ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Women's Day 2022: ಮಹಿಳಾ ದಿನಾಚರಣೆಗೆ ಗೂಗಲ್‌ನಿಂದ ಶುಭಾಶಯ

|
Google Oneindia Kannada News

ಮಾರ್ಚ್ 8 ಇಂದು ಅಂತರರಾಷ್ಟ್ರೀಯ ಮಹಿಳಾ ದಿನ. ಈ ದಿನ ಸರ್ಚ್ ಇಂಜಿನ್ ದೈತ್ಯ ಸಂಸ್ಥೆ ಮಹಿಳಾ ದಿನಾಚರಣೆಗೆ ಶುಭಾಶಯಗಳನ್ನು ತಿಳಿಸಿದೆ. ಗೂಗಲ್ ಕಲಾ ನಿರ್ದೇಶಕ ಥೋಕಾ ಮೇರ್ ಇಂದಿನ ಸ್ಲೈಡ್​ಶೋ ಡೂಡಲ್ ಮೂಲಕ ಸಮಾಜದಲ್ಲಿ ಮಹಿಳೆಯರ ಪಾತ್ರವನ್ನು ವಿವರಿಸಿದ್ದಾರೆ. ಗೂಗಲ್ ಕೇವಲ ಒಬ್ಬ ಮಹಿಳೆ ಅಥವಾ ಯಾವುದೇ ಪ್ರಸಿದ್ಧ ಮಹಿಳೆಗೆ ಅಲ್ಲದೆ ಜೀವನದುದ್ದಕ್ಕೂ ಆಕೆ ನಿರ್ವಹಿಸುವ ಹಲವಾರು ಪಾತ್ರಗಳಿಗೆ ಗೌರವ ಸಲ್ಲಿಸಿದೆ. ಅದು ಗೃಹಿಣಿ, ವಿಜ್ಞಾನಿ, ಕೆಲಸ ಮಾಡುವ ವೃತ್ತಿಪರ ಮಹಿಳೆ ಹೀಗೆ ಹಲವಾರು ಮಹಿಳೆಯರ ಸ್ಲೈಡ್​ಶೋ ಮೂಲಕ ಗೂಗಲ್ ಗೌರವ ಸಲ್ಲಿಸಿದೆ.

'ಮನೆಯಿಂದಲೇ ಕೆಲಸ ಮಾಡುತ್ತಿರುವ ತಾಯಿಯಿಂದ ಹಿಡಿದು ಮುಂದಿನ ತಲೆಮಾರಿಗೆ ರಿಪೇರಿ ಕೌಶಲ ಹೇಳಿಕೊಡುತ್ತಿರುವ ಮೋಟಾರ್ ಸೈಕಲ್ ಮೆಕ್ಯಾನಿಕ್​ವರೆಗೆ ಮಹಿಳೆಯರ ಬದುಕನ್ನು ಇಂದಿನ ಡೂಡಲ್ ಕಟ್ಟಿಕೊಡುತ್ತದೆ. ಮಹಿಳೆಯರು ಹೇಗೆ ತಮ್ಮನ್ನು, ತಮ್ಮ ಕುಟುಂಬಗಳನ್ನು ಮತ್ತು ತಮ್ಮ ಸಮುದಾಯಗಳನ್ನು ಮುನ್ನಡೆಸುತ್ತಿದ್ದಾರೆ ಎಂಬುದನ್ನು ಡೂಡಲ್ ಬಿಂಬಿಸಲು ಯತ್ನಿಸಿದೆ. ಎಲ್ಲರಿಗೂ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು' ಎಂದು ಎಂದು ಗೂಗಲ್ ಈ ವಿಶೇಷ ದಿನದಂದು ವಿಶ್ವಾದ್ಯಂತ ಮಹಿಳೆಯರಿಗೆ ಶುಭ ಹಾರೈಸಿದೆ.

Women's day: ಈ ರಾಶಿಗಳ ಮಹಿಳೆಯರು ನಾಯಕತ್ವ ಹೊಂದಿರುತ್ತಾರಂತೆ!Women's day: ಈ ರಾಶಿಗಳ ಮಹಿಳೆಯರು ನಾಯಕತ್ವ ಹೊಂದಿರುತ್ತಾರಂತೆ!

