ಭಾರತದಲ್ಲಿನ BBC ಕಛೇರಿಗಳ ಮೇಲೆ ಐಟಿ ದಾಳಿ: ಹತ್ತಿರದಿಂದ ಗಮನಿಸುತ್ತಿದೆ UK ಸರ್ಕಾರ- ಮೂಲಗಳು ಹೇಳಿದ್ದೇನು? ತಿಳಿಯಿರಿ
ಭಾರತದಲ್ಲಿನ ಬಿಬಿಸಿ ಕಚೇರಿಗಳ ಮೇಲಿನ ದಾಳಿಯನ್ನು ಹತ್ತಿರದಿಂದ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಬ್ರಿಟನ್ ಸರ್ಕಾರದ ಮೂಲಗಳು ಹೇಳಿದೆ.
ಲಂಡನ್,
ಫೆಬ್ರವರಿ 14: ತೆರಿಗೆ ವಂಚನೆ ಆರೋಪದ ತನಿಖೆಯ ಭಾಗವಾಗಿ ಆದಾಯ ತೆರಿಗೆ ಇಲಾಖೆ ದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳಲ್ಲಿ ಮಂಗಳವಾರ ಸಮೀಕ್ಷೆ ನಡೆಸುತ್ತಿದೆ. ಅಧಿಕಾರಿಗಳು ನವದೆಹಲಿಯ ಬಿಬಿಸಿ ಕಚೇರಿಯಲ್ಲಿದ್ದಾರೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಖಚಿತಪಡಿಸಿದ್ದಾರೆ. ಇದು ಸಮೀಕ್ಷೆಯೇ ಹೊರತು ದಾಳಿಯಲ್ಲ ಎಂದೂ ಅದು ಹೇಳಿದೆ. ಕೆಲವು ಅಕ್ರಮಗಳ ಆಧಾರದ ಮೇಲೆ BBC ಗೆ ಸಂಬಂಧಿಸಿದ ವಿಚಾರಗಳನ್ನು ಇಲಾಖೆಯು ತನಿಖೆ ನಡೆಸುತ್ತಿದೆ ಎಂದು 'ರಾಷ್ಟ್ರೀಯ ಮಾಧ್ಯಮ'ಳಿಗೆ ತಿಳಿಸಿದ್ದಾರೆ. 'ಈ ಅಕ್ರಮಗಳನ್ನು ಪತ್ತೆಹಚ್ಚಲು ಸಮೀಕ್ಷೆಗಳನ್ನು ನಡೆಸಲಾಗುತ್ತದೆ. ಸಮೀಕ್ಷೆ ಪೂರ್ಣಗೊಂಡ ನಂತರವಷ್ಟೇ ಉದ್ದೇಶಪೂರ್ವಕ ಅಕ್ರಮಗಳು ನಡೆದಿವೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತ ಪಡಿಸಿಕೊಳ್ಳಲಾಗುವುದು,' ಎಂದು ಅಧಿಕಾರಿಯೊಬ್ಬರು 'ಹಿಂದುಸ್ತಾನ್ ಟೈಮ್ಸ್'ಗೆ ತಿಳಿಸಿದ್ದಾರೆ. id="toptextpromo"> id='are-slot-1' class='oiad oi-axt oiadv'>
ಮೋದಿ ಕುರಿತ ಡಾಕ್ಯುಮೆಂಟರಿ ಬಿಡುಗಡೆ ಮಾಡಿದ್ದ ಬಿಬಿಸಿ
ಸುದ್ದಿ ಹರಡುತ್ತಿದ್ದಂತೆ, ದೆಹಲಿಯ ಕಸ್ತೂರ್ ಬಾ ಗಾಂಧಿ ಮಾರ್ಗದಲ್ಲಿರುವ ಬಿಬಿಸಿ ಕಚೇರಿಯ ಹೊರಗೆ ಜನರು ಮತ್ತು ಮಾಧ್ಯಮ ಸಿಬ್ಬಂದಿ ಕಾಣಿಸಿಕೊಂಡಿದ್ದಾರೆ. ಮುಂಬೈನ ಸಾಂತಾಕ್ರೂಜ್‌ನಲ್ಲಿರುವ ಕಚೇರಿಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದು ತಿಳಿದುಬಂದಿದೆ. ಪ್ರಧಾನಿ ಮೋದಿ ಅವರ ಕುರಿತ ಡಾಕ್ಯುಮೆಂಟರಿಯನ್ನು ಕಳೆದ ತಿಂಗಳು 'ಬಿಬಿಸಿ' ಬಿಡುಗಡೆ ಮಾಡಿತ್ತು. ಇದು ಭಾರತದಲ್ಲಿ ಭಾರೀ ವಿವಾದವನ್ನು ಹುಟ್ಟುಹಾಕಿತ್ತು. ಈ ಡಾಕ್ಯುಮೆಂಟರಿಯಲ್ಲಿ ಗುಜರಾತ್ ಗಲಭೆಯ ಬಗ್ಗೆ ಚಿತ್ರಿಕರಿಸಲಾಗಿದೆ.
|
ಬಿಬಿಸಿ ವಿಷವನ್ನು ಉಗುಳಬಾರದು ಎಂದ ಬಿಜೆಪಿ
ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಮಾತನಾಡಿ, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಬಿಬಿಸಿ ವಿಷವನ್ನು ಉಗುಳಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ. 'ಬಿಬಿಸಿ ಭಾರತ ವಿರೋಧಿ ಪ್ರಚಾರದಲ್ಲಿ ತೊಡಗಿದೆ' ಎಂದು ಭಾಟಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ. 'ಭಾರತವು ಪ್ರತಿ ಸಂಸ್ಥೆಗೆ ಅವಕಾಶವನ್ನು ನೀಡುವ ದೇಶವಾಗಿದೆ. ಎಲ್ಲಿಯವರೆಗೆ ನೀವು ವಿಷವನ್ನು ಉಗುಳುವುದಿಲ್ಲವೂ ಅಲ್ಲಿಯವರೆಗೆ' ಎಂದೂ ಹೇಳಿದ್ದಾರೆ. ಭಾಟಿಯಾ ಅವರು ಐಟಿ ಕ್ರಮದ ಬಗ್ಗೆ ಕಾಂಗ್ರೆಸ್‌ನ ಟೀಕೆಗಳನ್ನು ತಿರಸ್ಕರಿಸಿದ್ದಾರೆ. ಸರ್ಕಾರಿ ಸಂಸ್ಥೆ ತನ್ನ ಕೆಲಸವನ್ನು ಮಾಡಲು ಅನುಮತಿಸಬೇಕು ಎಂದೂ ಅವರು ಸಮರ್ಥಿಸಿಕೊಂಡಿದ್ದಾರೆ.

