ಡಿಕೆ ಶಿವಕುಮಾರ್ ಪಾಲುದಾರಿಕೆಯ ರಿಯಲ್ ಎಸ್ಟೇಟ್ ಕಂಪನಿ ಶೋಭಾ ಮೇಲೆ ಐಟಿ ಇಲಾಖೆ ದಾಳಿ
ಕಳೆದ ವರ್ಷ ಡಿಸೆಂಬರ್‌ನಲ್ಲಿ ರಿಯಲ್ ಎಸ್ಟೇಟ್ ಕಂಪನಿಯ ವಿರುದ್ಧ 201 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಕಚೇರಿ ಪ್ರಕರಣ ದಾಖಲಿಸಿತ್ತು.
ಬೆಂಗಳೂರು, ಮಾರ್ಚ್ 20: ಸೋಮವಾರ ಬೆಳಗ್ಗೆ ಶೋಭಾ ಡೆವಲಪರ್ಸ್‌ನ ಪ್ರಧಾನ ಕಚೇರಿ ಮತ್ತು ಇತರ ಸಂಬಂಧಿತ ಕಚೇರಿಗಳ ಮೇಲೆ ಆದಾಯ ತೆರಿಗೆ ಬೆಂಗಳೂರು ಮತ್ತು ಚೆನ್ನೈ ವಿಭಾಗದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವರದಿಗಳ ಪ್ರಕಾರ ಐಟಿ ಅಧಿಕಾರಿಗಳು ಬೆಳಗ್ಗೆಯಿಂದಲೇ ಕಚೇರಿಯಲ್ಲಿ ಕಡತಗಳನ್ನು ಪರಿಶೀಲಿಸುತ್ತಿದ್ದಾರೆ.
ಸುಮಾರು 50 ವಾಹನಗಳಲ್ಲಿ ಹತ್ತು ಅಧಿಕಾರಿಗಳಿದ್ದ ಐದು ತಂಡಗಳು ವೈಟ್‌ಫೀಲ್ಡ್ ರಸ್ತೆಯಲ್ಲಿರುವ ಹೂಡಿ ಮತ್ತು ಬನ್ನೇರುಘಟ್ಟ ರಸ್ತೆಯ ಅರೆಕೆರೆ ಕಚೇರಿಗಳ ಮೇಲೆ ದಾಳಿ ನಡೆಸಿವೆ ಎಂದು ಟಿವಿ9 ಕನ್ನಡ ವರದಿ ಮಾಡಿದೆ. ಐಟಿ ಅಧಿಕಾರಿಗಳು ಬೆಳಗ್ಗೆಯಿಂದಲೇ ಕಡತಗಳನ್ನು ಪರಿಶೀಲಿಸುತ್ತಿದ್ದಾರೆ. ಸೋಮವಾರದಂದು ಕಂಪನಿಯ ಷೇರುಗಳು ಬೆಳಗಿನ ಅವಧಿಗಳಲ್ಲಿ ರೂ 526.85 ಕ್ಕೆ ಇಳಿದಿವೆ. ನಂತರ 1:42 IST ಕ್ಕೆ 2. 48 ರಷ್ಟು ಕಡಿಮೆಯಾಗಿ ರೂ 531.95 ಕ್ಕೆ ಇಳಿಕೆಯಾಗಿವೆ.

ಪೊಲೀಸ್ ಬಂದೋಬಸ್ತ್ನಲ್ಲಿ ಶೋಭಾ ಡೆವಲಪರ್ಸ್ ಮುಖ್ಯ ಕಚೇರಿಯಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳ ದಾಳಿ ಹಿನ್ನಲೆ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಪಾಲುದಾರಿಕೆಯ ಶೋಭಾ ಡೆವಲಪರ್ಸ್ ಮುಖ್ಯ ಕಚೇರಿಯಲ್ಲಿ ಇಂದಿನ ಕೆಲಸ ಸಂಪೂರ್ಣ ಸ್ಥಗಿತ ಮಾಡಲಾಗಿದೆ. ಕಚೇರಿಯ ಯಾವುದೇ ನೌಕರರು ಹೊರಗೆ ಹೋಗದಂತೆ ಐಟಿ ಅಧಿಕಾರಿಗಳು ಸೂಚಿಸಿದ್ದಾರೆ.
ಬೆಂಗಳೂರು ಮಹಾನಗರ ಪಾಲಿಕೆಯು ಜನವರಿಯಲ್ಲಿ ಶೋಭಾ ಡೆವಲಪರ್ಸ್ ಕಂಪನಿಯು ಯೋಜನೆಯ ಅನುಮೋದನೆಗಾಗಿ ನಕಲಿ ದಾಖಲೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದು, ಶೋಭಾ ಡೆವಲಪರ್ಸ್ ಕಂಪನಿಯ ಯೋಜನೆಗಳಲ್ಲಿ ಒಂದನ್ನು ಅಕ್ರಮ ಎಂದು ಕರೆದಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ರಿಯಲ್ ಎಸ್ಟೇಟ್ ಕಂಪನಿಯ ವಿರುದ್ಧ 201 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಕಚೇರಿ ಪ್ರಕರಣ ದಾಖಲಿಸಿತ್ತು.

