HPV Vaccine: ಮಹಿಳೆಯರೇ ಮಹಿಳಾ ದಿನವಾದರೂ ನಿಮ್ಮ ಆರೋಗ್ಯದ ಬಗ್ಗೆ ಯೋಚಿಸಿ: ಎಚ್‌ಪಿವಿ ಲಸಿಕೆ ಪಡೆಯಿರಿ
ಮಹಿಳೆಯರು... ತಮ್ಮ ಬಗ್ಗೆ ಬಿಟ್ಟು ಎಲ್ಲರ ಬಗ್ಗೆ, ಎಲ್ಲರ ಆರೋಗ್ಯದ ಬಗ್ಗೆ ಚಿಂತೆ ಮಾಡುತ್ತಾರೆ. ತಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳು, ಅನಾರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಕಡಿಮೆ. ಅನೇಕ ಮಹಿಳೆಯರಿಗೆ ಖಾಯಿಲೆ ಕೊನೆ ಕ್ಷಣದಲ್ಲಿ ಗೊತ್ತಾಗುವುದು ಇದೆ ಕಾರಣಕ್ಕೆ. ಹೀಗಾಗಿ ಈ ಮಹಿಳಾ ದಿನದ ಸಂದರ್ಭದಲ್ಲಾದರೂ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎನ್ನುವುದು ನಮ್ಮ ಮನವಿ.
ಸರಿ.. ಈಗ ವಿಷಯಕ್ಕೆ ಬರೋಣ... ಕಳೆದೆರಡು ತಿಂಗಳ ಹಿಂದೆ ಬಾಲಿವುಡ್ ನಟಿ ಪೂನಂ ಪಾಂಡೆ ಸರ್ವಿಕಲ್ ಕ್ಯಾನ್ಸರ್‌ನಿಮದ ಮೃತಪಟ್ಟಿದ್ದಾರೆ ಎಂಬ ಸುಳ್ಳು ಸುದ್ದಿ ಸಕತ್ ಚರ್ಚೆಯಾಗಿತ್ತು. ಸುದ್ದಿ ಪ್ರಚಾರಕ್ಕೆ ಆದರೂ ಕೂಡ ಆಕೆ ಎತ್ತಿದ ಸರ್ವಿಕಲ್ ಕ್ಯಾನ್ಸರ್ (ಗರ್ಭಕಂಠದ ಕ್ಯಾನ್ಸರ್) ತುಂಬಾ ಗಂಭೀರ ವಿಷಯ. ಈ ಕಾನ್ಸರ್ ಪ್ರತಿ ವರ್ಷ 3,00,000 ಕ್ಕಿಂತ ಹೆಚ್ಚು ಮಹಿಳೆಯರನ್ನು ಬಲಿ ಪಡೆಯುತ್ತಿದೆ ಎಂಬುದು ನಂಬಲೇ ಬೇಕಾದ ಸುದ್ದಿ.

ಗರ್ಭಕಂಠದ ಕ್ಯಾನ್ಸರ್ ಮತ್ತು ಎಚ್‌ಪಿವಿ ಲಸಿಕೆ
ಮಹಿಳೆಯರ ಆರೋಗ್ಯ ಎಂದರೇ ಗರ್ಭಾಶಯದ ಕೆಳಭಾಗದ ಗರ್ಭಕಂಠವನ್ನು ರಕ್ಷಿಸುವುದು ಕೂಡ ಒಂದು. ವಿಶ್ವಾದ್ಯಂತ ಮಹಿಳೆಯರಲ್ಲಿ ನಾಲ್ಕನೇ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್‌ನಂತೆ ಹರಡಿದೆ ಈ ಗರ್ಭಕಂಠದ ಕ್ಯಾನ್ಸರ್. ಪ್ರತಿ ವರ್ಷ ಪ್ರತಿ ಎರಡು ನಿಮಿಷಕ್ಕೆ ಒಬ್ಬ ಮಹಿಳೆಯನ್ನು ಬಲಿ ತೆಗೆದುಕೊಳ್ಳುತ್ತಿದೆ ಎಂದು ವರದಿಗಳು ಹೇಳುತ್ತವೆ. ಈ ಕ್ಯಾನ್ಸರ್ ಬರದಂತೆ ತಡೆಗೆ ಇರುವುದು ಎಚ್‌ಪಿವಿ ಲಸಿಕೆ.
ಮಾರಣಾಂತಿಕ ಕಾಯಿಲೆಗಳ ಪ್ರಭಾವವನ್ನು ಕಡಿಮೆ ಮಾಡುವಲ್ಲಿ ಲಸಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಈಗಾಗಲೇ ಕೊರೋನಾ ವ್ಯಾಕ್ಸಿನ್ ಮೂಲಕ ದಾಖಲೆ ಮಾಡಿರುವ ಭಾರತ, ಮಹಿಳೆಯರ ಜೀವವನ್ನು ರಕ್ಷಿಸುವ ಎಚ್‌ಪಿವಿ ವ್ಯಾಕ್ಸಿನ್ ಡ್ರೈವ್ ಮಾಡುವುದು ಅವಶ್ಯಕ ಎಂದು ಹಲವು ವರದಿಗಳು ಒತ್ತಿ ಹೇಳುತ್ತಿವೆ. ವಿಶೇಷವಾಗಿ 30 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಗರ್ಭಕಂಠದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ.
