ಯೂಟ್ಯೂಬ್ ವಿಡಿಯೋಗಳಿಂದ ಕೋಟಿ ಗಳಿಸಿದ್ದ ಉತ್ತರ ಪ್ರದೇಶದ ಯೂಟ್ಯೂಬರ್ ಮೇಲೆ ತೆರಿಗೆ ಅಧಿಕಾರಿಗಳ ದಾಳಿ

ಲಕ್ನೋ, ಜುಲೈ. 18: ಯೂಟ್ಯೂಬ್ ಶೋಗಳನ್ನು ಹೋಸ್ಟ್ ಮಾಡುವ ಮೂಲಕ ಗಳಿಸಿದ ಆದಾಯದ ಮೇಲಿನ ತೆರಿಗೆ ವಂಚನೆ ಆರೋಪದ ಮೇಲೆ ಉತ್ತರ ಪ್ರದೇಶ ಮೂಲದ ಯೂಟ್ಯೂಬರ್ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ದಾಳಿ ನಡೆಸಿದೆ. ದಾಳಿ ವೇಳೆ ಬರೇಲಿಯಲ್ಲಿರುವ ಅವರ ನಿವಾಸದಲ್ಲಿ 24 ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಹಾಗೂ ಇತರೆ ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ.

ಉತ್ತರ ಪ್ರದೇಶದ ಬರೇಲಿಯ ತಸ್ಲೀಮ್, 'ಟ್ರೇಡಿಂಗ್ ಹಬ್ 3.0' ಎಂಬ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದು, ಅದರ ಮೂಲಕ ಷೇರು ಮಾರುಕಟ್ಟೆಗೆ ಸಂಬಂಧಿಸಿದ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಅವರು ಕಳೆದ ಕೆಲವು ವರ್ಷಗಳಿಂದ ತಮ್ಮ ಚಾನೆಲ್ ಅನ್ನು ನಡೆಸುತ್ತಿದ್ದಾರೆ. ಸುಮಾರು 1 ಕೋಟಿ ರೂಪಾಯಿ ಗಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

Uttar Pradesh-based YouTuber

ತಸ್ಲೀಮ್ ಅವರ 'ಟ್ರೇಡಿಂಗ್ ಹಬ್ 3.0' ಯೂಟ್ಯೂಬ್ ಚಾನೆಲ್ ಪ್ರಸ್ತುತ 58 ವಿಡಿಯೋಗಳೊಂದಿಗೆ 1 ಲಕ್ಷ ಚಂದಾದಾರರನ್ನು ಹೊಂದಿದೆ. ತಸ್ಲೀಮ್‌ನ ಆರ್ಥಿಕ ಚಟುವಟಿಕೆಗಳ ಬಗ್ಗೆ ಪೊಲೀಸರು ಮಾಹಿತಿ ನೀಡಿದ ನಂತರ ಐಟಿ ಇಲಾಖೆ ಕ್ರಮ ತೆಗೆದುಕೊಂಡಿದೆ. ಇದಾದ ನಂತರ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ. ಅವರ ವಹಿವಾಟುಗಳು, ಬ್ಯಾಂಕ್ ಖಾತೆಗಳು ಮತ್ತು ಅವರು ಈ ಹಿಂದೆ ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್ಸ್ (ITR) ಗಳನ್ನು ಪರಿಶೀಲಿಸುತ್ತಿದ್ದಾರೆ.