ಗೂಗಲ್ ಸ್ಲೈಡ್​ಶೋನಲ್ಲಿ ಒಬ್ಬ ಯುವ ತಾಯಿ ಲ್ಯಾಪ್​ಟಾಪ್​ನಲ್ಲಿ ಕೆಲಸ ಮಾಡುತ್ತಲೇ ಮಗುವನ್ನು ಗಮನಿಸುವ ದೃಶ್ಯದೊಂದಿಗೆ ವಿಡಿಯೊ ಆರಂಭವಾಗುತ್ತದೆ. ಒಬ್ಬ ಮಹಿಳೆ ಗಿಡಗಳಿಗೆ ನೀರು ಹಾಕುತ್ತಿದ್ದರೆ ಮತ್ತೋರ್ವ ಮಹಿಳೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡುತ್ತಿರುತ್ತಾರೆ. ಹೀಗೇ ಇನ್ನೂ ಎಷ್ಟೋ ಮಹಿಳೆಯರು ಏನೇನೋ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಪ್ರಪಂಚದಾದ್ಯಂತ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಇದು ಹಲವಾರು ದೇಶಗಳಲ್ಲಿ ಸಾರ್ವಜನಿಕ ರಜಾದಿನವಾಗಿದೆ ಮತ್ತು ಇತರರಲ್ಲಿ ಸಾಮಾಜಿಕವಾಗಿ ಅಥವಾ ಸ್ಥಳೀಯವಾಗಿ ಆಚರಿಸಲಾಗುತ್ತದೆ.

 Google Doodle Celebrates International Womens day 2022 with animated illustration

ಅಂತರರಾಷ್ಟ್ರೀಯ ಮಹಿಳಾ ದಿನ ಮಹಿಳೆಯರ ಸಾಧನೆಗಳನ್ನು ನೆನೆಯುವ ದಿನ. ತನಗಿರುವ ಹಲವಾರು ಸಮಸ್ಯೆಗಳನ್ನು ಮೆಟ್ಟಿ ನಿಂತು ಮಹಿಳೆ ಬಹುತೇಕ ರಂಗದಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾಳೆ. ದೌರ್ಜನ್ಯ, ದಬ್ಬಾಳಿಕೆ, ಹಿಂಸೆಯಂತಹ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ ಹಲವಾರು ಕ್ಷೇತ್ರಗಳಲ್ಲಿ ಪುರುಷರಷ್ಟೇ ಸರಿಸಮಾನವಾಗಿ ಮುಂದಿದ್ದಾಳೆ. ಕ್ರೀಡೆಯಲ್ಲಿ, ಸೈನ್ಯದಲ್ಲಿ, ಬಾಹ್ಯಾಕಾಶದಲ್ಲಿ, ಯುದ್ಧ ವಿಮಾನಗಳಲ್ಲಿ ಮಹಿಳೆ ಮಹತ್ತರ ಸಾಧನೆ ಮಾಡಿದ್ದಾಳೆ. ಯಾವ ಪುರುಷರಿಗೂ ತಾನು ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾಳೆ.

ಪ್ರತಿ ವರ್ಷ ಮಾರ್ಚ್ 8 ರಂದು ಲಿಂಗ ಸಮಾನತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಎಲ್ಲಾ ವಿಭಾಗಗಳಲ್ಲಿ ಮಹಿಳೆಯರ ಸಾಧನೆಗಳನ್ನು ಗುರುತಿಸಲು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಸ್ಮರಿಸಲಾಗುತ್ತದೆ. ನೇರಳೆ ಬಣ್ಣವು ಪ್ರಪಂಚದಾದ್ಯಂತ ಮಹಿಳಾ ದಿನವನ್ನು ಸಂಕೇತಿಸಲು ಬಳಸಲ್ಪಡುತ್ತದೆ.

