ಕ್ರಿಕೆಟ್ ದೇವರು ಸಚಿನ್ ದಾಖಲೆ ಉಡೀಸ್ ಮಾಡಿದ ವೈಭವ್ ಸೂರ್ಯವಂಶಿ, ಕೊನೆಗೂ ನೆರವೇರಿದ ಅಭಿಮಾನಿಗಳ ಮಹದಾಸೆ

Vaibhav Sooryavanshi: ಐಪಿಎಲ್ 2026ರ ಸೀಸನ್‌ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದ ಬಿಹಾರದ 15 ವರ್ಷದ ವೈಭವ್ ಸೂರ್ಯವಂಶಿ ಕೊನೆಗೂ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಕೈಬಿಡಲಾಗಿದ್ದು, ಈ ಎಡಗೈ ಬ್ಯಾಟರ್‌ಗೆ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಈ ಮೂಲಕ ವೈಭವ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಕಳೆದ ಕೆಲವು ಪಂದ್ಯಗಳಿಂದ ಸತತ ಫಾರ್ಮ್ ಕೊರತೆ ಸಮಸ್ಯೆಯನ್ನು ಎದುರಿಸುತ್ತಿದ್ದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ಈ ಪಂದ್ಯದಿಂದ ಹೊರಗಿಡಲಾಗಿದ್ದು, ಅವರ ಸ್ಥಾನದಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಅವಕಾಶ ಕಲ್ಪಿಸಲಾಗಿದೆ. ಪಂದ್ಯದ ಟಾಸ್ ವೇಳೆ ಟೀಮ್ ಇಂಡಿಯಾ ನಾಯಕ ಶ್ರೇಯಸ್‌ ಅಯ್ಯರ್ ಅವರು ತಂಡದ ಈ ಪ್ರಮುಖ ಬದಲಾವಣೆಯನ್ನು ಪ್ರಕಟಿಸಿದರು. ಇತ್ತೀಚೆಗಷ್ಟೇ ಬೆಳಗ್ಗೆಯಷ್ಟೇ ವೈಭವ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಅಧ್ಯಾಯ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದು, ಅವರ ಈ ಮಹತ್ವದ ಪಾದಾರ್ಪಣೆಯ ಮುನ್ಸೂಚನೆಯೇ ಆಗಿತ್ತು ಎಂಬುದು ಈಗ ಸಾಬೀತಾಗಿದೆ.

Vaibhav Sooryavanshi Makes India Debut Breaks Sachin Tendulkar s Record in T20I vs England Today

ರಾಷ್ಟ್ರೀಯ ತಂಡಕ್ಕೆ ಐಪಿಎಲ್ ಅಬ್ಬರವೇ ದಾರಿ

ರಾಜಸ್ಥಾನ್ ರಾಯಲ್ಸ್ ತಂಡದ ಪರ ಐಪಿಎಲ್ 2026ರಲ್ಲಿ ಕಣಕ್ಕಿಳಿದಿದ್ದ ವೈಭವ್ ಸೂರ್ಯವಂಶಿ ಟೂರ್ನಿಯುದ್ದಕ್ಕೂ ಬೌಲರ್‌ಗಳ ಬೆವರಿಳಿಸಿದ್ದರು. ಅವರು 237ಕ್ಕೂ ಅಧಿಕ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿ 776 ರನ್ ಚಚ್ಚಿ ಇತಿಹಾಸ ನಿರ್ಮಿಸಿದ್ದರು. ಈ ಅಸಾಧಾರಣ ಬ್ಯಾಟಿಂಗ್ ಶೈಲಿಯನ್ನು ಕಂಡು ಬಿಸಿಸಿಐ ಆಯ್ಕೆ ಸಮಿತಿಯು ತಕ್ಷಣವೇ ಅವರನ್ನು ಐರ್ಲೆಂಡ್ ಹಾಗೂ ಇಂಗ್ಲೆಂಡ್ ಟಿ20 ಸರಣಿಗೆ ಆಯ್ಕೆ ಮಾಡಿತ್ತು. ಇತ್ತೀಚೆಗಷ್ಟೇ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಫೈನಲ್‌ ಪಂದ್ಯದಲ್ಲಿ ಅಬ್ಬರದ ಆಟ ಆಡಿ ತಂಡದ ಗೆಲುವಿಗೆ ಪ್ರಮುಖ ಇವರು ಪಾತ್ರವಹಿಸಿದ್ದರು.

