ಜಿಎಸ್ಟಿ ಆಘಾತ: ಮೋದಿಗೆ ನ್ಯಾಪ್ಕಿನ್ ಕಳಿಸಿದ ಮಹಿಳೆಯರು

ಗ್ವಾಲಿಯರ್, ಜನವರಿ 10: ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ತೆರಿಗೆ ಮುಕ್ತಗೊಳಿಸಿ ಎಂಬ ಕೂಗು ಮತ್ತೆ ಬಲವಾಗಿ ಕೇಳಿ ಬರುತ್ತಿದೆ. ಮಧ್ಯಪ್ರದೇಶದ ಸಾಮಾಜಿಕ ಕಾರ್ಯಕರ್ತೆಯರ ಸಂಘಟನೆಯೊಂದು ಪ್ರಧಾನಿ ಅವರಿಗೆ ಸಾವಿರಕ್ಕೂ ಅಧಿಕ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಕಳುಹಿಸುವ ಮೂಲಕ ವಿಶಿಷ್ಟವಾಗಿ ಪ್ರತಿಭಟಿಸುತ್ತಿವೆ.

ಸ್ವಚ್ಛ ಭಾರತದ ಹೆಸರು ಹೇಳುತ್ತಿರುವ ಮೋದಿ ಮಹಿಳೆಯರ ಸ್ವಚ್ಛತೆಗೆ ಗಮನ ನೀಡುತ್ತಿಲ್ಲ. ಸ್ಯಾನಿಟರಿ ನ್ಯಾಪ್ಕಿನ್ ಮೇಲೆ ಶೇ12ರಷ್ಟು ಸರಕು ಸಾಗಣೆ ತೆರಿಗೆ(ಜಿ ಎಸ್ಟಿ) ವಿಧಿಸಲಾಗುತ್ತಿದೆ. ಮಹಿಳೆಯರ ತಿಂಗಳ ಅಗತ್ಯಕ್ಕೆ ಬೆಲೆ ನೀಡುತ್ತಿಲ್ಲ.

ಸಂಕ್ರಾಂತಿ ವಿಶೇಷ ಪುಟ

GST effect: Women write their 'Mann ki Baat' on sanitary napkins

ಹೀಗಾಗಿ ಈ ರೀತಿ ಪ್ರತಿಭಟನೆ ನಡೆಸಲಾಗುತ್ತಿದೆ.1 ಸಾವಿರ ಸ್ಯಾನಿಟರಿ ನ್ಯಾಪ್ಕಿನ್ ಗಳ ಮೇಲೆ ತಮ್ಮ ಮನ್ ಕಿ ಬಾತ್ ಬರೆದು ಮೋದಿ ಅವರಿಗೆ ಕಳಿಸಲಾಗುತ್ತಿದೆ ಎಂದು ಪ್ರತಿಭಟನಾ ಅಭಿಯಾನದ ಮುಖ್ಯಸ್ಥರಾದ ಪ್ರೀತಿ ಜೋಶಿ ಹಾಗೂ ಹರಿ ಮೋಹನ್ ಅವರು ಹೇಳಿದ್ದಾರೆ.


ಜೆಸ್ಟಿ ಜಾರಿಗೊಂಡ ಬಳಿಕ ಪ್ಯಾಡ್ ಬೆಲೆ ದುಬಾರಿಯಾಗಿದೆ. ಸರ್ಕಾರದಿಂದ ಸಬ್ಸಿಡಿ ದರದಲ್ಲಿ ನ್ಯಾಪ್ಕಿನ್ ವಿತರಣೆ ಕೆಲವೆಡೆ ಜಾರಿಯಲ್ಲಿದ್ದರೂ ಗುಣಮಟ್ಟ ಸರಿಯಾಗಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಇದರಿಂದ ತೀವ್ರ ಸಮಸ್ಯೆ ಎದುರಾಗಿದೆ.

ಕಾಡಿಗೆ, ಸಿಂಧೂರ, ಬಿಂದಿ, ಕುಂಕುಮ, ಪೂಜಾ ಸಾಮಾಗ್ರಿಗಳನ್ನು ಜಿಎಸ್ಟಿಯಿಂದ ಹೊರಗಿಡಲಾಗಿದೆ. ಆದರೆ, ಸ್ಯಾನಿಟರಿ ನ್ಯಾಪ್ಕಿನ್ ಮೇಲೆ ಶೇ12ರಷ್ಟು ತೆರಿಗೆ ಹಾಕಲಾಗಿದೆ. ಈ ಬಗ್ಗೆ ಜವಹರಲಾಲ್ ನೆಹರೂ ವಿವಿಯ ಜರ್ಮಿನಾ ಇಸ್ರಾರ್ ಖಾನ್ ಅವರು ದೆಹಲಿ ಹೈಕೋರ್ಟಿನಲ್ಲಿ ಅರ್ಜಿ ಹಾಕಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+