ಅಮೆರಿಕದ ಎದೆಯಲ್ಲಿ ಭಯ ಹುಟ್ಟಿಸಿದ ಸರ್ವಾಧಿಕಾರಿ: ಹೇಗೆ ಗೊತ್ತಾ?
ಪದೇ ಪದೆ ಕಿರಿಕ್ ಮಾಡುವ ಕಿಮ್ ಜಾಂಗ್ ಉನ್ ಇದೀಗ ಮತ್ತೊಂದು ಕ್ಷಿಪಣಿಯ ಕೈಯಲ್ಲಿ ಹಿಡಿದು, ದೊಡ್ಡಣ್ಣ ಅಮೆರಿಕಗೆ ಶಾಕ್ ನೀಡಿದ್ದಾನೆ. ಕೆಲವೇ ದಿನಗಳ ಹಿಂದೆ ಪರೀಕ್ಷೆಯನ್ನ ಮಾಡಿದ್ದ ಖಂಡಾಂತರ & ಪರಮಾಣು ಸಾಮರ್ಥ್ಯದ ಕ್ಷಿಪಣಿ ಬಗ್ಗೆ ಉ.ಕೊರಿಯಾ ಎಚ್ಚರಿಕೆ ಸಂದೇಶ ರವಾನಿಸಿತ್ತು. ಈ ಬೆನ್ನಲ್ಲೇ ರೊಚ್ಚಿಗೆದ್ದಿರುವ ಕಿಮ್ ಜಾಂಗ್ ಉನ್ ಶತ್ರು ನಾಶಕ್ಕೆ ಪಣತೊಟ್ಟಿದ್ದಾನೆ. ಅಲ್ಲದೆ ಅಮೆರಿಕದ ನಾಯಕರಿಗೆ ವಾರ್ನಿಂಗ್ ಕೊಟ್ಟಿದ್ದಾನೆ.
ಉತ್ತರ ಕೊರಿಯಾ ಒಂದು ರೀತಿ ಪೆಟ್ರೋಲ್ ಇದ್ದಂತೆ, ಶತ್ರುಗಳ ಹೆಚ್ಚಾದಂತೆ ಇನ್ನೂ ಹೆಚ್ಚು ಹೊತ್ತಿ ಉರಿಯುತ್ತದೆ. ಅದರಲ್ಲೂ ಅಮೆರಿಕ, ದಕ್ಷಿಣ ಕೊರಿಯಾ & ಜಪಾನ್ ದೇಶಗಳನ್ನು ತನ್ನ ಕ್ಷಿಪಣಿಗಳ ಮೂಲಕವೇ ಹೆದರಿಸಿ ಇಟ್ಟಿದ್ದಾನೆ ಕಿಮ್. ಹೀಗಿದ್ದಾಗ ಮತ್ತೆ ಮತ್ತೆ ಅದೇ ದೇಶವನ್ನು ಕೆಣಕಿ ತಪ್ಪು ಮಾಡುತ್ತಿರುವ ದೊಡ್ಡಣ್ಣ ಅಮೆರಿಕ, ಅದಕ್ಕೆ ಪ್ರತಿಯಾಗಿ ಹಿಂಗೆ ಕ್ಷಿಪಣಿ ಪರೀಕ್ಷೆಯ ಉತ್ತರ ಪಡೆಯುತ್ತಿದೆ. ಅದರಲ್ಲೂ ಮೊನ್ನೆ ಮೊನ್ನೆ ಉತ್ತರ ಕೊರಿಯಾ ಪರೀಕ್ಷೆ ನಡೆಸಿರುವ ಮಿಸೈಲ್ ಪಾಶ್ಚಿಮಾತ್ಯ ದೇಶಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.

