ಅಮೆರಿಕದ ಬುಡ ಅಲುಗಾಡಿಸಿದ ಉತ್ತರ ಕೊರಿಯಾ ಸರ್ವಾಧಿಕಾರಿ!

ಕಿಮ್ ಜಾಂಗ್ ಉನ್ ಹೆಸರು ಕೇಳಿದ್ರೆ ಅಮೆರಿಕ ನಾಯಕರು ಕನಸಿನಲ್ಲೂ ಬೆಚ್ಚಿಬೀಳುವ ಪರಿಸ್ಥಿತಿ ಇದೆ. ಯಾಕಂದ್ರೆ ಕಿಮ್ ಜಾಂಗ್ ಉನ್ ಇಟ್ಟ ಹವಾ ಹಂಗಿದೆ. ಒಂದಲ್ಲ ಎರಡಲ್ಲ, ನೂರಾರು ಪರಮಾಣು ಸಾಮರ್ಥ್ಯದ ಕ್ಷಿಪಣಿ ಪರೀಕ್ಷೆಗಳ ಮಾಡಿ, ದೊಡ್ಡಣ್ಣ ಅಮೆರಿಕದ ಎದೆ ನಡುಗಿಸಿದೆ ಉತ್ತರ ಕೊರಿಯಾ. ಇದೀಗ ಮತ್ತೊಮ್ಮೆ ಅದೇ ರೀತಿ ಸಾಹಸಕ್ಕೆ ಕೈಹಾಕಿದೆ.

ಉತ್ತರ ಕೊರಿಯಾ ಇತ್ತೀಚೆಗೆ ತಾನೆ ದೀರ್ಘ ಶ್ರೇಣಿಯ ಕ್ರೂಸ್ ಕ್ಷಿಪಣಿಗಳ ಪರೀಕ್ಷೆಯನ್ನ ನಡೆಸಿತ್ತು ಈಗ ತನ್ನ ಪರೀಕ್ಷೆಯ ಬಗ್ಗೆ ವಿವರಣೆ ನೀಡಿದೆ ಉತ್ತರ ಕೊರಿಯಾ. ಅಷ್ಟಕ್ಕೂ ಉತ್ತರ ಕೊರಿಯಾ ಹೀಗೆ ಮಾಡಲು ಕಾರಣ ತನ್ನ ಶತ್ರುಗಳ ಭಯವಂತೆ. ಅಮೆರಿಕ, ದಕ್ಷಿಣ ಕೊರಿಯಾ & ಜಪಾನ್‌ ಕಡೆಯಿಂದ ಹೆಚ್ಚುತ್ತಿರುವ ಉದ್ವಿಗ್ನತೆ ಮಧ್ಯೆ, ಪ್ರತಿ ದಾಳಿ ಸಾಮರ್ಥ್ಯವನ್ನು ಹೆಚ್ಚಿಸಲು ದೀರ್ಘ ಶ್ರೇಣಿಯ ಕ್ರೂಸ್ ಕ್ಷಿಪಣಿಗಳ ಪರೀಕ್ಷೆ ನಡೆಸಿದ್ದಾಗಿ ಉತ್ತರ ಕೊರಿಯಾ ಹೇಳಿಕೆ ನೀಡಿದೆ.

North Korea Is Explained Why They Have Been Tested Cruise Missiles

ಅಮೆರಿಕದ ನೆಲೆಗಳೇ ಮೊದಲ ಟಾರ್ಗೆಟ್?

ಉತ್ತರ ಕೊರಿಯಾ ಒಂದು ತಿಂಗಳೊಳಗೆ ನಡೆಸಿದ್ದ ಮೂರು ಕ್ರೂಸ್ ಕ್ಷಿಪಣಿ ಪರೀಕ್ಷೆಗಳನ್ನ ದಕ್ಷಿಣ ಕೊರಿಯಾದ ಮಿಲಿಟರಿ ಪತ್ತೆ ಮಾಡಿದೆ. ಈ ಬೆಳವಣಿಗೆ ನಡುವೆ, ಉತ್ತರ ಕೊರಿಯಾ ಕೂಡ ಈಗ ಬಗ್ಗೆ ಖಡಕ್ ಪ್ರತಿಕ್ರಿಯೆ ನೀಡಿದೆ. ಇದೀಗ ಉತ್ತರ ಕೊರಿಯಾ ನಡೆಸಿದ ಪರಮಾಣು ಸಾಮರ್ಥ್ಯದ ಕ್ಷಿಪಣಿ ವ್ಯಾಪ್ತಿ ಸುಮಾರು 2,000 ಕಿಲೋ ಮೀಟರ್ ಅಂತೆ. ಇದು ಜಪಾನ್‌ನಲ್ಲಿನ ಅಮೆರಿಕದ ಮಿಲಿಟರಿ ನೆಲೆ ಗುರಿಯಾಗಿಸುವ ಸಾಮರ್ಥ್ಯ ಹೊಂದಿದೆ ಅಂತೆ.

ಭವಿಷ್ಯಕ್ಕೆ ಎದುರಾಗುತ್ತಾ ಆಪತ್ತು?