ಶೋಭಾ ವಸತಿ ಮತ್ತು ವಾಣಿಜ್ಯ ಆಸ್ತಿಗಳ ನಿರ್ಮಾಣ ಮತ್ತು ಅಭಿವೃದ್ಧಿಯಲ್ಲಿ ತೊಡಗಿದೆ . ಹೆಚ್ಚುವರಿಯಾಗಿ ಇದು ಒಪ್ಪಂದದ ಕೆಲಸಗಳನ್ನು ತೆಗೆದುಕೊಳ್ಳುತ್ತದೆ. ಶೋಭಾ ಬೆಂಗಳೂರು ಮತ್ತು ಕರ್ನಾಟಕದಲ್ಲಿ ತಮ್ಮ ಮಾರುಕಟ್ಟೆ ವಿಸ್ತರಿಸುವುದರೊಂದಿಗೆ ದುಬೈನಂತಹ ದೇಶಗಳಲ್ಲಿಯೂ ಕೆಲಸ ಮಾಡಿದೆ.
ಬೆಂಗಳೂರು ಮೂಲದ ಶೋಭಾ ಕಂಪನಿ ಈ ಹಿಂದೆ 2.925 ಕೋಟಿ ರೂಪಾಯಿ ಪಾವತಿಸುವ ಮೂಲಕ ಮಾರುಕಟ್ಟೆ ನಿಯಂತ್ರಕರಿಗೆ ಮೋಸ ಮತ್ತು ಅಕ್ರಮ ವ್ಯಾಪಾರ ಪದ್ಧತಿಗಳ ನಿಷೇಧ (ಪಿಎಫ್‌ಯುಟಿಪಿ) ಪ್ರಕರಣವನ್ನು ಇತ್ಯರ್ಥಪಡಿಸಿತ್ತು. ಇದರ ನಂತರ, ಶೋಭಾ ಡೆವಲಪರ್ಸ್‌ನ ಮೂವರು ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಸಿಎಫ್‌ಒ ವಿರುದ್ಧ ಆರಂಭಿಸಲಾದ ತೀರ್ಪು ಪ್ರಕ್ರಿಯೆಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಸೆಬಿ ನೋಟಿಸ್‌ನಲ್ಲಿ ತಿಳಿಸಿತ್ತು.
ಇದಕ್ಕೂ ಮೊದಲು, ಡಿಕೆ ಶಿವಕುಮಾರ್ ಮತ್ತು ಅವರ ಕುಟುಂಬ ಸದಸ್ಯರು, ಸಹವರ್ತಿಗಳೊಂದಿಗೆ ಶೋಭಾ ಕಂಪನಿ ನಡೆಸಿದ ಕೆಲವು ವಹಿವಾಟುಗಳ ಬಗ್ಗೆ ತನಿಖೆ ನಡೆಸಿದ ನಂತರ ಕಂಪನಿ ಮತ್ತು ಅದರ ಪ್ರಮುಖ ಅಧಿಕಾರಿಗಳ ವಿರುದ್ಧ ಪಿಎಫ್‌ಯುಟಿಪಿ ವಿಚಾರಣೆಯನ್ನು ನಡೆಸಿತ್ತು.
ಮೂವರು ಕಾರ್ಯನಿರ್ವಾಹಕ ನಿರ್ದೇಶಕರುಗಳಾದ ರವಿಪುತನ್ ನಡುವಿನಕ್ಕಾಟ್ ಚೆಂತಾ ಮರಕ್ಷಾ ಮೆನನ್, ಜಗದೀಶ್ ಚಂದ್ರ ಶರ್ಮಾ ಮತ್ತು ರಾಮಕೃಷ್ಣನ್ ಪ್ರಭಾಕರನ್ ಅವರಲ್ಲದೆ, ಸೆಬಿ ತನ್ನದೇ ಮುಖ್ಯ ಹಣಕಾಸು ಅಧಿಕಾರಿ ಸುಭಾಷ್ ಮೋಹನ್ ಭಟ್ ವಿರುದ್ಧ ತನಿಖೆ ನಡೆಸಿತ್ತು.












Click it and Unblock the Notifications