Get Updates
Get notified of breaking news, exclusive insights, and must-see stories!

Budget 2024: ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ: ನಿರ್ಮಲಾ ಸೀತಾರಾಮನ್

ದೆಹಲಿ, ಫೆಬ್ರವರಿ 1: 7 ಲಕ್ಷದವರೆಗೂ ಯಾವುದೇ ಆದಾಯ ತೆರಬೇಕಾದ ಅಗತ್ಯವಿಲ್ಲ ಎಂದು ಕೇಂದ್ರ ಬಜೆಟ್ ನಲ್ಲಿ ಘೋಷಿಸಲಾಗಿದೆ. ಹಿಂದಿನ ತೆರಿಗೆ ಪದ್ಧತಿಯೇ ಮುಂದುವರಿಸಲು ನಿರ್ಧಾರ ಮಾಡಲಾಗಿದ್ದು, ನೇರ ಹಾಗೂ ಪರೋಕ್ಷ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಹಿಂದಿನ ತೆರಿಗೆ ಪದ್ಧತಿಯೇ ಈ ವರ್ಷವೂ ಮುಂದುವರಿಕೆಯಾಗಲಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಆದಾಯ ತೆರಿಗೆ ಸ್ಲ್ಯಾಬ್ ಮತ್ತು ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ತೆರಿಗೆಗೆ ಯಾವುದೇ ಬದಲಾವಣೆಗಳನ್ನು ಮಾಡಲು ಪ್ರಸ್ತಾಪಿಸುವುದಿಲ್ಲ ಮತ್ತು ಆಮದು ಸುಂಕಗಳು ಸೇರಿದಂತೆ ನೇರ ಮತ್ತು ಪರೋಕ್ಷ ತೆರಿಗೆ ದರಗಳಿಗೆ ಅದೇ ತೆರಿಗೆ ದರಗಳನ್ನು ಉಳಿಸಿಕೊಳ್ಳಲು ಪ್ರಸ್ತಾಪಿಸಿದ್ದೇನೆ ಎಂದು ಸೀತಾರಾಮನ್ ಹೇಳಿದರು. ತೆರಿಗೆದಾರರ ಕೊಡುಗೆಗಾಗಿ ಸಚಿವರು ಧನ್ಯವಾದಗಳನ್ನು ಅರ್ಪಿಸಿದರು. ತೆರಿಗೆದಾರರಿಂದ ಬರುವ ಆದಾಯವನ್ನು ಬುದ್ಧಿವಂತಿಕೆಯಿಂದ ಬಳಸಲಾಗುತ್ತಿದೆ ಎಂದು ಅವರು ತಿಳಿಸಿದರು.

Budget 2024: Income Tax Slabs & Rates: No relief for taxpayers

ಲೋಕಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಾಲಾ, ರಚನಾತ್ಮಕ ಸುಧಾರಣೆಗಳು, ಜನಪರ ಕಾರ್ಯಕ್ರಮಗಳು ಮತ್ತು ಉದ್ಯೋಗಾವಕಾಶಗಳು ದೇಶದ ಆರ್ಥಿಕತೆಯನ್ನು ಬಲಪಡಿಸಲು ಸಹಾಯ ಮಾಡಿದೆ ಎಂದು ಹೇಳಿದರು. ಮುಂಬರುವ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಜನಾಶೀರ್ವಾದ ನೀಡಲಿದ್ದಾರೆ ಎಂದು ಸಚಿವರು ಭರವಸೆ ನೀಡಿದರು.

ಮುದ್ರಾ ಯೋಜನೆ, ಜನ್ ಧನ್ ಖಾತೆಗಳು, ರಾಷ್ಟ್ರೀಯ ಶಿಕ್ಷಣ ನೀತಿ, ಪಿಎಂ ಕಿಸಾನ್ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಸೇರಿದಂತೆ ಮೋದಿ ಸರ್ಕಾರವು ಪ್ರಾರಂಭಿಸಿದ ಹಲವಾರು ಕಲ್ಯಾಣ ಯೋಜನೆಗಳು ದೇಶದ ಕೋಟ್ಯಂತರ ಜನರಿಗೆ ಹೇಗೆ ಪ್ರಯೋಜನವನ್ನು ನೀಡಿವೆ ಎಂಬುದನ್ನು ತಿಳಿಸಿದರು. "ಬಡವರು, ಮಹಿಳೆಯರು, ಯುವಕರು ಮತ್ತು ರೈತರ (ಗರೀಬ್, ಮಹಿಳಾ, ಯುವ ಮತ್ತು ಅನ್ನದಾತ) ಅಗತ್ಯಗಳು ಮತ್ತು ಆಕಾಂಕ್ಷೆಗಳು ಮೋದಿ ಸರ್ಕಾರದ ಗಮನದಲ್ಲಿವೆ ಎಂದು ಸೀತಾರಾಮನ್ ಹೇಳಿದರು.

