Bullet Train: ಮುಂಬೈ–ಅಹಮದಾಬಾದ್ ಬುಲೆಟ್ ರೈಲು ಯೋಜನೆಗೆ ಬಿಗ್ ಅಪ್‌ಡೇಟ್! 2027ರಿಂದ ಆರಂಭವಾಗಲಿದೆ ಸೇವೆ
ದೇಶದ ಹೆಮ್ಮೆಯ ಮೊದಲ ಬುಲೆಟ್ ರೈಲು ಯೋಜನೆಯಾದ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ (MAHSR) ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ, ಇದು ಭಾರತದ ಹೈಸ್ಪೀಡ್ ರೈಲು ವ್ಯವಸ್ಥೆಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಯೋಜನೆಯು ಭವಿಷ್ಯದಲ್ಲಿ ನಿರ್ಮಾಣವಾಗಲಿರುವ ಬುಲೆಟ್ ರೈಲು ಮಾರ್ಗಗಳಿಗೆ ಮಾದರಿಯಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಒಟ್ಟು 508 ಕಿಲೋಮೀಟರ್ ಉದ್ದದ ಈ ಕಾರಿಡಾರ್‌ನಲ್ಲಿ ರೈಲುಗಳು ಗಂಟೆಗೆ 320 ಕಿ.ಮೀ. ವೇಗದಲ್ಲಿ ಸಂಚರಿಸಲಿವೆ. ಯೋಜನೆಯ ಮೊದಲ ಹಂತವಾದ ಸೂರತ್-ವಾಪಿ ನಡುವಿನ ಸೇವೆಯನ್ನು 2027ರ ಆಗಸ್ಟ್‌ನಲ್ಲಿ ಆರಂಭಿಸುವ ಗುರಿ ಹೊಂದಲಾಗಿದೆ. ಸಂಪೂರ್ಣ ಮಾರ್ಗದಲ್ಲಿ ಒಟ್ಟು 12 ನಿಲ್ದಾಣಗಳು ನಿರ್ಮಾಣವಾಗಲಿದ್ದು, ಮುಂಬೈನಿಂದ ಅಹಮದಾಬಾದ್‌ಗೆ ಪ್ರಯಾಣದ ಸಮಯವನ್ನು ಸುಮಾರು 1 ಗಂಟೆ 58 ನಿಮಿಷಗಳಿಗೆ ಇಳಿಸಲಿದೆ.

ಮುಂಬೈ-ಅಹಮದಾಬಾದ್ ನಡುವಿನ ಅಂತರ ಒಟ್ಟು 508 ಕಿ.ಮೀ ಇದೆ, ಈ ಉದ್ದದ ಮೆಗಾ ಕಾರಿಡಾರ್‌ನಲ್ಲಿ ರೈಲುಗಳು ಗಂಟೆಗೆ 320 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಈ ಯೋಜನೆಯ ಮೊದಲ ಹಂತ ಸೂರತ್ ಮತ್ತು ವಾಪಿ ನಡುವಿನ ಸಂಚಾರ 2027ರ ಆಗಸ್ಟ್‌ನಲ್ಲಿ ಶುರುವಾಗಲಿದೆ. ಈ ಮಾರ್ಗದಲ್ಲಿ ಒಟ್ಟು 12 ನಿಲ್ದಾಣಗಳು ಬರಲಿದ್ದು, ಮುಂಬೈನಿಂದ ಅಹಮದಾಬಾದ್‌ಗೆ ಕೇವಲ 1 ಗಂಟೆ 58 ನಿಮಿಷಗಳಲ್ಲಿ ತಲುಪಬಹುದು. ಭಾರತೀಯ ಸಾರಿಗೆ ಇತಿಹಾಸದಲ್ಲೇ ಇದು ಹೊಸ ಕ್ರಾಂತಿ ಸೃಷ್ಟಿಸಲಿದೆ!
ಗಂಟೆಗೆ 350 ಕಿ.ಮೀ ವೇಗ: ಭಾರತೀಯ ರೈಲ್ವೆ ಇನ್ಮುಂದೆ ಮತ್ತಷ್ಟು ಹೈಟೆಕ್!
ದೇಶದ ಮೊದಲ ಹೈಸ್ಪೀಡ್ ರೈಲು ತಂತ್ರಜ್ಞಾನಕ್ಕೆ ಭದ್ರ ಬುನಾದಿಯನ್ನು ಹಾಕುವ ನಿಟ್ಟಿನಲ್ಲಿ ಹೊಸ ಯೋಜನೆಯೊಂದನ್ನು ಸಿದ್ಧಪಡಿಸಿದೆ. ಈ ಯೋಜನೆಯಲ್ಲಿ ಗಂಟೆಗೆ 350 ಕಿ.ಮೀ ವೇಗದಲ್ಲಿ ಚಲಿಸಬಲ್ಲ ಅತ್ಯಾಧುನಿಕ ರೈಲುಗಳು, ಸುಧಾರಿತ ಸಿಗ್ನಲಿಂಗ್ ಮತ್ತು ನಿಖರ ನಿಯಂತ್ರಣ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಇದು ಭಾರತೀಯ ಸಾರಿಗೆ ವ್ಯವಸ್ಥೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಮುನ್ಸೂಚನೆಯಾಗಿದೆ.
