IT Raid: ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳ ದಾಳಿ: 23 ಬಾಕ್ಸ್ 500 ರೂ. ನೋಟುಗಳು ಪತ್ತೆ
ಬೆಂಗಳೂರು ನಗರದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ವೇಳೆ ಕೋಟ್ಯಂತರ ರೂಪಾಯಿ ಹಣ ಪತ್ತೆಯಾಗಿದೆ. ಬುಧವಾರ ಸಂಜೆ ನಂತರ ಐಟಿ ಅಧಿಕಾರಿಗಳು ನಗರದ ಹಲವು ಕಡೆಗಳಲ್ಲಿ ಏಕಾಏಕಿ ದಾಳಿ ನಡೆಸಿದರು.
ಆರ್ಟಿ ನಗರದ ಎರಡು ಸ್ಥಳಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ ಸಂದರ್ಭದಲ್ಲಿ, ಆತ್ಮಾನಂದ ಕಾಲೋನಿಯ ಫ್ಲಾಟ್ ಒಂದರ ಕೊಠಡಿಯಲ್ಲಿ 23 ಬಾಕ್ಸ್‌ಗಳಲ್ಲಿ ಭರ್ತಿಯಾಗಿದ್ದ 500 ರೂಪಾಯಿ ನೋಟುಗಳು ಪತ್ತೆಯಾಗಿದೆ.

ಫ್ಲಾಟ್‌ನ ಕೊಠಡಿಯ ಮಂಚವೊಂದರ ಅಡಿಯಲ್ಲಿ ಕೋಟ್ಯಂತರ ಹಣವನ್ನು ಬಚ್ಚಿಡಲಾಗಿತ್ತು. 23 ಬಾಕ್ಸ್‌ಗಳಲ್ಲಿ ಹಣ ಪತ್ತೆಯಾಗಿದ್ದು, ಕಾರಿನಲ್ಲಿ ಬೇರೆ ಕಡೆ ಸಾಗಿಸಲು ತಯಾರಿ ಮಾಡಲಾಗಿತ್ತು ಎಂದು ಹೇಳಲಾಗಿದೆ. ಬುಧವಾರ ಸಂಜೆ 6 ಗಂಟೆ ವೇಳೆಗೆ ಐಟಿ ಅಧಿಕಾರಿಗಳು ದಾಳಿ ಮಾಡಿ ಹಣವನ್ನು ವಶಕ್ಕೆ ಪಡೆದರು.
ಮಾಜಿ ಕಾರ್ಪೊರೇಟರ್ ವಿಚಾರಣೆ
ಕೋಟ್ಯಂತರ ರೂಪಾಯಿ ಹಣ ಪತ್ತೆಯಾದ ಬಳಿಕ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗಣೇಶ ಬ್ಲಾಕ್‌ನಲ್ಲಿರುವ 95ನೇ ವಾರ್ಡ್‌ನ ಮಾಜಿ ಕಾರ್ಪೊರೇಟರ್ ಅಶ್ವತಮ್ಮ ಮತ್ತು ಆಕೆಯ ಪತಿ ಆರ್. ಅಂಬಿಕಾಪತಿ ನಿವಾಸದ ಮೇಲೆ ದಾಳಿ ಮಾಡಿದ್ದು, ವಿಚಾರಣೆ ಮಾಡುತ್ತಿದ್ದಾರೆ.
ಸದ್ಯಕ್ಕೆ ಪತ್ತೆಯಾಗಿರುವ ಕೋಟ್ಯಂತರ ರೂಪಾಯಿ ಹಣ ಯಾರಿಗೆ ಸೇರಿದ್ದು ಎನ್ನುವ ಬಗ್ಗೆ ಅಧಿಕಾರಿಗಳು ವಿಚಾರಣೆ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ, ಫ್ಲಾಟ್ ಯಾರ ಒಡೆತನಕ್ಕೆ ಸೇರಿದೆ, ಹಣ ಯಾವುದು, ಎಲ್ಲಿಗೆ ಸಾಗಿಸಲು ಸಂಗ್ರಹಿಸಲಾಗಿತ್ತು ಎನ್ನುವುದು ಇನ್ನೂ ಪತ್ತೆಯಾಗಬೇಕಿದೆ.











Click it and Unblock the Notifications