ಅಮೆರಿಕ ಇದೀಗ ಉತ್ತರ ಕೊರಿಯಾದ ಶತ್ರು ದೇಶಗಳ ಜತೆಗೆ ಸಂಬಂಧ ವೃದ್ಧಿಗೆ ಯತ್ನಿಸುತ್ತಿದ್ದು, ಸೇನಾ ಸಹಾಯವನ್ನ ಮಾಡುತ್ತಿದೆ. ಈ ಬೆಳವಣಿಗೆ ನಡುವೆ ಉತ್ತರ ಕೊರಿಯಾ ಕೂಡ ಅಮೆರಿಕ & ದಕ್ಷಿಣ ಕೊರಿಯಾಗೆ ತಿರುಗೇಟು ನೀಡಲು ಇಂತಹ ಕೃತ್ಯ ಎಸಗುತ್ತಿದೆ ಎಂಬ ಆರೋಪವು ಇದೆ. ಕೆಲವು ವರ್ಷಗಳಿಂದ ಕ್ರೂಸ್ ಕ್ಷಿಪಣಿಗಳ ಶ್ರೇಣಿಯನ್ನು ಉತ್ತರ ಕೊರಿಯಾ ವಿಸ್ತರಿಸುತ್ತಿದೆ.

ನೆಲ & ಜಲಾಂತರ್ಗಾಮಿ ನೌಕೆಗಳ ಸಹಾಯದಿಂದ ಉಡಾವಣೆ ಮಾಡಲು ವಿನ್ಯಾಸಗೊಳಿಸಲಾದ ಕ್ರೂಸ್ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಜೋರಾಗಿದೆ. ಇದೇ ರೀತಿ 2021ರಿಂದ ಇಂಥ 11 ಕ್ರೂಸ್ ಕ್ಷಿಪಣಿ ಪರೀಕ್ಷೆ ನಡೆಸಿದ್ದಾನೆ ಸರ್ವಾಧಿಕಾರಿ ಕಿಮ್. ಇದು ಸರ್ವಾಧಿಕಾರಿ ಯುದ್ಧ ಸಿದ್ಧತೆಗಳನ್ನು ಸೂಕ್ಷ್ಮವಾಗಿ ತಿಳಿಸುತ್ತಿದೆ ಎಂಬ ಆರೋಪ ಉತ್ತರ ಕೊರಿಯಾ ಶತ್ರುಗಳದ್ದು.

North Korea Is Explained Why They Have Been Tested Cruise Missiles

ಕ್ಷಿಪಣಿಗಳ ಶತಕ ಬಾರಿಸಿದ ಕಿಮ್

ಕಿಮ್ ಜಾಂಗ್ ಉನ್ ಎಲ್ಲದಕ್ಕೂ ಸನ್ನದ್ಧವಾಗಿ ನಿಂತಿರುವಂತೆ ಕಾಣ್ತಾ ಇದೆ. ಅದರಲ್ಲೂ ಕಳೆದ 1 ವರ್ಷದಿಂದ ಕಿಮ್ ಜಾಂಗ್ ಉನ್ ಬಳಿ ಕ್ಷಿಪಣಿಗಳ ಸಾಲು ಸಾಲು ಪರೀಕ್ಷೆಯೆ ನಡೆದಿದೆ. 2022 ರಿಂದ ಇಲ್ಲಿಯವರೆಗೆ ಉತ್ತರ ಕೊರಿಯಾ 100ಕ್ಕೂ ಹೆಚ್ಚು ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿದೆ ಎಂದರೆ ಲೆಕ್ಕ ಹಾಕಿ. ಈ ಕ್ಷಿಪಣಿಗಳಲ್ಲಿ ಬಹುಪಾಲು ಅಮೆರಿಕ & ದಕ್ಷಿಣ ಕೊರಿಯಾ ಟಾರ್ಗೆಟ್ ಮಾಡಿ ದಾಳಿ ನಡೆಸುವ ಸಾಮರ್ಥ್ಯ ಇರುವ ಮಿಸೈಲ್‌ಗಳೇ ಆಗಿವೆ.

ಕಿಮ್ ಜಾಂಗ್ ಉನ್ ಪಟಾಲಂ ಬಳಿ ಇರುವ ಮಿಸೈಲ್‌ ಭಯಾನಕವಾಗಿವೆ. ಈ ಕ್ಷಿಪಣಿ ಅಥವಾ ಮಿಸೈಲ್ಸ್ ಹೇಗಿವೆ ಅಂದ್ರೆ ದೂರದ ಅಮೆರಿಕದ ಪ್ರಮುಖ ನಗರದ ಮೇಲೆ ತಕ್ಷಣ ದಾಳಿ ಮಾಡುವ ಸಾಮರ್ಥ್ಯ ಹೊಂದಿವೆ. ಯುರೋಪ್ ದೇಶಗಳಿಗೂ ಹೊಸ ಕ್ಷಿಪಣಿಗಳ ಭಯವು ಶುರುವಾಗಿದೆ. ಕಿಮ್ ಜಾಂಗ್ ಉನ್ ದಕ್ಷಿಣ ಕೊರಿಯಾ, ಅಮೆರಿಕ & ಜಪಾನ್ ಜತೆ ಯುರೋಪ್ ದೇಶಗಳನ್ನು ಟಾರ್ಗೆಟ್ ಮಾಡಿ ಕ್ಷಿಪಣಿ ಪರೀಕ್ಷೆ ನಡೆಸುತ್ತಿರುವ ಆರೋಪವು ಕೇಳಿಬರುತ್ತಿದೆ. ಹೀಗಾಗಿಯೇ ಈ ಸಮಯದಲ್ಲಿ ಭಯ ಕೂಡ ಹೆಚ್ಚಾಗಿದೆ. ಮುಂದೆ ಪರಿಸ್ಥಿತಿ ಹೇಗಪ್ಪಾ.? ಅನ್ನೋ ಚಿಂತೆಯೂ ಪಾಶ್ಚಿಮಾತ್ಯ ದೇಶಗಳಿಗೆ ಶುರುವಾಗಿದೆ. ಇದಕ್ಕೆಲ್ಲಾ ಕಿಮ್ ಜಾಂಗ್ ಉನ್ ಉತ್ತರ ನೀಡಬೇಕಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+