BMTC: ಬಿಎಂಟಿಸಿ ಪ್ರಯಾಣಿಕರು ಗಮನಿಸಲೇಬೇಕಾದ ಮಾಹಿತಿ

BMTC: ರಾಜ್ಯ ರಾಜಧಾನಿ ಬೆಂಗಳೂರಿನ ಜೀವನಾಡಿ ಸಾರಿಗೆಯಾಗಿರುವ ಬಿಎಂಟಿಸಿ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಮಹತ್ವದ ಯೋಜನೆಗಳನ್ನು ಜಾರಿ ಮಾಡುತ್ತಲಿರುತ್ತದೆ. ಹಾಗೆಯೇ ಇದೀಗ ಪಾಸ್‌ ವಿಚಾರವಾಗಿ ಬಿಗ್ ಅಪ್ಟೇಟ್‌ ಅನ್ನು ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಕಾರ್ಯಾಚರಣೆ ವ್ಯಾಪ್ತಿಯನ್ನು ಗಣನೀಯವಾಗಿ ವಿಸ್ತರಿಸಿದ್ದು, ಸುತ್ತಮುತ್ತಲಿನ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಿಗೆ ಬಸ್ ಸೇವೆಯನ್ನು ಒದಗಿಸಲು ಸಜ್ಜಾಗಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಬಿಎಂಟಿಸಿ ಮಾಸಿಕ ಪಾಸು ದರ ಹೆಚ್ಚಳವಾಗಿದೆ ಎಂಬ ವದಂತಿಗಳಿಗೆ ಸಂಸ್ಥೆಯು ಅಧಿಕೃತ ಸ್ಪಷ್ಟನೆ ನೀಡಿದ್ದು, ಯಾವುದೇ ಹಳೆಯ ಪಾಸುಗಳ ದರವನ್ನು ಹೆಚ್ಚಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

BMTC Bus Pass Update No Fare Hike for Old Monthly Passes New Extended Pass Complete Details

ಕಾರ್ಯಾಚರಣೆ ವ್ಯಾಪ್ತಿ ವಿಸ್ತರಣೆ

ರಾಜ್ಯ ಸರ್ಕಾರವು ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಬಿಎಂಟಿಸಿ ವ್ಯಾಪ್ತಿಯನ್ನು ಕಾಲಕಾಲಕ್ಕೆ ವಿಸ್ತರಿಸುತ್ತಾ ಬಂದಿದೆ. 1961ರಲ್ಲಿ ಕೇವಲ 20 ಕಿಲೋ ಮೀಟರ್ (12 ಮೈಲಿ) ಇದ್ದ ಬಿಟಿಎಸ್ ವ್ಯಾಪ್ತಿಯನ್ನು, 2014ರಲ್ಲಿ 25 ಕಿಲೋ ಮೀಟರ್‌ವರೆಗೆ ಹೆಚ್ಚಿಸಲಾಗಿತ್ತು. ಇದೀಗ 2026ರ ಜನವರಿ 5ರ ಸರ್ಕಾರಿ ಅಧಿಸೂಚನೆಯಂತೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಿಂದ ಬರೋಬ್ಬರಿ 40 ಕಿಲೋ ಮೀಟರ್‌ವರೆಗೆ ವಿಸ್ತರಿಸಲಾಗಿದೆ.

ಇದರ ಫಲವಾಗಿ ನಗರದ ಕೇಂದ್ರ ಭಾಗದಿಂದ ಈವರೆಗೆ ಸುಮಾರು 40 ರಿಂದ 42 ಕಿಲೋ ಮೀಟರ್‌ವರೆಗೆ ಮಾತ್ರ ಇದ್ದ ಬಸ್ ಸೇವೆಗಳನ್ನು, ಇದೀಗ 65 ರಿಂದ 70 ಕಿ.ಮೀ.ವರೆಗೆ ವಿಸ್ತರಿಸಲು ಅವಕಾಶ ಸಿಕ್ಕಿದೆ. ಈ ಮಹತ್ವದ ತೀರ್ಮಾನದಿಂದಾಗಿ ಬೆಂಗಳೂರಿನ ಹೊರವಲಯದಲ್ಲಿರುವ ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ಚಿಕ್ಕಬಳ್ಳಾಪುರ ಮತ್ತು ಮಾಲೂರು ಸೇರಿದಂತೆ ಪ್ರಮುಖ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಿಗೆ ಬಿಎಂಟಿಸಿ ತನ್ನ ಸೇವೆಯನ್ನು ಯಶಸ್ವಿಯಾಗಿ ವಿಸ್ತರಿಸಿದೆ. ಇದರಿಂದ ನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ತುಂಬಾ ಸಹಾಯ ಆದಂತಾಗಿದೆ.