ಈ ಬಗ್ಗೆ ಇನ್ನು ತನಿಖೆ ಮುಂದುವರೆದಿದ್ದು, ಸದ್ಯಕ್ಕೆ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ಐಟಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಆದರೆ, ತೆರಿಗೆ ವಂಚನೆ ಆರೋಪವನ್ನು ತಸ್ಲಿಮ್ ಕುಟುಂಬ ತಳ್ಳಿಹಾಕಿದೆ. ಅವರ ಸಹೋದರ ಫಿರೋಜ್ ಮಾತಾಡಿ, ತಾವು ಸುಮಾರು ಐದು ವರ್ಷಗಳಿಂದ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಅವರು ಗಳಿಸಿದ ಹಣಕ್ಕೆ ಆದಾಯ ತೆರಿಗೆ ಪಾವತಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಎನ್‌ಡಿಟಿವಿಯೊಂದಿಗೆ ಮಾತನಾಡಿದ ಫಿರೋಜ್, "ನಾವು ಯಾವುದೇ ತಪ್ಪು ಕೆಲಸ ಮಾಡುವುದಿಲ್ಲ, ನಾವು ನಮ್ಮ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತೇವೆ, ಇದರಿಂದ ನಾವು ಉತ್ತಮ ಆದಾಯವನ್ನು ಗಳಿಸುತ್ತೇವೆ ಇದು ಸತ್ಯ. ಈ ದಾಳಿಯು ಯೋಜಿತ ಪಿತೂರಿಯಾಗಿದೆ" ಎಂದು ಆರೋಪಿಸಿದ್ದಾರೆ.

ಕೇರಳದಲ್ಲಿ ಸುಮಾರು 10 ಯೂಟ್ಯೂಬರ್‌ಗಳು ಮತ್ತು ಇತರ ಸಾಮಾಜಿಕ ಮಾಧ್ಯಮದ ಪ್ರಭಾವಿಗಳ ಮೇಲೆ ತೆರಿಗೆ ಇಲಾಖೆ ದಾಳಿ ನಡೆಸಿದ ವಾರಗಳ ನಂತರ ಈ ಬೆಳವಣಿಗೆ ಬಂದಿದೆ. ಹೆಚ್ಚಾಗಿ ಯುವ ಕಲಾವಿದರು ಮತ್ತು ನಟರ ಮೇಲೆ ದಾಳಿ ನಡೆದಿದೆ ಎಂದು ಪಿಟಿಐ ವರದಿ ಮಾಡಿದೆ. ಜೂನ್‌ನಲ್ಲಿ, ಐಟಿ ಇಲಾಖೆಯು ಹಲವಾರು ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಮತ್ತು ತಮ್ಮ ಆದಾಯ ಮತ್ತು ಲಾಭವನ್ನು ಅವರ ಗಳಿಕೆಗೆ ಅನುಗುಣವಾಗಿ ಬಹಿರಂಗಪಡಿಸದವರ ವಿರುದ್ಧ ತನಿಖೆಯನ್ನು ಪ್ರಾರಂಭಿಸಿತ್ತು.

ಐಟಿ ಇಲಾಖೆಯ ಆಡಳಿತಾತ್ಮಕ ಪ್ರಾಧಿಕಾರವಾದ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT), ವ್ಯಾಪಾರ ಅಥವಾ ವೃತ್ತಿಯಲ್ಲಿ ಪಡೆದ ಪ್ರಯೋಜನಗಳಿಗೆ ಸಂಬಂಧಿಸಿದಂತೆ ಕಳೆದ ವರ್ಷ ಹೊಸ ಟಿಡಿಎಸ್ ನಿಬಂಧನೆಯನ್ನು ಪರಿಚಯಿಸಿದೆ. ಐಟಿ ಕಾಯಿದೆಯಲ್ಲಿ 194R ಎಂಬ ಹೊಸ ವಿಭಾಗವನ್ನು ತರಲಾಗಿದೆ. ಇದು ವ್ಯಾಪಾರ ಅಥವಾ ವೃತ್ತಿಯಿಂದ ಉಂಟಾಗುವ ಯಾವುದೇ ಲಾಭ ಅಥವಾ ಒಂದು ವರ್ಷದಲ್ಲಿ 20,000 ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ಪಡೆಯುವವರಿಗೆ 10% ಟಿಡಿಎಸ್ ಕಡಿತಗೊಳಿಸುವ ಅಗತ್ಯವಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+