.

ಮೈಕ್ರೋಸಾಫ್ಟ್‌ನಲ್ಲಿ ಕರಿಯರ್ ಗ್ರೋತ್

ಗೂಗಲ್‌ಗೆ ಹೋಲಿಸಿದರೆ ಮೈಕ್ರೋಸಾಫ್ಟ್ ಕಂಪನಿಯಲ್ಲಿನ ಕೆಲಸದ ಅನುಭವ ಸಂಪೂರ್ಣ ಬೇರೆ ತರಯಿದೆ. ಮೈಕ್ರೋಸಾಫ್ಟ್‌ನಲ್ಲಿ ಕೆಲಸ ಮಾಡುವಾಗ, ಒಬ್ಬ ವೃತ್ತಿಪರನಾಗಿ ನನ್ನನ್ನು ನಾನು ಕಟ್ಟಿಕೊಳ್ಳುತ್ತಿದ್ದೇನೆ ಎಂಬ ನಿಜವಾದ ಭಾವನೆ ಮೂಡಿತು. ಅಲ್ಲಿ ಉದ್ಯೋಗಿಗಳಿಗೆ ಪ್ರಾಜೆಕ್ಟ್‌ಗಳ ಮೇಲೆ ಹೆಚ್ಚಿನ ನಾಯಕತ್ವ ಮತ್ತು ಹೊಸದನ್ನಾ ಎನನ್ನಾದರೂ ಮಾಡುವ ಸಂಪೂರ್ಣ ಸ್ವಾತಂತ್ರ್ಯ ಇರುತ್ತದೆ. ಇದರ ಜೊತೆಗೆ ಹೆಚ್ಚಿನ ಜವಾಬ್ದಾರಿಗಳೂ ಇರುತ್ತವೆ, ಆದರೆ ಇದೇ ಜವಾಬ್ದಾರಿಗಳು ಕರಿಯರ್‌ನ ತ್ವರಿತ ಬೆಳವಣಿಗೆಗೆ ಸಾಕಷ್ಟು ಸಹಾಯ ಮಾಡುತ್ತವೆ. "ಗೂಗಲ್ ನನಗೆ ಕೆಲಸದಲ್ಲಿ'ಪಾಲಿಶ್' ಕೊಟ್ಟರೆ, ಮೈಕ್ರೋಸಾಫ್ಟ್ ನನಗೆ ವಿಷಯದ ಆಳವನ್ನು ಕಲಿಸಿಕೊಟ್ಟಿತು," ಎಂದು ಅವರು ತಮ್ಮ ವಿಭಿನ್ನ ಅನುಭವವನ್ನು ಹಂಚಿಕೊಂಡಿದ್ದಾರೆ.

ಇವೆರಡರಲ್ಲಿ ಯಾವ ಕಂಪನಿ ಉತ್ತಮ?

ಇವೆರಡರಲ್ಲಿ ಯಾವುದು ಉತ್ತಮ ಕಂಪನಿ ಎಂಬ ಪ್ರಶ್ನೆಗೆ ಅತ್ಯಂತ ಸ್ಪಷ್ಟವಾಗಿ ಉತ್ತರಿಸಿರುವ ಅವರು, "ಯಾವುದೂ ಮೇಲಲ್ಲ, ಯಾವುದೂ ಕೀಳಲ್ಲ. ಎರಡೂ ಕಂಪನಿಗಳು ಉದ್ಯೋಗ ಮಾಡಲು ಅತ್ಯುತ್ತಮವಾಗಿವೆ. ಆದರೆ, ನಿಮ್ಮ ಕರಿಯರ್‌ನ ವಿವಿಧ ಹಂತಗಳಿಗೆ ಈ ಕಂಪನಿಗಳು ಬೇರೆ ಬೇರೆ ಸಾಧನಗಳಾಗಿ ಕೆಲಸ ಮಾಡುತ್ತವೆ" ಎಂದಿದ್ದಾರೆ. ನೀವು ಕೆಲಸ ಮಾಡುವ ಸ್ಥಳವು ನಿಮ್ಮ ಆಲೋಚನಾ ಕ್ರಮವನ್ನು ಹಾಗೂ ವೃತ್ತಿಜೀವನವನ್ನು ರೂಪಿಸುತ್ತದೆ.

ಹಾಗಾಗಿ, ಕೇವಲ ನಿಮ್ಮ ಪ್ರೊಫೈಲ್‌ನಲ್ಲಿ ನೋಡಲು ಚೆನ್ನಾಗಿ ಕಾಣುವ 'ಬ್ರ್ಯಾಂಡ್' ಹೆಸರನ್ನು ನೋಡಿ ಕೆಲಸ ಆಯ್ಕೆ ಮಾಡಿಕೊಳ್ಳುವ ಬದಲು, ನೀವು ಕರಿಯರ್‌ನಲ್ಲಿ ಎಲ್ಲಿಗೆ ಹೋಗಬೇಕೆಂದು ಬಯಸುತ್ತೀರೋ, ಆ ಗುರಿಗೆ ಹೊಂದುವಂತಹ ವರ್ಕ್‌ ಕಲ್ಚರ್‌ ಅನ್ನಾ ಆಯ್ಕೆ ಮಾಡಿಕೊಳ್ಳಿ ಎಂದು ಟೆಕ್ ಉದ್ಯೋಗಿಗಳಿಗೆ ಅವರು ಕಿವಿಮಾತು ಹೇಳಿದ್ದಾರೆ. ಕೇವಲ ಬ್ರ್ಯಾಂಡ್ ವ್ಯಾಮೋಹಕ್ಕೆ ಬೀಳದೆ, ಕೌಶಲ್ಯ ವಿಕಸನಕ್ಕೆ ಒತ್ತು ನೀಡಬೇಕು ಎಂಬುದೇ ಈ ಪೋಸ್ಟ್‌ನ ಉದ್ದೇಶ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+