ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೇಮ್ ! ಪ್ರಧಾನಿ ನರೇಂದ್ರ ಮೋದಿ ವಿರುದ್ದ ಅಸಂವಿಧಾನಿಕ ಪದ ಪ್ರಯೋಗ

ಉತ್ತರಪ್ರದೇಶ ಅಸೆಂಬ್ಲಿ ಚುನಾವಣಾ ಪ್ರಚಾರದ ವೇಳೆ ರಾಜಕೀಯ ನಾಯಕರ ಮಾತಿನ ಯುದ್ದ ತಾರಕಕ್ಕೇರಿದ್ದು, ಪ್ರಧಾನಿ ಮೋದಿ ವಿರುದ್ದ ಪರೋಕ್ಷವಾಗಿ ಅಸಂವಿಧಾನಿಕ ಪದ ಬಳಸಿದ ಅಖಿಲೇಶ್ ಯಾದವ್.

|
Google Oneindia Kannada News

ನವದೆಹಲಿ, ಫೆ 21: ರಾಜಕೀಯ ಎಂದ ಮೇಲೆ ಆರೋಪ, ಪ್ರತ್ಯಾರೋಪ ಸಹಜ. ಆದರೆ ದೇಶದ ಪ್ರಧಾನಮಂತ್ರಿಯನ್ನು ಅಸಂವಿಧಾನಿಕ ಪದ ಬಳಸಿ ಟೀಕೆ ಮಾಡುವುದು ಎಷ್ಟು ಸರಿ?

ಉತ್ತರಪದೇಶದಲ್ಲಿ ಚುನಾವಣಾ ಪ್ರಚಾರ ತಾರಕಕ್ಕೇರಿರುವ ಹೊತ್ತಿನಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಪ್ರಧಾನಿ ಮೋದಿ ವಿರುದ್ದ ಬೇಜವ್ಬಾರಿಯುತ ಪದ ಪ್ರಯೋಗಿಸಿ ಟೀಕಿಸಿದ್ದಾರೆ. (ಮುಸ್ಲಿಮರಿಗೆ ಖಬರಸ್ತಾನ್, ಹಿಂದೂಗಳಿಗೆ ಸ್ಮಶಾನಕ್ಕೇಕಿಲ್ಲ)

ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಉಗ್ರರಿದ್ದಂತೆ ಎಂದು ಎರಡು ದಿನದ ಹಿಂದೆ ಹೇಳಿದ್ದ ಅಖಿಲೇಶ್, ರಾಯ್ ಬರೇಲಿಯಲ್ಲಿ ಸೋಮವಾರ (ಫೆ 20) ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿಯನ್ನು ಪರೋಕ್ಷವಾಗಿ ಕತ್ತೆಗೆ ಹೋಲಿಸಿದ್ದಾರೆ.

ಅಖಿಲೇಶ್ ಹೇಳಿಕೆ ವ್ಯಾಪಕ ಟೀಕೆಗೊಳಗಾಗಿದ್ದು, ಖುದ್ದು ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ 'ಪುತ್ರರತ್ನ'ನ ಹೇಳಿಕೆಗೆ ಅಸಮ್ಮತಿ ಸೂಚಿಸಿದ್ದಾರೆ.

ಗುಜರಾತ್ ಪ್ರವಾಸೋದ್ಯಮದ ಜಾಹೀರಾತಿನಲ್ಲಿ ಸಂಸ್ಥೆಯ ರಾಯಭಾರಿಯಾಗಿರುವ ಅಮಿತಾಬ್ ಬಚ್ಚನ್ ಅವರನ್ನು ಉಲ್ಲೇಖಿಸಿ ಮಾತನಾಡುತ್ತಿದ್ದ ಅಖಿಲೇಶ್, ಗುಜರಾತಿನ ಕತ್ತೆಗಳಿಗೆ ಪ್ರಚಾರ ಕೊಡುವ ಅವಶ್ಯಕತೆ ಏನಿದೆ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ದ ವಾಗ್ದಾಳಿ ನಡೆಸಿದ್ದರು.

ಸಾಮಾಜಿಕ ತಾಣದಲ್ಲಿ ಅಖಿಲೇಶ್ ಹೇಳಿಕೆಗೆ ಭಾರೀ ವಿರೋಧ, ಮುಂದೆ ಓದಿ..

