ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವ ರಾಜ್ಯದಲ್ಲಿ ಲಸಿಕೆ ಹೇಗೆ ಬಳಕೆಯಾಗಿದೆ ಗೊತ್ತಾ? ಇಲ್ಲಿದೆ ಮಾಹಿತಿ

|
Google Oneindia Kannada News

ನವದೆಹಲಿ, ಜೂನ್ 10: ಕೇರಳ ಹಾಗೂ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಲಸಿಕೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಕೆ ಮಾಡಲಾಗುತ್ತಿದೆ. ಲಸಿಕೆ ವೇಸ್ಟೇಜ್ ಲೆಕ್ಕಾಚಾರದಲ್ಲಿ ಈ ಎರಡು ರಾಜ್ಯಗಳು ಮೈನಸ್ ಸಾಧನೆಯನ್ನು ಮಾಡಿದೆ. ಕೇರಳ ವೇಸ್ಟೇಜ್ ಪ್ರಮಾಣ -6.37 ಇದ್ದರೆ ಪಶ್ಚಿಮ ಬಂಗಾಳದಲ್ಲಿ ಇದರ ಪ್ರಮಾಣ -5.48 ಇದೆ. ಈ ಎರಡು ರಾಜ್ಯಗಳು ತಮಗೆ ನೀಡಿರುವ ಡೋಸ್‌ಗಳಲ್ಲಿ 1.10 ಲಕ್ಷ ಹಾಗೂ 1.61 ಲಕ್ಷ ಡೋಸ್‌ಗಳನ್ನು ಉಳಿಸಿಕೊಂಡಿವೆ.

ಈ ಮಧ್ಯೆ ಜಾರ್ಖಂಡ್ ರಾಜ್ಯ ಲಸಿಕೆ ವೇಸ್ಟೇಜ್‌ನಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. 33.95 ಶೇಕಡಾ ಲಸಿಕೆ ಈ ರಾಜ್ಯದಲ್ಲಿ ವ್ಯರ್ಥವಾಗುತ್ತಿದೆ ಎಂದು ಸರ್ಕಾರದ ಅಂಕಿಅಂಶಗಳು ಹೇಳುತ್ತಿವೆ. ಲಸಿಕೆ ವೇಸ್ಟೇಜ್‌ನಲ್ಲಿ ಚತ್ತೀಸ್ ಗಢ ಎರಡನೇ ಸ್ಥಾನದಲ್ಲಿದ್ದು 15.79 ಶೇಕಡಾ ಲಸಿಕೆ ಇಲ್ಲಿ ವ್ಯರ್ಥವಾಗುತ್ತಿದೆ. ಮಧ್ಯಪ್ರದೇಶದಲ್ಲಿ 7.35 ಶೇಕಡಾ ಲಸಿಕೆ ವ್ಯರ್ಥವಾಗುತ್ತಿದ್ದು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಕೇಂದ್ರ ಸರ್ಕಾರಿ ನೌಕರರಿಗೆ 15 ದಿನಗಳ ಕೊರೊನಾ ಸಾಂಕ್ರಾಮಿಕ ರಜೆ ಘೋಷಣೆ ಕೇಂದ್ರ ಸರ್ಕಾರಿ ನೌಕರರಿಗೆ 15 ದಿನಗಳ ಕೊರೊನಾ ಸಾಂಕ್ರಾಮಿಕ ರಜೆ ಘೋಷಣೆ

ಇನ್ನು ಉಳಿದಂತೆ ಲಸಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ವ್ಯರ್ಥ ಮಾಡುತ್ತಿರುವ ರಾಜ್ಯಗಳಲ್ಲಿ ಪಂಜಾಬ್ 7.08, ದೆಹಲಿ 3.95, ರಾಜಸ್ಥಾನ 3.91, ಉತ್ತರ ಪ್ರದೇಶ 3.78, ಗುಜರಾತ್ 3.63 ಮತ್ತು ಮಹಾರಾಷ್ಟ್ರ 3.59 ಶೇಕಡಾ ಪ್ರಮಾಣದಲ್ಲಿ ವ್ಯರ್ಥವಾಗುತ್ತಿದೆ ಎಂದು ಸರ್ಕಾರಿ ಅಂಕಿಅಂಶಗಳು ಬಹಿರಂಗಪಡಿಸಿದೆ.