ಫೆಬ್ರವರಿ 1, 2023 ರಂದು ಘೋಷಿಸಲಾದ ಕೊನೆಯ ಪೂರ್ಣ ಬಜೆಟ್‌ನಲ್ಲಿ, ಸೀತಾರಾಮನ್ ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ರಿಯಾಯಿತಿಯನ್ನು 5 ಲಕ್ಷದಿಂದ 7 ಲಕ್ಷಕ್ಕೆ ಹೆಚ್ಚಿಸುವುದಾಗಿ ಘೋಷಿಸಿದರು. ಹೊಸ ಆದಾಯ ತೆರಿಗೆ ಪದ್ಧತಿಯನ್ನು ಡೀಫಾಲ್ಟ್ ಆಯ್ಕೆಯನ್ನಾಗಿ ಮಾಡಲು ಅವರು ಪ್ರಸ್ತಾಪಿಸಿದರು. ಹೊಸ ತೆರಿಗೆ ಪದ್ಧತಿಯಲ್ಲಿ ರಿಯಾಯಿತಿ ಮಿತಿಯನ್ನು 7 ಲಕ್ಷಕ್ಕೆ ಹೆಚ್ಚಿಸಲು ನಾನು ಪ್ರಸ್ತಾಪಿಸುತ್ತೇನೆ ಮತ್ತು ಅದನ್ನು ಆಯ್ಕೆ ಮಾಡುವ ವ್ಯಕ್ತಿಗಳು ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ ಎಂದು ಸೀತಾರಾಮನ್ ಹೇಳಿದರು. ಹಣಕಾಸು ಸಚಿವರು ಹೊಸ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆಯನ್ನು ಘೋಷಿಸಿದ್ದರು.

ಹಳೆಯ ಟ್ಯಾಕ್ಸ್ ಪದ್ಧತಿಯಲ್ಲಿ ಹೀಗಿದೆ ದರ

  • 2.5 ಲಕ್ಷ ರೂವರೆಗಿನ ವಾರ್ಷಿಕ ಆದಾಯಕ್ಕೆ ತೆರಿಗೆ ವಿನಾಯಿತಿ ಇರುತ್ತದೆ.
  • 2.5 ಲಕ್ಷದಿಂದ 5 ಲಕ್ಷ ರೂವರೆಗಿನ ಆದಾಯಕ್ಕೆ: ಶೇ. 5ರಷ್ಟು ತೆರಿಗೆ
  • 5 ಲಕ್ಷ ರೂನಿಂದ 7.5 ಲಕ್ಷ ರೂ: ಶೇ. 10
  • 7.5 ಲಕ್ಷ ರೂನಿಂದ 10 ಲಕ್ಷ ರೂ: ಶೇ. 15
  • 10 ಲಕ್ಷ ರೂನಿಂದ 12.5 ಲಕ್ಷ ರೂ: ಶೇ. 20
  • 12.5 ಲಕ್ಷ ರೂನಿಂದ 15 ಲಕ್ಷ ರೂ: ಶೇ. 25
  • 15 ಲಕ್ಷ ರೂ ಮೇಲ್ಪಟ್ಟ ಆದಾಯ: ಶೇ. 30ರಷ್ಟು ತೆರಿಗೆ

ಹೊಸ ತೆರಿಗೆ ಪದ್ಧತಿಯಲ್ಲಿ ದರಗಳು

  • 3 ಲಕ್ಷ ರೂವರೆಗಿನ ವಾರ್ಷಿಕ ಆದಾಯಕ್ಕೆ ತೆರಿಗೆ ಬಾಧ್ಯತೆ ಇಲ್ಲ
  • 3 ಲಕ್ಷ ರೂನಿಂದ 6 ಲಕ್ಷ ರೂವರೆಗಿನ ಆದಾಯ: ಶೇ. 5ರಷ್ಟು ತೆರಿಗೆ
  • 6 ಲಕ್ಷ ರೂನಿಂದ 9 ಲಕ್ಷ ರೂ: ಶೇ. 10
  • 9 ಲಕ್ಷ ರೂನಿಂದ 12 ಲಕ್ಷ ರೂ: ಶೇ. 15
  • 12 ಲಕ್ಷ ರೂನಿಂದ 15 ಲಕ್ಷ ರೂ: ಶೇ. 20
  • 15 ಲಕ್ಷ ರೂ ಮೇಲ್ಪಟ್ಟ ಆದಾಯ: ಶೇ. 30ರಷ್ಟು ತೆರಿಗೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+