ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ : ಆದಾಯ ತೆರಿಗೆ ವಿನಾಯಿತಿ ಮಿತಿ ಏರಿಕೆ

By Prasad
|
Google Oneindia Kannada News

ನವದೆಹಲಿ, ಜು. 10 : ಮೊತ್ತ ಮೊದಲ ಬಾರಿಗೆ ಬಜೆಟ್ ಮಂಡಿಸುತ್ತಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ನಿರೀಕ್ಷೆಯಂತೆ ಜನಪ್ರಿಯ ಯೋಜನೆಗಳಿಗೆ ಜೋತು ಬೀಳದೆ ಅಭಿವೃದ್ಧಿ ಪಥದತ್ತ ಹೆಜ್ಜೆ ಇಟ್ಟಿದ್ದಾರೆ. ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವ ಭಾರತ ಬಲಿಷ್ಠವಾಗಬೇಕಾದರೆ ಕೆಲ ಕಠಿಣ ಕ್ರಮಗಳನ್ನು ಶ್ರೀಸಾಮಾನ್ಯರು ಎದುರಿಸಲೇಬೇಕಾಗಿದೆ.

ಈ ಎಲ್ಲ ಕಠಿಣ ಕ್ರಮಗಳ ನಡುವೆ ಹೂಡಿಕೆದಾರರಿಗೆ ಒಂದು ಸಣ್ಣ ಸಂತದ ಸುದ್ದಿಯೂ ಇದೆ. ಸಂಬಳವನ್ನೇ ನೆಚ್ಚಿಕೊಂಡಿರುವ ವೈಯಕ್ತಿಕ ಆದಾಯ ತೆರಿಗೆದಾರರಿಗೆ ಆದಾಯ ತೆರಿಗೆ ಮಿತಿಯನ್ನು 2 ಲಕ್ಷ ರು.ನಿಂದ 2.5 ಲಕ್ಷ ರು.ಗೆ ಏರಿಸಲಾಗಿದೆ. 60 ವರ್ಷಕ್ಕಿಂತ ಕೆಳಗಿನ ಎಲ್ಲ ತೆರಿಗೆದಾರರಿಗೆ ಇದು ಅನ್ವಯವಾಗಲಿದೆ. 60 ವರ್ಷಕ್ಕಿಂತ ಮೇಲಿನ ತೆರಿಗೆದಾರರ ಆದಾಯ ತೆರಿಗೆ ಮಿತಿಯನ್ನು 2.5 ಲಕ್ಷದಿಂದ 3 ಲಕ್ಷ ರು.ಗೆ ಏರಿಸಲಾಗಿದೆ. [ಕೇಂದ್ರ ಬಜೆಟ್ 2014 : ಮುಖ್ಯಾಂಶಗಳು]

Personal income tax slab raised Rs 2.5 lakhs

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ ಹೂಡಿಕೆಯನ್ನು 1 ಲಕ್ಷ ರು.ನಿಂದ 1.5 ಲಕ್ಷ ರುಗೆ ಏರಿಸಲಾಗಿದೆ. ಇದರರ್ಥ, ವರ್ಷದಲ್ಲಿ ಪಿಪಿಎಫ್ ಅಕೌಂಟ್ ನಲ್ಲಿ ಗರಿಷ್ಠ 1.5 ಲಕ್ಷ ರು. ಹೂಡಿಕೆ ಮಾಡಬಹುದಾಗಿದೆ. ಈ ಸೆಕ್ಷನ್ ಅಡಿಯಲ್ಲಿಯೂ ಸ್ವಲ್ಪಮಟ್ಟದ ತೆರಿಗೆಯನ್ನು ತೆರಿಗೆದಾರರು ಉಳಿಸಬಹುದಾಗಿದೆ.

ಸೆಕ್ಷನ್ 80ಸಿ ಅಡಿಯಲ್ಲಿ ಹೂಡಿಕೆ ಮಿತಿಯನ್ನು ಕನಿಷ್ಠ 2 ಲಕ್ಷಕ್ಕೆ ಏರಿಸಬಹುದೆಂಬ ನಿರೀಕ್ಷೆ ಜನರು ಇಟ್ಟುಕೊಂಡಿದ್ದರು. 80ಡಿ ಸೆಕ್ಷನ್ ಅಡಿಯಲ್ಲಿ ಕೂಡ ಮನೆ ಸಾಲದ ಮೇಲಿನ ಬಡ್ಡಿಯ ಮಿತಿಯನ್ನು 1.5 ಲಕ್ಷ ರು.ನಿಂದ 2 ಲಕ್ಷ ರು.ಗೆ ಏರಿಸಲಾಗಿದೆ. ಉಳಿದಂತೆ, ನೇರ ತೆರಿಗೆಯಲ್ಲಿ ಅರುಣ್ ಜೇಟ್ಲಿಯವರು ಯಾವುದೇ ಬದಲಾವಣೆಯನ್ನು ಮಾಡಿಲ್ಲ. ದೇಶ ಭಾರೀ ವಿತ್ತೀಯ ಕೊರತೆ ಅನುಭವಿಸುತ್ತಿರುವುದರಿಂದ ಈ ಕ್ರಮ ಅನಿವಾರ್ಯವಾಗಿತ್ತು ಎಂದು ಅವರು ಬಜೆಟ್ ಮಂಡನೆಯಲ್ಲಿ ಉಲ್ಲೇಖಿಸಿದರು. [ಬಜೆಟ್ 2014 : ಕರ್ನಾಟಕಕ್ಕೆ ಸಿಕ್ಕಿದ್ದೇನು?]

ಆದಾಯದ ಸ್ಲ್ಯಾಬ್ ಮತ್ತು ತೆರಿಗೆ ಕೆಳಗಿನಂತಿರಲಿದೆ

2.5 ಲಕ್ಷ ರು.ವರೆಗೆ ಆದಾಯ ಶೇ.0ರಷ್ಟು ತೆರಿಗೆ
2.5 ಲಕ್ಷ ರು.ನಿಂದ 5 ಲಕ್ಷ ರು.ವರೆಗೆ ಆದಾಯ 2.5 ಲಕ್ಷ ರು. ಮೇಲೆ ಶೇ.10ರಷ್ಟು ತೆರಿಗೆ
5 ಲಕ್ಷ ರು.ನಿಂದ 10 ಲಕ್ಷ ರು.ವರೆಗೆ ಆದಾಯ 5 ಲಕ್ಷ ರು. ಮೇಲೆ 30 ಸಾವಿರ ರು. + ಶೇ.20ರಷ್ಟು ತೆರಿಗೆ
10 ಲಕ್ಷ ರು.ಕ್ಕೂ ಹೆಚ್ಚು ಆದಾಯ 10 ಲಕ್ಷ ರು. ಮೇಲೆ 1 ಲಕ್ಷ 30 ಸಾವಿರ ರು. + ಶೇ.30ರಷ್ಟು ತೆರಿಗೆ
English summary
Union budget 2014 : Personal income tax slab raised Rs 2.5 lakhs from Rs 2 lakhs. Senior Citizens tax slab hiked to Rs 3 lakhs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X