ಮೆಟ್ರೋದಲ್ಲಿ ಪ್ರೇಮಿಗಳಲ್ಲ.. ಕಾಮ ಪಿಶಾಚಿಗಳ ಕಾಮದಾಟ, ವಿಡಿಯೋ ವೈರಲ್
Metro Video Viral: ಟ್ರಾಫಿಕ್ ಜಂಜಾಟ ಹಾಗೂ ಸಮಯ ಉಳಿತಾಯ ಮಾಡಲು ಬೆಂಗಳೂರಿನಂತಹ ಬೃಹತ್ ನಗರ ಪ್ರದೇಶಗಳಲ್ಲಿ ಬಹುತೇಕ ಮಂದಿ ಮೆಟ್ರೋವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಸಾರಿಗೆಯಲ್ಲಿ ಪ್ರತಿನಿತ್ಯ ಲಕ್ಷಾಂತರ ಮಂದಿ ಪ್ರಯಾಣ ಮಾಡುತ್ತಾರೆ. ಈ ರೈಲಿನಲ್ಲಿ ಕಠಿಣ ನಿಮಯಗಳಿದ್ದರೂ ಸಹ ಕೆಲವರು ಇವುಗಳನ್ನೆಲ್ಲಾ ಗಾಳಿಗೆ ತೂರಿ ಅಸಭ್ಯ ವರ್ತನೆಗಳನ್ನು ತೋರುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಲಿವೆ. ಇದೀಗ ಹೆಹಲಿಯಲ್ಲೂ ಇಂತಹದ್ದೇ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೆಟ್ರೋದಲ್ಲಿ ಅನೇಕ ಕಠಿಣ ನಿಯಮಗಳಿದ್ದರೂ ಸಹ ಕೆಲ ಯುವಕ-ಯುವತಿಯರು ತಮ್ಮಿಷ್ಟದಂತೆ ಅಸಭ್ಯವಾಗಿ ವರ್ತಿಸುವುದನ್ನು ಕಾಣಬಹುದು. ಸಾಮಾನ್ಯವಾಗಿ ನಿಜವಾದ ಪ್ರೇಮಿಗಳಾದವರು ಇಂತಹ ಸಾಹಸಗಳನ್ನ ಮಾಡುವುದಿಲ್ಲ. ಬದಲಿಗೆ ತೆವಲಿಗೋಸ್ಕರ ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಕೀಳು ಮಟ್ಟಕ್ಕಿಳಿದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಇಂತಹ ಘಟನೆಗಳು ದೇಶದ ರಾಜಧಾನಿ ದೆಹಲಿಯಲ್ಲೇ ಹೆಚ್ಚಾಗಿ ನಡೆಯುತ್ತಿರುವುದು ಕಳವಳಕಾರಿ ವಿಚಾರಚಾಗಿದೆ.

ಮೆಟ್ರೋದಲ್ಲೇ ಯುವಕ-ಯುವತಿ ಕಾಮದಾಟ
ದೆಹಲಿ ಮೆಟ್ರೋ ಇತ್ತೀಚಿನ ದಿನಗಳಲ್ಲಿ ಕೇವಲ ಲಕ್ಷಾಂತರ ಜನರ ದೈನಂದಿನ ಸಾರಿಗೆ ವ್ಯವಸ್ಥೆಯಾಗಿ ಉಳಿದಿಲ್ಲ. ಬದಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕ ವಿಡಿಯೋಗಳ ಮೂಲಕವೇ ಸದಾ ಸುದ್ದಿಯಲ್ಲಿದೆ. ಇದೀಗ ಮೆಟ್ರೋ ರೈಲಿನ ಒಳಗೆ ಯುವ ಜೋಡಿಯೊಂದು ಸಾರ್ವಜನಿಕರ ಸಮ್ಮುಖದಲ್ಲೇ ರೊಮ್ಯಾನ್ಸ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ದೃಶ್ಯಗಳನ್ನ ಕಂಡು ಸಾರ್ವಜನಿಕರು ಹಾಗೂ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.
