ಉ.ಪ್ರದೇಶದಲ್ಲಿ ಸಾವಿಗೀಡಾಗಿದ್ದ ಕಲಬುರಗಿ ಅಧಿಕಾರಿ ಅಂತಿಮ ದರ್ಶನ

Posted By:
Subscribe to Oneindia Kannada

ಕಲಬುರಗಿ, ಮಾರ್ಚ್ 10: ಉತ್ತರ ಪ್ರದೇಶದಲ್ಲಿ ಚುನಾವಣಾ ಸೇವೆಗಾಗಿ ನಿಯೋಜಿತರಾಗಿ ತೆರಳಿದ್ದಾಗ ರಸ್ತೆ ಅಪಘಾತದಲ್ಲಿ ಮೃತರಾಗಿದ್ದ ಕಲಬುರಗಿಯ ಮೀಸಲು ಪಡೆಯ ಎಎಸ್ಐ ಅಮೃತ್ (50) ಅವರ ಪಾರ್ಥಿವ ಶರೀರ ಇಂದು ಕಲಬುರಗಿ ನಗರಕ್ಕೆ ತರಲಾಯಿತು.

ನಗರದ ಚನ್ನವೀರ ಕಾಲೋನಿಯಲ್ಲಿರುವ ಅಮೃತ್ ಅವರ ಸ್ವಗೃಹದಲ್ಲಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು. ಅವರ ಅಪಾರ ಬಂಧುಗಳು ಹಾಗೂ ಸ್ನೇಹಿತರು ಆಗಮಿಸಿ ಅಧಿಕಾರಿಯ ಅಂತಿಮ ದರ್ಶನ ಪಡೆದರು.

Body of Kalaburagi Reserve Police officer, died in UP brought to his home

ಉತ್ತರ ಪ್ರದೇಶದಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಮೃತ್ ಅವರನ್ನು ಆ ರಾಜ್ಯದ ಜೀಹಾನ್ ಪುರದಲ್ಲಿ ಸೇವೆಗಾಗಿ ನಿಯೋಜಿಸಲಾಗಿತ್ತು.

ಮಾ. 8ರಂದು ಚುನಾವಣಾ ಕರ್ತವ್ಯ ಮುಗಿಸಿ ಅವರು ಸಹ ಸಿಬ್ಬಂದಿಯೊಡನೆ ತಾವು ಉಳಿದುಕೊಂಡಿದ್ದ ಸ್ಥಳಕ್ಕೆ ಬಸ್ ನಲ್ಲಿ ಆಗಮಿಸುವಾಗ ಅವರು ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿ ಅಮೃತ್ ಅವರು ಅಸುನೀಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The body of Kalaburai reserve police ASI Amruth (50) who had died in Uttar Pradesh on March 8th, has been taken to his home in Kalaburagi. He was deputed to Uttar Pradesh for election duty recently where he met with the acciedent and expired.
Please Wait while comments are loading...