ಸೀಮಿತ ಮತ್ತು ವಿಸ್ತಾರ ವಲಯಗಳ ವರ್ಗೀಕರಣ

ಹೊಸದಾಗಿ ವಿಸ್ತರಣೆಯಾಗಿರುವ ಸುದೀರ್ಘ ಮಾರ್ಗಗಳನ್ನು ಸಮರ್ಥವಾಗಿ ನಿರ್ವಹಿಸಲು ಬಿಎಂಟಿಸಿ ಸಂಪರ್ಕವನ್ನು ಅನ್ನು ಎರಡು ಭಾಗಗಳಾಗಿ ವಿಂಗಡಿಸಿದೆ. 1 ಸೀಮಿತ ವ್ಯಾಪ್ತಿ: ನಗರದ ಕೇಂದ್ರ ಭಾಗದಿಂದ 40 ಕಿ.ಮೀ ವರೆಗಿನ ಪ್ರದೇಶ. 2. ವಿಸ್ತಾರ ವ್ಯಾಪ್ತಿ: 40 ಕಿ.ಮೀ ದಾಟಿದ ನಂತರದ ಹೊಸದಾಗಿ ಸೇರ್ಪಡೆಯಾದ ಪ್ರದೇಶಗಳು. ಪ್ರಸ್ತುತ ಬಿಎಂಟಿಸಿ ಒಟ್ಟು 1,819 ಮಾರ್ಗಗಳಲ್ಲಿ 6,295 ಬಸ್‌ಗಳನ್ನು ಓಡಿಸುತ್ತಿದ್ದು, ಈ ಪೈಕಿ 96 ಮಾರ್ಗಗಳ 216 ಬಸ್‌ಗಳು ಹೊಸ ವಿಸ್ತಾರ ವ್ಯಾಪ್ತಿಯಲ್ಲಿ ಸಂಚರಿಸುತ್ತಿವೆ.

ಪಾಸುಗಳ ದರ ಹೆಚ್ಚಳ ವದಂತಿಗೆ ತೆರೆ

ಈಗಾಗಲೇ ಜಾರಿಯಲ್ಲಿರುವ ಸಾಮಾನ್ಯ ಮಾಸಿಕ ಹಾಗೂ ದೈನಿಕ ಪಾಸುಗಳು 'ಸೀಮಿತ ವ್ಯಾಪ್ತಿ'ಯೊಳಗೆ (40 ಕಿ.ಮೀ ಒಳಗೆ) ಯಾವುದೇ ಬದಲಾವಣೆ ಇಲ್ಲದೆ ಮುಂದುವರಿಯಲಿವೆ. ಲಕ್ಷಾಂತರ ಸಾರ್ವಜನಿಕರು ಬಳಸುವ ರೂ. 1,200ರ ಸಾಮಾನ್ಯ ಮಾಸಿಕ ಪಾಸಿನ ದರದಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ. ಆದರೆ 40 ಕಿ.ಮೀ ಗಿಂತ ದೂರದ ಹೊಸದಾಗಿ ವಿಸ್ತರಿಸಿರುವ ಮಾರ್ಗಗಳಲ್ಲಿ ಪ್ರಯಾಣಿಸುವವರಿಗಾಗಿ ಮಾತ್ರ 2026ರ ಜೂನ್ 2ರಿಂದ ಹೊಸದಾಗಿ 'ಸಾಮಾನ್ಯ ವಿಸ್ತಾರ' ಪಾಸುಗಳನ್ನು ಪರಿಚಯಿಸಲಾಗಿದೆ.

ಜೂನ್ 2ರಿಂದ 21ರ ವರೆಗಿನ ಪಾಸುಗಳ ಮಾರಾಟದ ವಿವರ

* ಸಾಮಾನ್ಯ ಮಾಸಿಕ ಪಾಸು (ದರದಲ್ಲಿ ಬದಲಾವಣೆ ಇಲ್ಲ): ₹1,200, ಮಾರಾಟವಾದ ಪಾಸುಗಳ ಸಂಖ್ಯೆ 60,400

* ಸಾಮಾನ್ಯ ವಿಸ್ತಾರ ಮಾಸಿಕ ಪಾಸು: ₹1,500, ಮಾರಾಟವಾದ ಪಾಸುಗಳ ಸಂಖ್ಯೆ 160

* ಸಾಮಾನ್ಯ ವಿಸ್ತಾರ ದೈನಿಕ ಪಾಸು: ₹120, ಮಾರಾಟವಾದ ಪಾಸುಗಳ ಸಂಖ್ಯೆ 29

* ಸಾಮಾನ್ಯ ವಿಸ್ತಾರ ಸಾಪ್ತಾಹಿಕ ಪಾಸು: ₹550, ಮಾರಾಟವಾದ ಪಾಸುಗಳ ಸಂಖ್ಯೆ 3

ಅಂಕಿ-ಅಂಶಗಳ ಪ್ರಕಾರ, ನಿತ್ಯ ಪ್ರಯಾಣಿಸುವ ಬಹುತೇಕರು ಎಂದಿನಂತೆ 1,200 ರೂಪಾಗಳ ಸಾಮಾನ್ಯ ಮಾಸಿಕ ಪಾಸನ್ನೇ ಖರೀದಿಸುತ್ತಿದ್ದಾರೆ. ಹೊಸ ವಿಸ್ತಾರ ಪಾಸುಗಳು ಕೇವಲ ದೂರದ ಊರುಗಳಿಂದ ಬರುವವರಿಗಷ್ಟೇ ಅನ್ವಯವಾಗುತ್ತದೆ. ಆದ್ದರಿಂದ ಸಾರ್ವಜನಿಕರು ಯಾವುದೇ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಹಾಗೂ ಬಿಎಂಟಿಸಿ ಸಂಸ್ಥೆಯೊಂದಿಗೆ ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+