Women's Day: ಮಹಿಳಾ ದಿನದ ಪ್ರಯುಕ್ತ ಭರ್ಜರಿ ರಿಯಾಯಿತಿ ನೀಡಿದ ಪ್ರವಾಸೋದ್ಯಮ ಇಲಾಖೆ

ಪ್ರವಾಸ ಹೋಗುವ ಮಹಿಳೆಯರು ಮಾರ್ಚ್ 6 ಮತ್ತು ಮಾರ್ಚ್ 10 ರ ನಡುವೆ ಈ ಕೊಡುಗೆಯನ್ನು ಪಡೆದುಕೊಳ್ಳಬಹುದು.

ಬೆಂಗಳೂರು, ಮಾರ್ಚ್ 05: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಅಂತಾರಾಷ್ಟ್ರೀಯ ಮಹಿಳಾ ದಿನದಂದು ಮಹಿಳೆಯರಿಗೆ ಭರ್ಜರಿ ರಿಯಾಯಿತಿ ನೀಡಿದೆ. ಸರ್ಕಾರಿ ಹೋಟೆಲ್‌ಗಳಿಗೆ ಭೇಟಿ ನೀಡುವ ಮಹಿಳೆಯರಿಗೆ ವಿಶೇಷ ಕೊಡುಗೆಯನ್ನು ಶನಿವಾರ ಪ್ರಕಟಿಸಿದೆ. ಹೋಟೆಲ್‌ಗಳ ರೂಮ್ ಬುಕ್ಕಿಂಗ್‌ಗಳಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡುವುದಾಗಿ ತಿಳಿಸಿದೆ.

ಕರ್ನಾಟಕ ಸರ್ಕಾರದ ಮಯೂರ ಗ್ರೂಪ್ ಆಫ್ ಹೊಟೇಲ್‌ಗಳಲ್ಲಿ ರೂಮ್ ಬುಕ್ಕಿಂಗ್‌ನಲ್ಲಿ ವಿಶೇಷ ಶೇಕಡಾ 50 ರಷ್ಟು ರಿಯಾಯಿತಿ ಮತ್ತು ಆಹಾರದ ಮೇಲೆ ಶೇಕಡಾ 20 ರಷ್ಟು ರಿಯಾಯಿತಿಯನ್ನು ಎಲ್ಲಾ ಮಹಿಳೆಯರು ಪಡೆಯಬಹುದು ಎಂದು ಪ್ರವಾಸೋದ್ಯಮ ಇಲಾಖೆ ಪ್ರಕಟಿಸಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಪ್ರಕಾರ, ಎಲ್ಲಾ ಮಹಿಳಾ ಏಕಾಂಗಿ ಪ್ರವಾಸಿ ಮತ್ತು ಗುಂಪಿನಲ್ಲಿ ಪ್ರವಾಸ ಹೋಗುವ ಮಹಿಳೆಯರು ಮಾರ್ಚ್ 6 ಮತ್ತು ಮಾರ್ಚ್ 10 ರ ನಡುವೆ ಈ ಕೊಡುಗೆಯನ್ನು ಪಡೆದುಕೊಳ್ಳಬಹುದು.

Womens Day: Karnataka tourism department offers 50% discount for women

"08.03.2023 ರಂದು ಆಚರಿಸಲಾಗುವ 48 ನೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಎಲ್ಲಾ ಮಯೂರ ಗ್ರೂಪ್‌ನ ಹೋಟೆಲ್‌ಗಳಲ್ಲಿ 'ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ'ದಿಂದ ರೂಂ ಬುಕ್ಕಿಂಗ್‌ನಲ್ಲಿ 50% ರಿಯಾಯಿತಿ ಮತ್ತು ಆಹಾರದ ಮೇಲೆ 20% ರಿಯಾಯಿತಿಯ ವಿಶೇಷ ಕೊಡುಗೆಯನ್ನು ನೀಡಲಾಗುತ್ತಿದೆ" ಎಂದು ತಿಳಿಸಿದೆ. ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಮಾರ್ಚ್ 8 ರಂದು ಆಚರಿಸಲಾಗುತ್ತದೆ.

ಮಹಿಳಾ ಪ್ರವಾಸಿಗರು ಕರ್ನಾಟಕದ ಎಲ್ಲಾ ಪ್ರಮುಖ ಪ್ರವಾಸಿ ತಾಣಗಳಲ್ಲಿ ಈ ಕೊಡುಗೆಯನ್ನು ಬಳಸಿಕೊಳ್ಳಬೇಕೆಂದು ಇಲಾಖೆಯು ಒತ್ತಾಯಿಸಿದೆ. "ಈ ಸೌಲಭ್ಯವು 06.03.2023 ರಿಂದ 10.03.2023 ರವರೆಗೆ ಅನ್ವಯಿಸುತ್ತದೆ. ಏಕಾಂಗಿ ಪ್ರಯಾಣಿಕರು/ಕುಟುಂಬ/ಗುಂಪಾಗಿ ಪ್ರಯಾಣಿಸುವ ಮಹಿಳಾ ಪ್ರವಾಸಿಗರಿಗೆ 50% ರಿಯಾಯಿತಿ ನೀಡಲಾಗುತ್ತಿದೆ. ಆದ್ದರಿಂದ ಎಲ್ಲಾ ಮಹಿಳಾ ಪ್ರವಾಸಿಗರು ಈ ಸೌಲಭ್ಯವನ್ನು ಪಡೆದುಕೊಳ್ಳಲು ವಿನಂತಿಸಲಾಗಿದೆ" ಎಂದು ಕೆಎಸ್‌ಟಿಡಿಸಿ ತಿಳಿಸಿದೆ.

Womens Day: Karnataka tourism department offers 50% discount for women

ರಾಜ್ಯದ ಮೈಸೂರು, ಹಂಪಿ, ಶ್ರೀರಂಗಪಟ್ಟಣ, ಆಲಮಟ್ಟಿ, ಮಡಿಕೇರಿ, ನಂದಿ ಬೆಟ್ಟಗಳು ಮತ್ತು ವಿಜಯಪುರದಲ್ಲಿ ಮಯೂರ ಹೋಟೆಲ್‌ಗಳಿವೆ. ಇದರ ಜೊತೆಗೆ ತಮಿಳುನಾಡಿನ ಊಟಿಯಲ್ಲಿಯೂ ಮಯೂರ ಹೋಟೆಲ್‌ಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+