ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರ್ಕಾರಿ ನೌಕರರಿಗೆ 15 ದಿನಗಳ ಕೊರೊನಾ ಸಾಂಕ್ರಾಮಿಕ ರಜೆ ಘೋಷಣೆ

|
Google Oneindia Kannada News

ನವದೆಹಲಿ, ಜೂನ್ 09: ಕೇಂದ್ರ ಸರ್ಕಾರವು ತನ್ನ ನೌಕರರಿಗೆ 15 ದಿನಗಳ ವಿಶೇಷ ಕೊರೊನಾ ಸಾಂಕ್ರಾಮಿಕ ರಜೆಯನ್ನು ಘೊಷಣೆ ಮಾಡಿದೆ.

ಎಲ್ಲಾ ಕೇಂದ್ರ ಸರ್ಕಾರಿ ನೌಕರರು ತಮ್ಮ ಪೋಷಕರು ಅಥವಾ ಯಾವುದೇ ಅವಲಂಬಿತ ಕುಟುಂಬ ಸದಸ್ಯರು ಕೋವಿಡ್ ಸೋಂಕಿಗೆ ತುತ್ತಾದ ಸಂದರ್ಭದಲ್ಲಿ ಅವರ ಆರೈಕೆಗಾಗಿ 15 ದಿನಗಳ ವಿಶೇಷ ಸಮಾನ್ಯ ರಜೆ (ಎಸ್‌ಸಿಎಲ್) ಪಡೆಯಬಹುದು ಎಂದು ಸಿಬ್ಬಂದಿ ಸಚಿವಾಲಯ ಆದೇಶ ಹೊರಡಿಸಿದೆ.

ಭಾರತದಲ್ಲಿ ಕೊರೊನಾವೈರಸ್ ಹೊಸ ಪ್ರಕರಣ, ಪರೀಕ್ಷೆ, ಲಸಿಕೆ ವಿತರಣೆ ವಿವರಭಾರತದಲ್ಲಿ ಕೊರೊನಾವೈರಸ್ ಹೊಸ ಪ್ರಕರಣ, ಪರೀಕ್ಷೆ, ಲಸಿಕೆ ವಿತರಣೆ ವಿವರ

ಅಷ್ಟೇ ಅಲ್ಲದೆ ಈ ವಿಶೇಷ ರಜೆಗಳ 15 ದಿನಗಳ ಅವಧಿ ಮುಕ್ತಾಯದ ಬಳಿಕವೂ ಕೂಡ ಕುಟುಂಬದ ಸೋಂಕಿತ ವ್ಯಕ್ತಿ ಅಥವಾ ಪೋಷಕರು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರೆ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗುವವರೆಗೂ ಸಂತ್ರಸ್ಥ ನೌಕರನ ರಜೆಯನ್ನು ವಿಸ್ತರಣೆ ಮಾಡಲು ಅವಕಾಶ ನೀಡಲಾಗಿದೆ.

15 Says Special Casual Leave For Govt Employees Whose Parents Test COVID Positive

ಅಂತೆಯೇ ಹೋಮ್ ಐಸೋಲೇಷನ್ ನಲ್ಲಿರುವಾಗ ಆಸ್ಪತ್ರೆಗೆ ಸೇರುವ ಪರಿಸ್ಥಿತಿ ಬಂದಾಗ ಅಂತಹ ಸಂದರ್ಭದಲ್ಲಿ ಪರೀಕ್ಷೆ ದೃಢಪಟ್ಟ ದಿನದಿಂದ 20 ದಿನಗಳವರೆಗೂ ರಜೆ ಪಡೆಬಹುದಾಗಿದೆ. ಈ ಅವಧಿಯಲ್ಲೂ ನೌಕರ ಗುಣಮುಖರಾಗದಿದ್ದರೆ ಅಂತಹ ನೌಕರರು ದಾಖಲೆ ನೀಡಿದರೆ 20 ದಿನಗಳಿಗಿಂತಲೂ ಹೆಚ್ಚಿನ ರಜೆ ಪಡೆಯಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಂತೆಯೇ ಒಂದು ವೇಳೆ ಸರ್ಕಾರಿ ನೌಕರರಿಗೇ ಸೋಂಕು ದೃಢಪಟ್ಟರೆ ಅಂತಹ ಸಂದರ್ಭದಲ್ಲಿ ಮನೆ ಪ್ರತ್ಯೇಕತೆ ಅಥವಾ ಕ್ವಾರಂಟೈನ್ ನಲ್ಲಿರುವ ಸಂದರ್ಭದಲ್ಲಿ 20 ದಿನಗಳ ವರೆಗೂ ಪ್ರಯಾಣ ರಜೆ ನೀಡಲಾಗುವುದು.

ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಚಿಕಿತ್ಸೆ, ಆಸ್ಪತ್ರೆಗೆ ದಾಖಲು ಅಥವಾ ಕ್ಯಾರೆಂಟೈನ್ ಅವಧಿಯ ಬಗ್ಗೆ ಸಿಬ್ಬಂದಿ ವಲಯಗಳಿಂದ ಬಂದಿದ್ದ ಹಲವಾರು ಪ್ರಶ್ನೆಗಳನ್ನು ಗಮನದಲ್ಲಿಟ್ಟುಕೊಂಡು ಸಿಬ್ಬಂದಿ ಸಚಿವಾಲಯ ಇಂತಹುದೊಂದು ಪ್ರಮುಖ ಆದೇಶ ಹೊರಡಿಸಿದೆ ಎನ್ನಲಾಗಿದೆ.

ಅಂತೆಯೇ ಕಂಟೈನ್ ಮೆಂಟ್ ಝೋನ್ ಗಳಲ್ಲಿ ವಾಸಿಸುತ್ತಿರುವ ನೌಕರರು ಮತ್ತು ಹೋಮ್ ಐಸೋಲೇಷನ್ ನಲ್ಲಿರುವ ಸಿಬ್ಬಂದಿಗಳು ಬಳಕೆ ಮಾಡಿಕೊಳ್ಳುವ 15 ದಿನಗಳ ರಜೆಯನ್ನು ಕೆಲಸ ಮಾಡಿದ ಅಥವಾ ವರ್ಕ್ ಫ್ರಂ ಹೋಮ್ ಎಂದು ಪರಿಗಣಿಸಬೇಕು ಆದೇಶದಲ್ಲಿ ಸೂಚಿಸಲಾಗಿದೆ.

English summary
All central government employees will be able to get 15 days of special casual leave (SCL) in case their parents or any dependent family members test COVID-19 positive, according to an order issued by the Ministry of Personnel, Public Grievances and Pensions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X