ರೈಲಿನ ಬಾಗಿಲ ಬಳಿಯೇ ಅಸಭ್ಯ ವರ್ತನೆ
ವೈರಲ್ ಆಗಿರುವ ಈ ವಿಡಿಯೋದಲ್ಲಿ ಚಲಿಸುತ್ತಿರುವ ಮೆಟ್ರೋ ರೈಲಿನ ಬಾಗಿಲಿನ ಬಳಿ ಯುವಕ ಮತ್ತು ಯುವತಿ ನಿಂತಿರುವುದನ್ನು ಕಾಣಬಹುದು. ಸುತ್ತಲೂ ಪ್ರಯಾಣಿಕರು ಇದ್ದಾರೆ ಎಂಬ ಕನಿಷ್ಠ ಜ್ಞಾನವೂ ಇಲ್ಲದಂತೆ ಈ ಜೋಡಿಯು ಪರಸ್ಪರ ತಬ್ಬಿಕೊಂಡು ಅತ್ಯಂತ ಅಸಭ್ಯವಾಗಿ ವರ್ತಿಸುತ್ತಿರುತ್ತದೆ. ಅಕ್ಕಪಕ್ಕದ ಪ್ರಯಾಣಿಕರು ಮುಜುಗರದಿಂದ ಇವರತ್ತ ನೋಡುತ್ತಿದ್ದರೂ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಇವರು ಸಾರ್ವಜನಿಕವಾಗಿ ಅತಿರೇಕದ ವರ್ತನೆಯನ್ನು ಮುಂದುವರೆಸಿದ್ದಾರೆ. ಸಹ ಪ್ರಯಾಣಿಕರೊಬ್ಬರು ಈ ಇಡೀ ಘಟನೆಯ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಆಕ್ರೋಶ
ಈ ವಿಡಿಯೋ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ನಂತಹ ವೇದಿಕೆಗಳಲ್ಲಿ ವೈರಲ್ ಆಗಿದ್ದು, ಇದನ್ನ ಕಂಡ ಸಾಮಾಜಿಕ ಜಾಲತಾಣ ಬಳಕೆದಾರರು ಈ ಜೋಡಿಯ ಬೇಜವಾಬ್ದಾರಿ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. 'ಇಂತಹ ಕೆಲಸಗಳನ್ನು ಮಾಡಲು ಇವರಿಗೆ ಸಾರ್ವಜನಿಕ ಸ್ಥಳಗಳೇ ಬೇಕೇ? ಇವರಿಗೆ ಕನಿಷ್ಠ ಸಾಮಾಜಿಕ ಪ್ರಜ್ಞೆ ಅಥವಾ ನಾಚಿಕೆ ಇಲ್ಲವೆ? ಇವರ ಮನೆಯಲ್ಲಿ ಇದನ್ನೇ ಹೇಳಿಕೊಟ್ಟಿದ್ದಾರಾ? ಮೆಟ್ರೋದಲ್ಲಿ ಸಣ್ಣ ಮಕ್ಕಳು, ಹಿರಿಯ ನಾಗರಿಕರು ಪ್ರಯಾಣಿಸುತ್ತಾರೆ ಎನ್ನುವ ಸಾಮಾನ್ಯ ಪರಿಜ್ಞಾನ ಇಲ್ಲವೇ ಇವರಿಗೆ?,' ನೆಟ್ಟಿಗರೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ.
ಮತ್ತೊಬ್ಬರು ತಮಾಷೆಯ ಧಾಟಿಯಲ್ಲಿ ಪ್ರತಿಕ್ರಿಯಿಸಿದ್ದು, 'ದೆಹಲಿ ಮೆಟ್ರೋ ಈಗ ಸಾರ್ವಜನಿಕ ಸಾರಿಗೆಯಾಗಿ ಉಳಿದಿಲ್ಲ, ಅದು ಪ್ರೇಮಿಗಳ ಉಚಿತ ಮನರಂಜನಾ ತಾಣವಾಗಿ ಬದಲಾಗಿದೆ,' ಎಂದು ವ್ಯಂಗ್ಯವಾಡಿದ್ದಾರೆ. ಬಹುತೇಕರು ದೆಹಲಿ ಮೆಟ್ರೋ ರೈಲು ನಿಗಮಕ್ಕೆ ಈ ವಿಡಿಯೋವನ್ನು ಟ್ಯಾಗ್ ಮಾಡಿ, ಇಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು,' ಎಂದು ಒತ್ತಾಯಿಸಿದ್ದಾರೆ.