ಕೊನೆಗೂ ನೆರವೇರಿದ ಅಭಿಮಾನಿಗಳ ಆಸೆ

ಐರ್ಲೆಂಡ್ ಸರಣಿ ಹಾಗೂ ಇಂಗ್ಲೆಂಡ್‌ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಬೆಂಚ್ ಕಾಯಿಸಿದ್ದ ಮ್ಯಾನೇಜ್‌ಮೆಂಟ್ ಅಂತಿಮವಾಗಿ ಇಂಗ್ಲೆಂಡ್ ನೆಲದಲ್ಲಿ ಅವರಿಗೆ ದೊಡ್ಡ ವೇದಿಕೆ ಕಲ್ಪಿಸಿಕೊಟ್ಟಿದೆ. ಅತಿ ಕಿರಿಯ ವಯಸ್ಸಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಆಟಗಾರರ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ ಈಗ ಅಗ್ರಸ್ಥಾನಕ್ಕೇರಿದ್ದಾರೆ. ಅಲ್ಲದೆ, ಅಭಿಮಾನಿಗಳ ಆಸೆ ಕೂಡ ನೆರವೇರಿದಂತಾಗಿದೆ.

ಸಚಿನ್ ತೆಂಡೂಲ್ಕರ್ ದಾಖಲೆ ಉಡೀಸ್

ಕ್ರಿಕೆಟ್ ದೇವರು ಅಂತಲೇ ಹೆಸರುವಾಸಿಯಾಗಿರುವ ಸಚಿನ್ ತೆಂಡೂಲ್ಕರ್ ಅವರು ತಮ್ಮ 16ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಆದರೆ ಇದೀಗ ಭಾರತೀಯ ಮತ್ತೊಬ್ಬ ಯುವ ಸ್ಟಾರ್ ಬ್ಯಾಟರ್ ವೈಭವ್ ಸೂರ್ಯವಂಶಿ ಅವರು 15ನೇ ವಯಸ್ಸಿನಲ್ಲೇ ಪಾದಾರ್ಪಣೆ ಮಾಡಿ ಸಚಿನ್ ಅವರ ದಾಖಲೆಯನ್ನು ಅಳಿಸಿದ್ದಾರೆ. ಇದು ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಆಗಿದೆ.

ಕಪಿಲ್ ದೇವ್, ಸಚಿನ್ ತೆಂಡೂಲ್ಕರ್ ಅವರಂತಹ ದಿಗ್ಗಜರು ಈ ಯುವಕನ ಬ್ಯಾಟಿಂಗ್ ಶೈಲಿಯನ್ನು ಈಗಾಗಲೇ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಭಾರತ ತಂಡದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಇತ್ತೀಚೆಗಷ್ಟೇ ನೆಟ್ಸ್‌ನಲ್ಲಿ ವೈಭವ್ ಅವರ ಆಟವನ್ನು ನೋಡಿ ಹೆಮ್ಮೆಯ ಮಾತುಗಳನ್ನಾಡಿದ್ದರು. ಭಾರತೀಯ ಕ್ರಿಕೆಟ್‌ನ ಮುಂದಿನ ಭವಿಷ್ಯ ಎಂದೇ ಗುರುತಿಸಿಕೊಂಡಿರುವ ವೈಭವ್ ಸೂರ್ಯವಂಶಿ ಇಂಗ್ಲೆಂಡ್‌ನ ಬಲಿಷ್ಠ ಬೌಲಿಂಗ್ ಲೈನ್‌ಅಪ್ ಎದುರು ತಮ್ಮ ಅಂತಾರಾಷ್ಟ್ರೀಯ ಪಯಣವನ್ನು ಹೇಗೆ ಆರಂಭಿಸಲಿದ್ದಾರೆ ಹಾಗೂ ಸಿಕ್ಕ ಅವಕಾಶವನ್ನು ಹೇಗೆ ಬಳಸಿಕೊಳ್ಳಲಿದ್ದಾರೆ ಎಂಬುದನ್ನು ನೋಡಲು ಇಡೀ ವಿಶ್ವದ ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+