 ಅಖಿಲೇಶ್ ವರ್ಸಸ್ ಪ್ರಧಾನಿ ಮೋದಿ

ಅಖಿಲೇಶ್ ವರ್ಸಸ್ ಪ್ರಧಾನಿ ಮೋದಿ

ಈ ದೇಶ ಕಂಡ ಮಹಾನ್ ನಟನಿಗೆ ನನ್ನದೊಂದು ಮನವಿ, ದಯವಿಟ್ಟು ಗುಜರಾತಿನ ಕತ್ತೆಗಳ ಪರ ಪ್ರಚಾರ ಮಾಡುದನ್ನು ನಿಲ್ಲಿಸಿ. ಟಿವಿ ಜಾಹೀರಾತೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅಖಿಲೇಶ್, ಗುಜರಾತ್ ಮೂಲದವರಿಬ್ಬರು ಅಲ್ಲಿನ ಕತ್ತೆಗಳಿಗೂ ಪ್ರಚಾರ ನೀಡುತ್ತಿದ್ದಾರೆ, ಕತ್ತೆಗಳಿಗೆ ಪ್ರಚಾರ ನೀಡಿದರೆ ಕೆಲಸ ನಡೆಯುತ್ತಾ - ಅಖಿಲೇಶ್ ಯಾದವ್.

 ಗುಜರಾತಿನ ಕಛ್ ಉದ್ಯಾನ

ಗುಜರಾತಿನ ಕಛ್ ಉದ್ಯಾನ

ಗುಜರಾತಿನ ಕಛ್ ನಲ್ಲಿರುವ ಕಾಡುಕತ್ತೆ ಸಂರಕ್ಷಿತ ಉದ್ಯಾನಕ್ಕೆ ಪ್ರವಾಸಿಗರನ್ನು ಆಹ್ವಾನಿಸುವ ಜಾಹೀರಾತೊಂದರಲ್ಲಿ ಖ್ಯಾತ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಕಾಣಿಸಿಕೊಂಡಿದ್ದರು. ಅಮಿತಾಬ್, ಗುಜರಾತ್ ರಾಜ್ಯದ ಪ್ರವಾಸೋದ್ಯಮ ಇಲಾಖೆಯ ರಾಯಭಾರಿ ಕೂಡಾ.

ಗುಜರಾತ್ ಮತ್ತು ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ

ಗುಜರಾತ್ ನಲ್ಲಿ ಬರುವ ವರ್ಷ ಅಸೆಂಬ್ಲಿ ಚುನಾವಣೆ ನಡೆಯಲಿದೆ ಮತ್ತು ಈಗ ಮಹಾರಾಷ್ಟ್ರದಲ್ಲಿ ಮುನ್ಸಿಪಲ್ ಚುನಾವಣೆ ನಡೆಯುತ್ತಿದೆ. ಈಗ ಹೇಳಿ ಕತ್ತೆ ಯಾರೆಂದು?

ವೈಯಕ್ತಿಕ ದಾಳಿ ನಡೆಸಲು ಮೋದಿ ಮೊದಲು ಮುಂದಾಗಿದ್ದು

ಯುವರಾಜ, ಪಪ್ಪು ಹೀಗೆ ವೈಯಕ್ತಿಕವಾಗಿ ಇತರ ರಾಜಕೀಯ ಮುಖಂಡರನ್ನು ಮೊದಲು ಲೇವಡಿ ಮಾಡಲು ಶುರುಮಾಡಿದ್ದು ಮೋದಿ, ಈಗ ಇತರರು ಮೋದಿ ಬಗ್ಗೆ ಯಾಕೆ ಮಾತನಾಡಬಾರದು?

ಗುಜರಾತಿಗಳನ್ನು ಕತ್ತೆಯೆಂದು ಹೇಗೆ ಕರೆಯುತ್ತೀರಾ?

ಗುಜರಾತಿಗಳನ್ನು ಕತ್ತೆಯಿಂದು ಕರೆಯಲು ಎಷ್ಟು ಧೈರ್ಯ. ಮುಂದಿದೆ ಗುಜರಾತಿನಲ್ಲಿ ಚುನಾವಣೆ, ನಿಮಗೆ ಜನತೆ ಸರಿಯಾದ ಪಾಠ ಕಲಿಸಲಿದ್ದಾರೆ.

ಕಾಂಗ್ರೆಸ್ಸಿಗೆ ಚುನಾವಣೆಯಲ್ಲಿ ಪಾಠ ಕಲಿಸೋಣ

ಸಮಾಜವಾದಿ ಪಕ್ಷದ ಸಹವಾಸ ಮಾಡಿದ ಕಾಂಗ್ರೆಸ್ಸಿಗೆ ಚುನಾವಣೆಯಲ್ಲಿ ಪಾಠ ಕಲಿಸೋಣ. ಗುಜರಾತಿಗಳನ್ನು ಕತ್ತೆಯೆಂದು ಕರೆಯುವ ಅಖಿಲೇಶ್ ಯಾದವ್ ಸಖ್ಯ ಮಾಡಿದರೆ ಏನಾಗುತ್ತದೆ ಎನ್ನುವುದನ್ನು ಕಾಂಗ್ರೆಸ್ಸಿಗೆ ತೋರಿಸೋಣ.

English summary
Uttar Pradesh Chief Minister mocks Prime Minister Narendra Modi.Akhilesh tells bollywood super star Amitabh Bachchan to stop promoting ' Donkey's of Gujarat'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X