Get Updates
Get notified of breaking news, exclusive insights, and must-see stories!

ನ.28ರಂದು ಸುಕೇಶ್ ಚಂದ್ರಶೇಖರ್ ಒಡೆತನದ ಐಷಾರಾಮಿ ಕಾರುಗಳ ಹರಾಜು

ವಂಚನೆ ಆರೋಪಿ ಸುಕೇಶ್ ಚಂದ್ರಶೇಖರ್ ಅವರಿಗೆ ಸೇರಿದ ಐಷಾರಾಮಿ ಕಾರುಗಳನ್ನು ಬೆಂಗಳೂರಿನ ಆದಾಯ ತೆರಿಗೆ ಇಲಾಖೆ ಹರಾಜು ಮಾಡಲಿದೆ. ಕೇಂದ್ರ ಕಾನೂನು ಸಚಿವಾಲಯದ ಅಧಿಕಾರಿ ಎಂದು ಹೇಳಿಕೊಂಡು, ವಿವಿಧ ಸಂಸ್ಥೆಗಳಿಗೆ ವಂಚಿಸಿದ ಆರೋಪದ ಮೂಲಕ ಆತ ಗಳಿಸಿದ ಮೊತ್ತವನ್ನು ವಸೂಲಿ ಮಾಡುವ ಭಾಗವಾಗಿ ಕಾರುಗಳ ಹರಾಜು ನಡೆಸಲಾಗುವುದು.

ಪಿಟಿಐ ವರದಿ ಮಾಡಿರುವ ಪ್ರಕಾರ, ಸುಕೇಶ್ ಒಡೆತನದ ಬಿಎಂಡಬ್ಲ್ಯು ಎಂ5, ಟೊಯೊಟಾ ಪ್ರಾಡೊ, ರೇಂಜ್ ರೋವರ್, ಲಂಬೋರ್ಗಿನಿ, ಜಾಗ್ವಾರ್ ಎಕ್ಸ್‌ಕೆಆರ್ ಕೂಪೆ, ರೋಲ್ಸ್ ರಾಯ್ಸ್, ಬೆಂಟ್ಲಿ, ಇನ್ನೋವಾ ಕ್ರಿಸ್ಟಾ, ಟೊಯೊಟಾ ಫಾರ್ಚುನರ್, ನಿಸ್ಸಾನ್ ಟೀನಾ ಮತ್ತು ಪೋರ್ಷೆ ಸೇರಿದಂತೆ ಐಷಾರಾಮಿ ಕಾರುಗಳು ಹರಾಜಿಗೆ ಬರಲಿವೆ, ಕಾರುಗಳ ಹೊರತಾಗಿ ಅವರ ಸ್ಪೋರ್ಟ್ಸ್ ಬೈಕ್‌ಗಳೂ ಹರಾಜಾಗಲಿವೆ.

IT Department to Auction Luxury Cars Owned by Sukesh Chandrasekhar in Bengaluru

ಈ ವಾಹನಗಳ ಬೆಲೆ ಕನಿಷ್ಠ ₹2.03 ಲಕ್ಷದಿಂದ ಗರಿಷ್ಠ ₹1.74 ಕೋಟಿ ಎಂದು ಹೇಳಲಾಗುತ್ತಿದೆ. ಹರಾಜಿಗಿರುವ ಎಲ್ಲಾ ವಾಹನಗಳು ಸುಸ್ಥಿತಿಯಲ್ಲಿವೆ ಎಂದು ಐಟಿ ಇಲಾಖೆ ಸ್ಪಷ್ಟಪಡಿಸಿದೆ.

ದೇಶದ ವಿವಿಧ ಭಾಗಗಳಿಂದ ವಶ

"ಸುಕೇಶ್ ಒಡೆತನದ ಈ ವಾಹನಗಳನ್ನು ಐಟಿ ಇಲಾಖೆಯು 2018 ರಲ್ಲಿ ಕೇರಳ ಮತ್ತು ತಮಿಳುನಾಡು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ವಶಪಡಿಸಿಕೊಂಡಿದೆ. ಅವರು ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಹಲವಾರು ಕೋಟಿಗಳಷ್ಟು ಬಾಕಿ ಉಳಿಸಿಕೊಂಡಿದ್ದಾರೆ, ಆದ್ದರಿಂದ ನಾವು ಆ ಬಾಕಿಗಳನ್ನು ವಸೂಲಿ ಮಾಡಲು ನಿರ್ಧರಿಸಿದ್ದೇವೆ. ಈ ಅತ್ಯಾಧುನಿಕ ವಾಹನಗಳನ್ನು ಹರಾಜಿಗೆ ಹಾಕುವ ಮೂಲಕ," ಎಂದು ಮೂಲವೊಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಚಂದ್ರಶೇಖರ್ (33) ದೆಹಲಿ, ಮುಂಬೈ, ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ ಕನಿಷ್ಠ 32 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. 2020 ಮತ್ತು 2021 ರ ಆರಂಭದ ನಡುವೆ, ಅವರು ದೆಹಲಿಯ ರೋಹಿಣಿ ಜೈಲಿನಲ್ಲಿದ್ದಾಗ, ಜೈಲಿನಲ್ಲಿದ್ದ ಕೈಗಾರಿಕೋದ್ಯಮಿ ಶಿವಿಂದರ್ ಮೋಹನ್ ಅವರ ಪತ್ನಿ ಅದಿತಿ ಸಿಂಗ್ ಅವರನ್ನು ಕೇಂದ್ರ ಕಾನೂನು ಕಾರ್ಯದರ್ಶಿ ಎಂದು ಹೇಳಿಕೊಂಡು ಜೈಲಿನಿಂದ ಪತಿಗೆ ಜಾಮೀನಿ ಕೊಡಿಸುವುದಾಗಿ ನಂಬಿಸಿ ₹ 200 ಕೋಟಿ ವಂಚಿಸಿದ್ದರು.

ಈ ಪ್ರಕರಣದಲ್ಲಿ ಪೊಲೀಸರು ನಾಲ್ಕು ಚಾರ್ಜ್ ಶೀಟ್‌ಗಳನ್ನು ಸಲ್ಲಿಸಿದ್ದು, ಚಂದ್ರಶೇಖರ್‌ಗೆ ಜೈಲು ನಿಯಮಗಳನ್ನು ತಪ್ಪಿಸಲು ಸಹಾಯ ಮಾಡಿದ ಐವರು ಜೈಲು ಅಧಿಕಾರಿಗಳು ಸೇರಿದಂತೆ 17 ಜನರ ವಿರುದ್ಧ ಆರೋಪ ಹೊರಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+