ಹೆಚ್ಚುತ್ತಿರುವ ನಿಯಮ ಉಲ್ಲಂಘಟನೆ ಪ್ರಕರಣಗಳು
ದೆಹಲಿ ಮೆಟ್ರೋದಲ್ಲಿ ಇಂತಹ ಅಸಭ್ಯ ವರ್ತನೆಗಳು, ವಿಚಿತ್ರ ರೀಲ್ಸ್ ಚಿತ್ರೀಕರಣ ಹಾಗೂ ಜಗಳಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಸಹ ರೈಲಿನ ಸೀಟುಗಳ ಮೇಲೆ ಕುಳಿತುಕೊಂಡು ರೊಮ್ಯಾಮ್ಸ್ ಮಾಡುವುದು, ಅರೆಬರೆ ಬಟ್ಟೆ ಧರಿಸಿ ರೀಲ್ಸ್ ಮಾಡುವುದು ಮತ್ತು ಸೀಟುಗಳಿಗಾಗಿ ಕೈಕೈ ಮಿಲಾಯಿಸುವ ಮಟ್ಟಿಗೆ ಗಲಾಟೆ ಮಾಡಿಕೊಂಡಿರುವ ಘಟನೆಗಳು ನಡೆದಿರುವ ಉದಾಹರಣೆಗಳಿವೆ.
ಡಿಎಂಆರ್ಸಿ ಅಧಿಕಾರಿಗಳು 'ಮೆಟ್ರೋದಲ್ಲಿ ವಿಡಿಯೋ ಚಿತ್ರೀಕರಣ ನಿಷೇಧಿಸಲಾಗಿದೆ ಮತ್ತು ಅಸಭ್ಯ ವರ್ತನೆ ತೋರಿದರೆ ಕಠಿಣ ದಂಡ ವಿಧಿಸಲಾಗುವುದು,' ಎಂದು ಹಲವು ಬಾರಿ ಎಚ್ಚರಿಕೆಗಳನ್ನು ನೀಡಿದ್ದರೂ ಕೆಲ ಪ್ರಯಾಣಿಕರು ಮಾತ್ರ ಇಂತಹ ನಿಯಮಗಳನ್ನು ಗಾಳಿಗೆ ತರುತ್ತಲೇ ಬರುತ್ತಿದ್ದಾರೆ.
दिल्ली मेट्रो में आशिकी का भूत सवार pic.twitter.com/OyfKoAHZQi
— 3 idiots (@SahilAli0n) July 4, 2026
ದಂಡದ ಜೊತೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯ
ಯುವ ಪೀಳಿಗೆಯು ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಕೆಲವು ಲೈಕ್ಸ್ ಮತ್ತು ವೀವ್ಸ್ ಪಡೆಯಲು ಅಥವಾ ತಮ್ಮ ವೈಯಕ್ತಿಕ ಆಸೆಗಳಿಗಾಗಿ ಸಾರ್ವಜನಿಕ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಸ್ವಾತಂತ್ರ್ಯವಿದೆ. ಆದರೂ ಅದು ಇತರರ ನೆಮ್ಮದಿಗೆ ಭಂಗ ತರುವಂತಿರಬಾರದು ಎಂಬುದು ಬಹುತೇಕರ ಅಭಿಪ್ರಾಯವಾಗಿದೆ. ಈ ನಿಟ್ಟಿನಲ್ಲಿ ಮೆಟ್ರೋ ಆಡಳಿತ ಮಂಡಳಿಯು ಕೇವಲ ಸಿಸಿಟಿವಿ ಕ್ಯಾಮೆರಾಗಳನ್ನು ನಂಬಿ ಕೂರದೆ, ರೈಲಿನೊಳಗೆ ಭದ್ರತಾ ಸಿಬ್ಬಂದಿಯ ಗಸ್ತನ್ನು ಹೆಚ್ಚಿಸಬೇಕು ಮತ್ತು ನಿಯಮ ಉಲ್ಲಂಘಿಸುವವರಿಗೆ ಸ್ಥಳದಲ್ಲೇ ಭಾರಿ ಪ್ರಮಾಣದ ದಂಡದ ಜೊತೆಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.












Click it and Unblock the Notifications