2022 ರ ಅಂತರರಾಷ್ಟ್ರೀಯ ಮಹಿಳಾ ದಿನದ ಥೀಮ್ "ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ" ಆಗಿದೆ. "ಹವಾಮಾನ ಬದಲಾವಣೆ, ಪರಿಸರ ಹಾಗೂ ವಿಪತ್ತು ಅಪಾಯ ಕಡಿತದ ಸಂದರ್ಭದಲ್ಲಿ ಲಿಂಗ ಸಮಾನತೆಯನ್ನು ಸಾಧಿಸಲು 2022 ವರ್ಷ ಪ್ರಮುಖವಾಗಿದೆ. ಇದು ಇಪ್ಪತ್ತೊಂದನೇ ಶತಮಾನದ ಕೆಲವು ದೊಡ್ಡ ಜಾಗತಿಕ ಸವಾಲುಗಳಾಗಿವೆ. ಲಿಂಗ ಸಮಾನತೆ ಇಲ್ಲದೆ ಇಂದು ಸುಸ್ಥಿರ ಭವಿಷ್ಯ ಮತ್ತು ಸಮಾನ ಭವಿಷ್ಯವು ನಮ್ಮ ವ್ಯಾಪ್ತಿಯನ್ನು ಮೀರಿ ಉಳಿದಿದೆ. ಈ ವರ್ಷ ಅನೇಕ ಮಹಿಳೆಯರು ಮತ್ತು ಹುಡುಗಿಯರನ್ನು ಗುರುತಿಸುವುದು ಮತ್ತು ಆಚರಿಸುವುದು ಮತ್ತು ಸುಸ್ಥಿರ ಭವಿಷ್ಯದತ್ತ ಅವರ ನಾಯಕತ್ವ ಮತ್ತು ಕೊಡುಗೆಯನ್ನು ಗೌರವಿಸುವುದಾಗಿದೆ" ಎಂದು ಯುಎನ್ ವುಮೆನ್ ಹೇಳಿಕೆ ಹೇಳಿದೆ.

1908ರಲ್ಲಿ ಅಮೆರಿಕದಲ್ಲಿ ಕಾರ್ಮಿಕ ಚಳವಳಿ ನಡೆದಿತ್ತು. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದುಡಿಯುವ ಮಹಿಳೆಯರು ಪಾಲ್ಗೊಂಡಿದ್ದರು. ಸುಮಾರು 15,000 ಮಹಿಳೆಯರು ನ್ಯೂಯಾರ್ಕ್ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದರು ಮತ್ತು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದರು. ತಮ್ಮ ಕೆಲಸದ ಅವಧಿಯನ್ನು ಕಡಿಮೆ ಮಾಡಬೇಕು ಮತ್ತು ವೇತನ ಶ್ರೇಣಿಯನ್ನು ಹೆಚ್ಚಿಸಬೇಕು ಎಂದು ಕಾರ್ಮಿಕ ಮಹಿಳೆಯರು ಒತ್ತಾಯಿಸಿದ್ದರು. ಮಹಿಳೆಯರಿಗೂ ಮತದಾನದ ಹಕ್ಕನ್ನು ನೀಡಬೇಕೆಂದು ಬೇಡಿಕೆಯಿಟ್ಟಿದ್ದರು. ಮಹಿಳೆಯರ ಧ್ವನಿ ಅಂದಿನ ಸರ್ಕಾರದ ಕಿವಿಗೆ ಬಿದ್ದಿತ್ತು. ನಂತರ 1909 ರಲ್ಲಿ, ಚಳುವಳಿಯ ಒಂದು ವರ್ಷದ ನಂತರ, ಅಮೆರಿಕಾದ ಸಮಾಜವಾದಿ ಪಕ್ಷ ಮಹಿಳಾ ದಿನವನ್ನು ಘೋಷಿಸಿತು. ಅಂದಿನಿಂದ ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ.

English summary
It's International Women's Day today - March 8 - and the search engine giant Google has come up with a special Doodle to celebrate women in our society. Doodle Art Director Thoka Maer has illustrated today's Doodle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X