Womens Day: ನೈಋತ್ಯ ರೈಲ್ವೆ ಮಹಿಳಾ ಸಿಬ್ಬಂದಿಯಿಂದ ಬೆಂಗಳೂರು- ಮೈಸೂರು 'ರಾಜ್ಯ ರಾಣಿ' ಎಕ್ಸ್‌ಪ್ರೆಸ್ ರೈಲು ಸಂಚಾರ, ಮಾಹಿತಿ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬೆಂಗಳೂರು- ಮೈಸೂರು ರಾಜ್ಯ ರಾಣಿ ಎಕ್ಸಪ್ರೆಸ್‌ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆಯ ಬೆಂಗಳೂರು ನೈಋತ್ಯ ರೈಲ್ವೆ ವಿಭಾಗದ ಎಲ್ಲ ಮಹಿಳಾ ಸಿಬ್ಬಂದಿ ಚಾಲನೆ ನೀಡಿದರು.

ಬೆಂಗಳೂರು, ಮಾರ್ಚ್ 08: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬೆಂಗಳೂರು- ಮೈಸೂರು ರಾಜ್ಯ ರಾಣಿ ಎಕ್ಸಪ್ರೆಸ್‌ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆಯ ಬೆಂಗಳೂರು ನೈಋತ್ಯ ರೈಲ್ವೆ ವಿಭಾಗದ ಎಲ್ಲ ಮಹಿಳಾ ಸಿಬ್ಬಂದಿ ಚಾಲನೆ ನೀಡಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಭಾಗದ ಎಲ್ಲ ಮಹಿಳಾ ಸಿಬ್ಬಂದಿಯು ಈ ಬೆಂಗಳೂರು- ಮೈಸೂರು ರಾಜ್ಯ ರಾಣಿ ಎಕ್ಸಪ್ರೆಸ್‌ ರೈಲಿನ ಎಲ್ಲ ಕೆಲಸ (Operate) ಅವರೇ ನಿರ್ವಹಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತಾರೆ. ಇಂಥದ್ದೊಂದು ಆಚರಣೆಗೆ ನೈಋತ್ಯ ರೈಲ್ವೆ ಅನುವು ಮಾಡಿಕೊಂಡಿದೆ.

Bengaluru- Mysuru Rajya rani Express with all-women crew flagged off to mark Womens Day

ಪ್ರತಿ ವರ್ಷದಂತೆ ಈ ವರ್ಷವು ಬೆಂಗಳೂರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಮಾರ್ಚ್ 08ರಂದು 'ರಾಜ್ಯ ರಾಣಿ' ಎಕ್ಸಪ್ರೆಸ್ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದರು. ಇದು ಪ್ರತಿ ವರ್ಷ ನಡೆಸಿಕೊಂಡು ಬರಲಾಗುತ್ತಿದೆ ಎಂದು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ವಿಭಾಗದ ಮಹಿಳಾ ಸಿಬ್ಬಂದಿಯಾದ ಪೈಲಟ್ ಅಭಿರಾಮಿ, ಲೊಕೋ ಪೈಲಟ್ ಗಾಯತ್ರಿ ಕೃಷ್ಣನ್ ಮತ್ತು ಟ್ರೈನ್ ವ್ಯವಸ್ಥಾಪಕರು ಶೈಲಜಾ ಬೆಂಗಳೂರಿನಿಂದ ಮೈಸೂರುವರೆಗೆ 'ರಾಜ್ಯ ರಾಣಿ' ಎಕ್ಸಪ್ರೆಸ್ ರೈಲನ್ನು ಓಡಿಸಿದರು. ಕಟುಂಬದ ಜವಾಬ್ದಾರಿ ಹೊರುವ ಹಾಗೂ ಎಲ್ಲ ರಂಗದಲ್ಲಿ ತನ್ನ ಹೊಣೆ ನಿಭಾಯಿಸುವ ಮಹಿಳೆಯರು ಈ ದಿನ ರೈಲು ಓಡಿಸುವುದು ವಿಶೇಷವಾಗಿದೆ.

ಕಾರ್ಯಕ್ರಮದಲ್ಲಿ ಮಹಿಳಾ ಸ್ಟೇಷನ್ ಮಾಸ್ಟರ್‌ಗಳಾದ ಜೆ.ಫಾತಿನಾ, ಸರಸ್ವತಿ ಮತ್ತು ಪ್ರತಿಮಾ ಶರ್ಮಾ ಅವರು ರೈಲಿಗೆ ಚಾಲನೆ ನೀಡಿದರು. ಈ ವೇಳೆ ನೈಋತ್ಯ ರೈಲ್ವೆಯ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ (ಆಡಳಿತ) ಕುಸುಮಾ ಹರಿಪ್ರಸಾದ್, ವಿಭಾಗೀಯ ಅಧಿಕಾರಿ ಉಮಾ ಶರ್ಮಾ, ವಿಭಾಗದ ಎಲೆಕ್ಟ್ರಿಕ್ ಇಂಜಿನಿಯರ್ ಪೂಜಾ ಹಾಗೂ ವಿಭಾಗದ ಇನ್ನಿತರ ಅಧಿಕಾರಿಗಳಾದ ಛಾಯಾಮಣಿ ಎ.ಎಂ, ಶಿಲ್ಪಾ ಎಸ್, ಹರಾಥಿ ಮೀನಾ, ವಿಜಯಲಕ್ಷ್ಮೀ, ಪ್ರತಿಭಾ ಸಿಂಗ್, ವಿದ್ಯಾ ಎಂ ಉಪಸ್ಥಿತರಿದ್ದರು.

Bengaluru- Mysuru Rajya rani Express with all-women crew flagged off to mark Womens Day

ಟ್ರಾವೆಲಿಂಗ್ ಟಿಕೆಟ್ ಇನ್ಸಪೆಕ್ಟರ್‌ಗಳಾಗಿ ಉಮಾ ಪಿ.ಎಸ್, (TTI/SBC) ಮೀನಾಕ್ಷಿ ದೇವಿ, ರಮಾ ಹಂಸಾ, ಗೊಮಾಥಿ, ಟೀನಾ ಜ್ಯೋಸೆಫ್, ಸೋನಾ, ಸಿ.ಎಸ್. ಭಾರತಿ ಕಾರ್ಯ ನಿರ್ವಹಿಸಿದರು ಎಂದು ನೈಋತ್ಯ ರೈಲ್ವೆ ಇಲಾಖೆ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+