'ಬೆದರಿಕೆ ತಂತ್ರ' ಎಂದ ಕಾಂಗ್ರೆಸ್
ಬಿಬಿಸಿ ಕಚೇರಿಗಳಲ್ಲಿ ನಡೆದ ಸಮೀಕ್ಷೆ ಕಾರ್ಯಾಚರಣೆಯನ್ನು 'ಬೆದರಿಕೆ ತಂತ್ರ' ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ನರೇಂದ್ರ ಮೋದಿ ಸರ್ಕಾರವು ಟೀಕೆಗಳಿಗೆ ಹೆದರುತ್ತಿದೆ ಎಂಬುದನ್ನು ಈ ಕ್ರಮವು ತೋರಿಸುತ್ತದೆ ಎಂದು ಆರೋಪಿಸಿದೆ. ಗೌತಮ್ ಅದಾನಿ ವಿಷಯದ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ಪಕ್ಷವು ಒತ್ತಾಯಿಸುತ್ತಿದ್ದರೆ, ಬಿಬಿಸಿ ಹಿಂದೆ ಸರ್ಕಾರ ಬಿದ್ದಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. 'ವಿನಾಶ ಕಾಲೇ ವಿಪರೀಪ ಬುದ್ಧಿ' (ವಿನಾಶ ಸಮೀಪಿಸಿದಾಗ, ವ್ಯಕ್ತಿಯ ಬುದ್ಧಿಶಕ್ತಿಯು ಅತನ ಯೋಚನೆಗೆ ವಿರುದ್ಧವಾಗಿ ಕೆಲಸ ಮಾಡುತ್ತದೆ) ಎಂದು ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆಸಿ ವೇಣುಗೋಪಾಲ್, ಬಿಬಿಸಿ ಕಚೇರಿಗಳ ಮೇಲೆ ನಡೆದ ಐಟಿ ದಾಳಿಯು 'ಹತಾಶೆಯಿಂದ ಕೂಡಿದೆ ಮತ್ತು ಮೋದಿ ಸರ್ಕಾರವು ಟೀಕೆಗಳಿಗೆ ಹೆದರುತ್ತಿದೆ ಎಂಬುದನ್ನು ತೋರಿಸುತ್ತದೆ' ಎಂದು ಹೇಳಿದರು.

ಘಟನೆ ಬಗ್ಗೆ ಬಿಬಿಸಿ ಹೇಳಿದ್ದೇನು?
ನವದೆಹಲಿ ಮತ್ತು ಮುಂಬೈನಲ್ಲಿರುವ ತನ್ನ ಕಚೇರಿಗಳಲ್ಲಿ ಸಮೀಕ್ಷೆ ನಡೆಸುತ್ತಿರುವ ಆದಾಯ ತೆರಿಗೆ ಇಲಾಖೆಗೆ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ಬಿಬಿಸಿ ನ್ಯೂಸ್ ಮಂಗಳವಾರ ತಿಳಿಸಿದೆ. 'ಆದಾಯ ತೆರಿಗೆ ಅಧಿಕಾರಿಗಳು ಪ್ರಸ್ತುತ ನವದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳಲ್ಲಿದ್ದಾರೆ. ನಾವು ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ' ಎಂದು ಬಿಬಿಸಿ ಟ್ವಿಟರ್‌ನಲ್ಲಿ ಹೇಳಿದೆ. 'ಈ ಪರಿಸ್ಥಿತಿಯನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಲಾಗುವುದು ಎಂದು ನಾವು ಭಾವಿಸುತ್ತೇವೆ' ಎಂಬುದಾಗಿ ಅದು ತಿಳಿಸಿದೆ. ಇದೇ ವೇಳೆ, ಭಾರತದಲ್ಲಿನ ಬಿಬಿಸಿ ಕಚೇರಿಗಳ ಮೇಲಿನ ದಾಳಿಯನ್ನು ಹತ್ತಿರದಿಂದ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಬ್ರಿಟನ್ ಸರ್ಕಾರದ ಮೂಲಗಳು ಹೇಳಿದೆ.












Click it and Unblock the Notifications