Covid Vaccine wastage statistics of states in India

ಅಂಕಿಅಂಶಗಳು ನೀಡುವ ಮಾಹಿತಿಯ ಪ್ರಕಾರ ಮೇ ತಿಂಗಳಿನಲ್ಲಿ 7.90 ಕೋಟಿ ಲಸಿಕೆಗಳನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಿಸಲಾಗಿತ್ತು. ಇದರಲ್ಲಿ 6.58 ಕೋಟಿ ಲಸಿಕೆಗಳನ್ನು ಬಳಸಿಕೊಂಡು 6.10 ಕೋಟಿ ಡೋಸ್‌ಗಳನ್ನು ನೀಡಲಾಗಿತ್ತು. ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಮೇ ತಿಂಗಳಿನಲ್ಲಿ ಲಸಿಕೆ ನೀಡಿದ ಪ್ರಮಾಣ ಕಡಿಮೆಯಾಗಿದೆ. ಏಪ್ರಿಲ್ ತಿಂಗಳಿನಲ್ಲಿ 9.02 ಕೋಟಿ ಡೋಸ್‌ಗಳನ್ನು ಬಳಕೆ ಮಾಡಿ 8.98 ಕೋಟಿ ಡೋಸ್‌ಗಳನ್ನು ನೀಡಲಾಗಿತ್ತು.

ಇನ್ನು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಜೂನ್ 7ರವರೆಗಿನ ಅಂಕಿಅಂಶದ ಪ್ರಕಾರ ಒಟ್ಟಾರೆ 38 ಶೇಕಡಾದಷ್ಟು ಜನರಿಗೆ ಮೊದಲ ಡೋಸ್ ನೀಡಲಾಗಿದೆ. ಇದರಲ್ಲಿ ತ್ರಿಪುರಾ ಉತ್ತಮ ಸಾಧನೆ ತೋರಿದ್ದು 92 ಶೇಕಡಾ ಜನರಿಗೆ ಮೊದಲ ಡೋಸ್ ವಿತರಿಸಿದೆ. ರಾಜಸ್ಥಾನ ಹಾಗೂ ಛತ್ತೀಸ್‌ಘರ್ ರಾಜ್ಯಗಳು 65 ಶೇಕಡಾದಷ್ಟು 45 ವರ್ಷ ಮೇಲ್ಪಟ್ಟವರಿಗೆ ಮೊದಲ ಲಸಿಕೆಯನ್ನು ನೀಡಿದೆ. ಉಳಿದಂತೆ ಗುಜರಾತ್‌ನಲ್ಲಿ 53 ಶೇಕಡಾ, ಕೇರಳದಲ್ಲಿ 51 ಶೇಕಡ ಹಾಗೂ ದೆಹಲಿಯಲ್ಲಿ 49 ಶೇಕಡದಷ್ಟು ನೀಡಲಾಗಿದೆ.

ತಮಿಳುನಾಡಿನಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರ ಮೊದಲ ಡೋಸ್ ಲಸಿಕೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ(19 ಶೇಕಡ) ನಡೆದಿದ್ದು, ಜಾರ್ಖಂಡ್ ಮತ್ತು ಉತ್ತರಪ್ರದೇಶದಲ್ಲಿ ತಲಾ 24 ಶೇಕಡಾ ಹಾಗೂ ಬಿಹಾರದಲ್ಲಿ 25 ಶೇಕಡಾ 45 ವರ್ಷ ಮೇಲ್ಪಟ್ಟವರಿಗೆ ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿದೆ.

English summary
Here is the full details of Covid Vaccine wastage statistics of states in India. Kerala and West Bengal states are using Vaccines very effectively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X