ICMR ಅಧ್ಯಯನದ ಪ್ರಕಾರ, ವ್ಯಾಕ್ಸಿನೇಷನ್ ಒದಗಿಸುವುದರಿಂದ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳಲ್ಲಿ 50 ಪ್ರತಿಶತದಷ್ಟು ಕಡಿಮೆ ಆಗಲಿದೆ. ಇದಲ್ಲದೆ, 16 ರಿಂದ 17 ವರ್ಷ ವಯಸ್ಸಿನಲ್ಲೇ ಎಚ್‌ಪಿವಿ ಲಸಿಕೆಯನ್ನು ನೀಡಿದರೆ, ಗರ್ಭಕಂಠದ ಕ್ಯಾನ್ಸರ್ ಸಂಭವವನ್ನು 80 ಪ್ರತಿಶತದಷ್ಟು ಕಡಿಮೆ ಮಾಡುವ ಸಂಭವವಿದೆ. ಭಾರತ ಸರ್ಕಾರಕ್ಕೆ WHO ನ ಸಲಹೆಯ ಪ್ರಕಾರ 90 ಪ್ರತಿಶತ ಹದಿಹರೆಯದ ಹುಡುಗಿಯರಿಗೆ ಲಸಿಕೆ ನೀಡಿದರೇ ದೇಶದಲ್ಲಿ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ.

ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್
ಗರ್ಭಕಂಠದ ಕ್ಯಾನ್ಸರ್‌ಗೆ ಬಲಿಯಾಗುತ್ತಿರುವ 10 ಮಹಿಳೆಯರಲ್ಲಿ ಒಂಬತ್ತು ಮಂದಿ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಭಾರತದಲ್ಲಿ, ಸ್ತನ ಕ್ಯಾನ್ಸರ್ ನಂತರ ಗರ್ಭಕಂಠದ ಕ್ಯಾನ್ಸರ್ ಎರಡನೇ ಸಾಮಾನ್ಯ ಕ್ಯಾನ್ಸರ್ ಆಗಿದೆ. ದೇಶದ ಜನಸಂಖ್ಯೆಯನ್ನು ಗಮನಿಸಿದರೆ, 15 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 500 ಮಿಲಿಯನ್ ಮಹಿಳೆಯರು ಗರ್ಭಕಂಠದ ಕ್ಯಾನ್ಸರ್ ಅಪಾಯದಲ್ಲಿದ್ದಾರೆ.
ಹೀಗಾಗಿ ಯಾವುದೇ ಕ್ರಮವನ್ನು ತೆಗೆದುಕೊಳ್ಳದಿದ್ದರೆ, ಗರ್ಭಕಂಠದ ಕ್ಯಾನ್ಸರ್‌ನ ಪ್ರಕರಣಗಳು ಮತ್ತು ಮೃತರ ಸಂಖ್ಯೆ ಭವಿಷ್ಯದಲ್ಲಿ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ಪ್ರಸ್ತುತ ಜನಸಂಖ್ಯೆಯ ಬೆಳವಣಿಗೆಯ ದರದೊಂದಿಗೆ, 2040 ರಲ್ಲಿ 1,91,347 ಮಂದಿ ಗರ್ಭಕಂಠದ ಕ್ಯಾನ್ಸರ್‌ಗೆ ಒಳಗಾಗಲಿದ್ದಾರೆ. ಇದು 2020 ರಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆಗಿಂತ 54% ಹೆಚ್ಚಳವಾಗಿದೆ.
ಗರ್ಭಕಂಠದ ಕ್ಯಾನ್ಸರ್ ಬರುವುದು ಹೇಗೆ?
ಗರ್ಭಕಂಠದ ಕ್ಯಾನ್ಸರ್ ಪ್ರಮುಖವಾಗಿ ಲೈಂಗಿಕ ಸೋಂಕಿನಿಂದ ಬರುತ್ತದೆ. HPV ಅಂದರೆ human papilloma viruses. ಈ ಲೈಂಗಿಕ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಬೇಗನೆ ಹರಡುತ್ತದೆ. ಹೀಗಾಗಿ ಮಹಿಳೆಯರಿಗೆ ಈ ಸೋಂಕು ತಗುಲಿದಾಗ ಗರ್ಭಕಂಠದ ಕ್ಯಾನ್ಸರ್ ಆಗುತ್ತದೆ. HPV ಲಸಿಕೆ ಪಡೆಯುವುದರಿಂದ ಈ ಕಾಯಿಲೆ ಬಾರದಂತೆ ತಡೆಗಟ್ಟಬಹುದಾಗಿದೆ. ಆದ್ದರಿಂದ ಹೆಣ್ಣುಮಕ್ಕಳ ಹದಿಹರೆಯದಲ್ಲೇ ಈ ಲಸಿಕೆ ನೀಡಿದರೆ ಮದುವೆಯಾದ ನಂತರ ಲೈಂಗಿಕ ಚಟುವಟಿಕೆಯಿಂದ ಅವರಿಗೆ ಈ ಸೋಂಕು ಹರಡುವುದಿಲ್ಲ. ಅವರಿಗೆ ಗರ್ಭಕಂಠದ ಕ್ಯಾನ್ಸರ್ ಬರುವುದಿಲ್ಲ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications