ಆದಾಯ ತೆರಿಗೆ ಇಲಾಖೆ ನೇಮಕಾತಿ; ಬೆಂಗಳೂರಿನಲ್ಲಿ ಕೆಲಸ
ಆದಾಯ ತೆರಿಗೆ ಇಲಾಖೆ ಕರ್ನಾಟಕ ಮತ್ತು ಗೋವಾ ವಿಭಾಗ 71 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆದಿದೆ. ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಿದೆ.
ಬೆಂಗಳೂರು, ಫೆಬ್ರವರಿ 14; ಆದಾಯ ತೆರಿಗೆ ಇಲಾಖೆ ಕರ್ನಾಟಕ ಮತ್ತು ಗೋವಾ ವಿಭಾಗ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು 24/3/2023ರ ತನಕ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ.
ಇನ್ಸ್‌ಪೆಕ್ಟರ್ ಆಫ್ ಇನ್‌ಕಮ್ ಟ್ಯಾಕ್ಸ್ 10, ಟ್ಯಾಕ್ಸ್ ಅಸಿಸ್ಟೆಂಟ್ 32, ಮಲ್ಟಿ ಟಾಸ್ಕ್ ಸ್ಟಾಫ್ 29 ಸೇರಿ ಒಟ್ಟು 71ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಿದೆ.
ಇನ್ಸ್‌ಪೆಕ್ಟರ್ ಆಫ್ ಇನ್‌ಕಮ್ ಟ್ಯಾಕ್ಸ್ ಲೆವಲ್-7 ವೇತನ 44,900-1,42,400 ರೂ.ಗಳು. ಟ್ಯಾಕ್ಸ್ ಅಸಿಸ್ಟೆಂಟ್ ಲೆವೆಲ್-4 ವೇತನ 25,500-81,100 ರೂ. ಆಗಿದೆ. ಮಲ್ಟಿ ಟಾಸ್ಕ್ ಸ್ಟಾಫ್ ಲೆವೆಲ್-1 ವೇತನ 18,000-56,900 ರೂ. ಆಗಿದೆ.

ಇನ್ಸ್‌ಪೆಕ್ಟರ್ ಆಫ್ ಇನ್‌ಕಮ್ ಟ್ಯಾಕ್ಸ್ ಮತ್ತು ಟ್ಯಾಕ್ಸ್ ಅಸಿಸ್ಟೆಂಟ್ ಹುದ್ದೆಗಳಿಗೆ ಪದವಿ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಮಲ್ಟಿ ಟಾಸ್ಕ್ ಸ್ಟಾಫ್ ಲೆವಲ್ ಹುದ್ದೆಗೆ ಅಭ್ಯರ್ಥಿಗಳು 10ನೇ ತರಗತಿ ಪಾಸ್ ಆಗಿರಬೇಕು.
ವಯೋಮಿತಿ ವಿವರಗಳು; ಇನ್ಸ್‌ಪೆಕ್ಟರ್ ಆಫ್ ಇನ್‌ಕಮ್ ಟ್ಯಾಕ್ಸ್ ಹುದ್ದೆಗೆ ಗರಿಷ್ಠ ವಯೋಮಿತಿ 30 ವರ್ಷಗಳು. ಟ್ಯಾಕ್ಸ್ ಅಸಿಸ್ಟೆಂಟ್ ಹುದ್ದೆಗೆ 18 ರಿಂದ 27 ವರ್ಷಗಳು. ಮಲ್ಟಿ ಟಾಸ್ಕ್ ಸ್ಟಾಫ್ ಲೆವಲ್ ಹುದ್ದೆಗೆ 18 ರಿಂದ 25 ವರ್ಷಗಳು. ಕ್ರೀಡಾಕೋಡಾದಡಿ ಅರ್ಜಿ ಸಲ್ಲಿಸುವವರಿಗೆ 5, ಪರಿಶಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 10 ವರ್ಷದ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿಗಳನ್ನು ಸಲ್ಲಿಕೆ ಮಾಡುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ಹಾಗೂ ನಿವೃತ್ತ ಯೋಧರಿಗೆ ಯಾವುದೇ ಶುಲ್ಕವಿಲ್ಲ. ಉಳಿದ ಎಲ್ಲಾ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿ ಮಾಡಬೇಕು. ಅಂಚೆ ಅಥವ ಡಿಡಿ ಮೂಲಕ ಶುಲ್ಕವನ್ನು ಪಾವತಿ ಮಾಡಬಹುದಾಗಿದೆ.
ಅರ್ಜಿ ಸಲ್ಲಿಕೆ ಬಳಿಕ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಕೆ ಮಾಡಬೇಕು. ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಅಥವ ಬೇರೆ ಯಾವುದೇ ಕೋರಿಯರ್ ಸೇವೆ ಮೂಲಕ ಅರ್ಜಿ ಕಳಿಸಬಹುದಾಗಿದೆ.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ incometaxbengaluru.org ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.
ಅರ್ಜಿಗಳನ್ನು ಸಲ್ಲಿಕೆ ಮಾಡಲು ವಿಳಾಸ; Commissioner of Income Tax (Admin and TPS), O/o Principal Chief Commissioner of Income-Tax, Karnataka and Goa Region, Central Revenue Building, No.1, Queen's Road, Bengaluru, Karnataka-560001












Click it and Unblock the Notifications