ಹೆಂಗಿದೆ ಕಿಮ್ ಹೊಸ ಮಿಸೈಲ್?
ಇದೀಗ ಕಿಮ್ ಜಾಂಗ್ ಉನ್ ಸೇನೆ ಪ್ರಯೋಗ ನಡೆಸಿರುವ ಕ್ಷಿಪಣಿ ಭಾರಿ ಶಕ್ತಿ ಹೊಂದಿದ್ದು ದೂರದ ಜಾಗದಲ್ಲಿ ಇರುವ ಶತ್ರುಗಳನ್ನ ನಾಶ ಮಾಡಬಲ್ಲದು. ಸುಮಾರು 1,002 ಕಿ.ಮೀ ಅಂದರೆ 622 ಮೈಲಿ ದೂರ ಇರುವ ಶತ್ರುಗಳ ಜಾಗವನ್ನೂ ಧೂಳ್ ಧೂಳ್ ಮಾಡಬಲ್ಲದು ಅಂತಾ ಹೇಳಲಾಗುತ್ತಿದೆ. ಹಾಗೇ 6,518 ಕಿಲೋ ಮೀಟರ್ ಎತ್ತರಕ್ಕೆ ಹಾರಬಲ್ಲ ಕ್ಷಿಪಣಿಯ ಪರೀಕ್ಷೆ ನಡೆಸಿದ್ದಾನೆ ಕಿಮ್ ಜಾಂಗ್ ಉನ್. ದೊಡ್ಡಣ್ಣ ಅಮೆರಿಕದ ಮೇಲೂ ಸುಲಭವಾಗಿ ದಾಳಿ ಮಾಡುವ ಸಾಮರ್ಥ್ಯ ಈ ಕ್ಷಿಪಣಿಗೆ ಇದೆ. ಹೀಗಾಗಿ ಭಯ ಮತ್ತಷ್ಟು ಹೆಚ್ಚಾಗಿದೆ.
ಶತ್ರುಗಳಿಗೆ ಖಡಕ್ ವಾರ್ನಿಂಗ್!
ಈ ಕುರಿತು ಹೇಳಿಕೆ ನೀಡಿರುವ ಕಿಮ್ ಜಾಂಗ್ ಉನ್, ಶತ್ರುಗಳಿಗೆ ಎಚ್ಚರಿಕೆ ನೀಡೋದಕ್ಕಾಗಿ ಸೇನೆ ಮತ್ತು ಅಸ್ತ್ರಗಳನ್ನ ಇನ್ನಷ್ಟು ಬಲಪಡಿಸಿ ಎಂದಿದ್ದಾನೆ. ಅಲ್ಲದೆ ನಮ್ಮ ಆಯುಧಗಳ ಮೂಲಕವೇ ಶತ್ರುಗಳಿಗೆ ಉತ್ತರ ನೀಡಬೇಕಿದೆ ಎಂದು ಕಿಮ್ ಪ್ರತಿಪಾದನೆ ಮಾಡಿದ್ದಾನೆ. ಈ ಬೆಳವಣಿಗೆ ಅಮೆರಿಕದ ಸರ್ಕಾರಕ್ಕೆ ಕೂಡ ದೊಡ್ಡ ತಲೆನೋವು ತರಿಸಿದೆ. ಅಲ್ಲದೆ ಮುಂದೆ ಹೇಗಪ್ಪಾ? ಅನ್ನೋ ಪ್ರಶ್ನೆ ಕೂಡ ಹುಟ್ಟುಹಾಕಿದೆ. ಯಾಕಂದ್ರೆ ಅಮೆರಿಕದಲ್ಲಿ ಇನ್ನು ಕೆಲ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಅಮೆರಿಕದ ಬೈಡನ್ ಆಡಳಿತಕ್ಕೆ ಚಾಲೆಂಜ್ ಎದುರಾಗಿದೆ.
ನಡುಗುತ್ತಿದೆಯಾ ದೊಡ್ಡಣ್ಣ ಅಮೆರಿಕ?
ಹೀಗೆ ಸುಮ್ಮನೆ ಇರದೆ ಇರುವೆ ಬಿಟ್ಟುಕೊಂಡ ಪರಿಸ್ಥಿತಿ ಅಮೆರಿಕ ಸರ್ಕಾರದ್ದಾಗಿದೆ. ಯಾಕೆ ಅಂದ್ರೆ ಕಿಮ್ ಜಾಂಗ್ ಉನ್ ವಿರುದ್ಧ ಅಮೆರಿಕ ಏನೇ ತಂತ್ರ ಮಾಡಿದರೂ ವರ್ಕೌಟ್ ಆಗಿ ಜಾರಿಗೆ ಬರ್ತಿಲ್ಲ. ಇದರ ಬದಲಾಗಿ ಪ್ರತಿಬಾರಿ ಕಿಮ್ ಜಾಂಗ್ ಉನ್ ಅಮೆರಿಕದ ವಿರುದ್ಧವೆ ಮತ್ತಷ್ಟು ಬಲಗೊಳ್ಳುತ್ತಿದ್ದಾನೆ. ಹೀಗಾಗಿ ಈ ಬೆಳವಣಿಗೆ ಸಹಜವಾಗಿ ದೊಡ್ಡಣ್ಣನ ನಾಡಿಗೆ ಭಯ ಹುಟ್ಟಿಸುತ್ತಿದೆ.

ಟ್ರಂಪ್ ಆಡಳಿತ ಬಂದರೆ ಸರಿ ಹೋಗುತ್ತಾ?
ಮತ್ತೊಂದು ಕಡೆ ಅಮೆರಿಕದಲ್ಲಿ ಇನ್ನೇನು ಮುಂದಿನ ವರ್ಷ ಚುನಾವಣೆ ನಡೆದು, ಹೊಸ ಸರ್ಕಾರ ಆಡಳಿತಕ್ಕೆ ಬರಲಿದೆ. ಅದರಲ್ಲೂ ಈ ಬಾರಿ ಡೊನಾಲ್ಡ್ ಟ್ರಂಪ್ ಮತ್ತೆ ಆಡಳಿತದ ಚುಕ್ಕಾಣಿ ಹಿಡಿಯುವ ನಿರೀಕ್ಷೆ ಇದೆ. ಹೀಗಾಗಿ ಡೊನಾಲ್ಡ್ ಟ್ರಂಪ್ ಮತ್ತೆ ಅಧಿಕಾರಕ್ಕೆ ಬಂದು ಸರ್ಕಾರ ರಚಿಸಿದರೆ, ಕಿಮ್ ಜಾಂಗ್ ಉನ್ ಜೊತೆಗಿನ ಸಂಬಂಧ ಸರಿಯಾಗುತ್ತಾ? ಅನ್ನೋ ನಿರೀಕ್ಷೆ ಕೂಡ ಮೂಡಿದೆ. ಯಾಕಂದ್ರೆ ಈ ಹಿಂದೆ ಟ್ರಂಪ್ ಅಮೆರಿಕದ ಅಧ್ಯಕ್ಷರಾದ ವೇಳೆ ಕಿಮ್ ಜಾಂಗ್ ಉನ್ ಜೊತೆ ಮಾತುಕತೆ ನಡೆಸಿದ್ದರು.












Click it and Unblock the Notifications