ಭವಿಷ್ಯದ ಬುಲೆಟ್ ರೈಲು ಮಾದರಿ
ದೇಶದ ಮೊದಲ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆ ಬರೆದ ಕೇವಲ ಸಾರಿಗೆ ಸಂಪರ್ಕವಲ್ಲ, ಇದು ದೇಶೀಯ ತಾಂತ್ರಿಕ ಮತ್ತು ಕೈಗಾರಿಕಾ ವ್ಯವಸ್ಥೆಯ ಸಬಲೀಕರಣದ ಸಂಕೇತ ಎಂದು ಸರ್ಕಾರ ಬಣ್ಣಿಸಿದೆ. ಈ ಯೋಜನೆಯ ಮೂಲಕ ಭಾರತೀಯ ಇಂಜಿನಿಯರ್‌ಗಳು ಮತ್ತು ಉದ್ಯಮಗಳು ಗಳಿಸುತ್ತಿರುವ ಪರಿಣತಿಯು, ಮುಂದಿನ ದಿನಗಳಲ್ಲಿ ಬರಲಿರುವ ಬುಲೆಟ್ ರೈಲು ಯೋಜನೆಗಳ ವೆಚ್ಚವನ್ನು ತಗ್ಗಿಸಲು ಮತ್ತು ಅವುಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಮುಗಿಸಲು ಸಹಕಾರಿಯಾಗಲಿದೆ ಎಂದು ಪ್ರಮುಖ ಅಧಿಕಾರಿಗಳು ತಿಳಿಸಿದ್ದಾರೆ.
7 ಹೊಸ ಹೈಸ್ಪೀಡ್ ಕಾರಿಡಾರ್‌ಗಳ ಯೋಜನೆ
ದೇಶದ ಸಾರಿಗೆ ವ್ಯವಸ್ಥೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು 7 ಹೊಸ ಹೈಸ್ಪೀಡ್ ರೈಲು ಕಾರಿಡಾರ್‌ಗಳ ಯೋಜನೆ ಸಿದ್ದತೆ ಮಾಡಲಾಗುತ್ತಿದೆ. ಒಟ್ಟು 4,000 ಕಿಲೋಮೀಟರ್ ವ್ಯಾಪ್ತಿಯ ಈ ಯೋಜನೆಗೆ ಸುಮಾರು ₹16 ಲಕ್ಷ ಕೋಟಿ ಹೂಡಿಕೆಯ ಯೋಜನೆ ಆಗಿವೆ ಎಂದು ಅಂದಾಜಿಸಲಾಗಿದೆ. ಈ ಮೆಗಾ ಯೋಜನೆಯು ಕೇವಲ ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದಷ್ಟೇ ಅಲ್ಲದೆ, ದೇಶದ ಆರ್ಥಿಕತೆಯ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಹೊಸ ದಿಕ್ಸೂಚಿಯಾಗಲಿದೆ.
ಹೈಸ್ಪೀಡ್ ಬುಲೆಟ್ ರೈಲು ಯೋಜನೆ
ಭವಿಷ್ಯದ ಬುಲೆಟ್ ರೈಲು ಮಾರ್ಗಗಳು ಇನ್ಮುಂದೆ 'ಒಂದೇ ದೇಶ, ಒಂದೇ ಮಾದರಿ'ಯ ಎಂಜಿನಿಯರಿಂಗ್ ವಿನ್ಯಾಸವನ್ನು ಹೊಂದಿರಲಿವೆ. ಹಳಿಗಳಿಂದ ಹಿಡಿದು ಸಿಗ್ನಲಿಂಗ್‌ವರೆಗೆ ಎಲ್ಲದಕ್ಕೂ ಒಂದೇ ಮಾನದಂಡ ಇರುವುದರಿಂದ ಹಣ ಮತ್ತು ಸಮಯ ಎರಡೂ ಉಳಿತಾಯವಾಗಲಿದೆ!
ಸೇತುವೆ ಕಾಮಗಾರಿ ಹೈಲೈಟ್ಸ್:
ಒಟ್ಟು ಯೋಜನೆ: 28 ಉಕ್ಕಿನ ಸೇತುವೆಗಳು (ಮುಂಬೈ-ಅಹಮದಾಬಾದ್ ಮಾರ್ಗ)
ಗುಜರಾತ್ ಅಪ್ಡೇಟ್: ನಿಗದಿಯಾಗಿದ್ದ 17 ರ ಪೈಕಿ 14 ಸೇತುವೆಗಳು ರೆಡಿ!
ಗುರಿ: ನಿಗದಿತ ಸಮಯದಲ್ಲೇ ದೇಶದ ಮೊದಲ ಬುಲೆಟ್ ರೈಲು ಯೋಜನೆ ಪೂರ್ಣಗೊಳಿಸಲು ಅಧಿಕಾರಿಗಳ ಸಜ್ಜು.














Click it and Unblock the Notifications