ಮಹಿಳಾ ದಿನಾಚರಣೆಗೆ 'ಗಿಫ್ಟ್' ಕೊಟ್ಟ ಮೋದಿ ಸರ್ಕಾರ

Posted By:
Subscribe to Oneindia Kannada
   ಮಹಿಳಾ ದಿನಾಚರಣೆಗೆ ಮೋದಿ ಸರ್ಕಾರದಿಂದ ಭರ್ಜರಿ ಗಿಫ್ಟ್ | Oneindia Kannada

   ನವದೆಹಲಿ, ಮಾರ್ಚ್ 08: ಕೇಂದ್ರ ಸರ್ಕಾರವು ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಉಡುಗೊರೆ ನೀಡಿದೆ. ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಕಾರ್ಯಕ್ರಮದಡಿ ಕೇಂದ್ರ ಸರ್ಕಾರದ ಜನೌಷಧಿ ಕೇಂದ್ರಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಮಾರಾಟ ವ್ಯವಸ್ಥೆ ಮಾಡಲಾಗಿದೆ.

   ಕೇಂದ್ರ ಸರ್ಕಾರದ ಯೋಜನೆಯಿಂದ ಖಾಸಗಿ ಕಂಪೆನಿಗಳೂ ಸ್ಪರ್ಧಾತ್ಮಕ ದರವನ್ನು ನೀಡುವ‌ ಮೂಲಕ ಕಡಿಮೆ ದರದಲ್ಲಿ ನ್ಯಾಪ್ಕಿನ್ ಮಾರಾಟ ಮಾಡಲು ಮುಂದಾಗಲಿದ್ದಾರೆ.

   ಜಿಎಸ್ಟಿ ಆಘಾತ: ಮೋದಿಗೆ ನ್ಯಾಪ್ಕಿನ್ ಕಳಿಸಿದ ಮಹಿಳೆಯರು

   On Women’s Day : Government launches biodegradable sanitary napkins, priced at Rs 2.50 per pad

   ಮಹಿಳೆಯರ ಆರೋಗ್ಯಕ್ಕೆ ಅನುಕೂಲವಾಗುವ 'ಸುವಿಧಾ' ಯೋಜನೆಗೆ ಕೇಂದ್ರ ಸಚಿವ ಅನಂತಕುಮಾರ್‌ ಅವರು ಅಂತರರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಚಾಲನೆ ನೀಡಿದರು.

   ಜನೌಷಧಿ ಕೇಂದ್ರಗಳಲ್ಲಿ ಪ್ರತಿ ನ್ಯಾಪ್ಕಿನ್ ಬೆಲೆ ರೂ. 2.50 ರಂತೆ ಮಾರಾಟ ಮಾಡಲಾಗುತ್ತದೆ. ಖಾಸಗಿ ಕಂಪೆನಿಗಳ ಪ್ರತಿ ನ್ಯಾಪ್ಕಿನ್ ಕನಿಷ್ಟ ರೂ. 8 ರಂತೆ ದೊರೆಯುತ್ತಿದ್ದು, ಸುಲಭದ ದರದಲ್ಲಿ ಪೂರೈಸಲು ಕೇಂದ್ರ ಕ್ರಮ ಕೈಗೊಂಡಿದೆ

   ಶೇ 100ರಷ್ಟು ಆಕ್ಸೊ ಬಯೊ ಡಿಗ್ರೇಡೆಬಲ್ ನ್ಯಾಪ್ಕಿನ್ ಪೂರೈಸುವುದರಿಂದ ಪರಿಸರಕ್ಕೂ ಯಾವುದೇ ರೀತಿಯ ಧಕ್ಕೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ರಸಗೊಬ್ಬರ ಸಚಿವ ಅನಂತಕುಮಾರ್ ಅವರು ಹೇಳಿದರು.

   ದೇಶದಾದ್ಯಂತ ಇರುವ 3,200ಕ್ಕೂ ಅಧಿಕ ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ದರದಲ್ಲಿ ಜನರಿಕ್ ಔಷಧಿ ಮಾರಾಟ ಮಾಡಲಾಗುತ್ತಿದ್ದು, ವಾರ್ಷಿಕ 600 ಕೋಟಿ ರೂಪಾಯಿ (equivalent) ವ್ಯವಹಾರ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಜನೌಷಧಿ ಕೇಂದ್ರಗಳು ಆರಂಭವಾಗಲಿವೆ

   ಈ ಯೋಜನೆಯಡಿ ಜೈವಿಕವಾಗಿ ವಿಘಟನೆ ಹೊಂದುವ ಸ್ಯಾನಿಟರಿ ನ್ಯಾಪ್‌ಕಿನ್‌ ಅನ್ನು ಕೇವಲ 2.50 ರುಗಳಿಗೆ ಮಾರಾಟ ಮಾಡಲಾಗುತ್ತದೆ.ಈ ಪ್ಯಾಡ್‌ಗಳು ಜನೌಷಧಿ ಕೇಂದ್ರಗಳಲ್ಲಿ ಮೇ 28ರಿಂದ ಲಭ್ಯವಾಗಲಿವೆ ಎಂದು ಸಚಿವ ಅನಂತಕುಮಾರ್ ಹೇಳಿದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   The government on Thursday marked the International Women’s Day by launching low cost biodegradable sanitary napkins to be available across 586 Indian districts through central medicine distribution outlets.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