KKRTC: ಕೊಪ್ಪಳ, ಗಂಗಾವತಿ, ಕಲಬುರಗಿ, ಬೀದರ್ ಮಾರ್ಗಕ್ಕೆ ನೂತನ ಸಾರಿಗೆ ಆರಂಭ
ಕೊಪ್ಪಳ, ಮಾರ್ಚ್ 15: ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳು, ಸಾರ್ವಜನಿಕ ಪ್ರಯಾಣಿಕರ ಬೇಡಿಕೆಯ ಮೇರೆಗೆ ಕಲ್ಯಾಣ ಕನಾಟಕ ರಸ್ತೆ ಸಾರಿಗೆ ನಿಗಮದಿಂದ ಕೊಪ್ಪಳ, ಗಂಗಾವತಿ, ಕಲಬುರಗಿ, ಬೀದರ್ ಮಾರ್ಗದಲ್ಲಿ ನೂತನ ಪ್ರತಿಷ್ಟಿತ ನಾನ್ ಎಸಿ ಸ್ಲೀಪರ್ ರಾತ್ರಿ ಸಾರಿಗೆಯನ್ನು ಪ್ರಾರಂಭಿಸಲಾಗಿದೆ.
ಬಸ್ ಕಾರ್ಯಾಚರಣೆ ವಿವರಗಳು
ಕಲ್ಯಾಣ ಕನಾಟಕ ರಸ್ತೆ ಸಾರಿಗೆ ನಿಗಮದಿಂದ ನಾನ್ ಎಸಿ ಸ್ಲೀಪರ್ ವಾಹನವು ಕೊಪ್ಪಳದಿಂದ ರಾತ್ರಿ 20.30 ಗಂಟೆಗೆ ಹಾಗೂ ಗಂಗಾವತಿಯಿಂದ ಸಂಜೆ 4.15 ಮತ್ತು ರಾತ್ರಿ 21.45ಕ್ಕೆ ಹೊರಡಲಿವೆ. ಈ ವಾಹನಗಳು ಕಲಬುರಗಿಗೆ ಬೆಳಗ್ಗೆ 3.45ಕ್ಕೆ ಮತ್ತು ರಾತ್ರಿ 21.30ಕ್ಕೆ ತಲುಪಲಿವೆ. ಬೀದರ್‌ಗೆ 6.45ಕ್ಕೆ ತಲುಪಲಿದೆ.

ಇನ್ನು, ಕಲಬುರಗಿಯಿಂದ ರಾತ್ರಿ 22:00ಕ್ಕೆ ಮತ್ತು ಸಂಜೆ 4 ಗಂಟೆಗೆ ಹೊರಡಲಿರುವ ವಾಹನಗಳು ಗಂಗಾವತಿಗೆ ಬೆಳಗ್ಗೆ 4 ಗಂಟೆಗೆ ಮತ್ತು ರಾತ್ರಿ 21.30ಕ್ಕೆ ತಲುಪಲಿವೆ. ಬೀದರ್‌ನಿಂದ 18.30ಕ್ಕೆ ಹೊರಡಲಿರುವ ವಾಹನಗಳು ಕೊಪ್ಪಳಕ್ಕೆ 5.15ಕ್ಕೆ ತಲುಪಲಿದೆ.
ಕೊಪ್ಪಳ, ಗಂಗಾವತಿ, ಕಲಬುರಗಿ, ಬೀದರ್ ಮಾರ್ಗದ ಸಾರಿಗೆಗೆ ಮುಂಗಡ ಟಿಕೇಟ್ ಬುಕ್ ಮಾಡಲು ಸಂಸ್ಥೆಯ ಅಧಿಕೃತ ವೆಬ್‌ಸೈಟ್ www.ksrtc.in ನಲ್ಲಿ ಬುಕ್ ಮಾಡಬಹುದು. ಜೊತೆಗೆ ಕಲ್ಯಾಣ ಕನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದ ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾಗಳ ಮುಂಗಡ ಬುಕ್ಕಿಂಗ್ ಕೌಂಟರ್‌ಗಳಲ್ಲಿ ಮುಂಗಡ ಟಿಕೆಟ್ ಬುಕ್ ಮಾಡಬಹುದಾಗಿದೆ. ಸಾರ್ವಜನಿಕ ಪ್ರಯಾಣಿಕರು ಈ ಸಾರಿಗೆ ಸೌಲಭ್ಯದ ಸದಪಯೋಗ ಪಡೆದುಕೊಳ್ಳುವಂತೆ ಕಲ್ಯಾಣ ಕನಾಟಕ ರಸ್ತೆ ಸಾರಿಗೆ ನಿಗಮದ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ-ಬೆಂಗಳೂರು ಮಾರ್ಗದ ಕಲ್ಯಾಣ ರಥ ಮಾರ್ಗ ಬದಲಾವಣೆ
ಇನ್ನು, ಕಲಬುರಗಿ - ಬೆಂಗಳೂರು ಮಾರ್ಗದ ಕಲ್ಯಾಣ ರಥ (ವೋಲ್ವೋ ಮಲ್ಟಿ ಎಕ್ಸೆಲ್ ಎ.ಸಿ ಸ್ಲೀಪರ್) ಸಾರಿಗೆ ಯಾದಗಿರ, ಶಕ್ತಿನಗರ, ರಾಯಚೂರು, ಮಂತ್ರಾಲಯ ಮಾರ್ಗದ ಮುಖಾಂತರ ಹೊರಡಲಿರುವ ಬಗ್ಗೆಯೂ ಪ್ರಯಾಣಿಕರಿಗೆ ಕಲ್ಯಾಣ ಕರ್ನಾಟಕ ಸಾರಿಗೆ ಸೂಚನೆ ನೀಡಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಕಲಬುರಗಿ - ಬೆಂಗಳೂರು ಯಾದಗಿರ, ಶಕ್ತಿನಗರ, ರಾಯಚೂರು, ಮಂತ್ರಾಲಯ ಮಾರ್ಗದ ಕಲ್ಯಾಣ ರಥ (ವೋಲ್ಲೋ ಮಲ್ಟಿ ಎಕ್ಸೆಲ್ ಎ.ಸಿ ಸ್ವೀಪರ್) ಸಾರಿಗೆಯನ್ನು ಕೃಷ್ಣಾ ನದಿ ಸೇತುವೆ ಕಾಮಗಾರಿ ಪ್ರಯುಕ್ತ ಸದರಿ ಸಾರಿಗೆ ಕಲಬುರಗಿ ಜೇವರ್ಗಿ, ಶಹಾಪೂರ, ದೇವದುರ್ಗ, ರಾಯಾಚೂರು, ಮಂತ್ರಾಲಯ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿತ್ತು.
ಆದರೆ ಕೃಷ್ಣಾ ನದಿ ಸೇತುವೆ ಕಾಮಗಾರಿ ಮುಕ್ತಾಯಗೊಂಡಿರುವ ಪ್ರಯುಕ್ತ ದಿನಾಂಕ. 12.03.2024 ರಿಂದಕಲಬುರಗಿ ಯಾದಗಿರಿ, ರಾಯಚೂರು, ಮಂತ್ರಾಲಯ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಯಾದಗಿರಿ, ರಾಯಚೂರು, ಮಂತ್ರಾಲಯ ಮಾರ್ಗದಲ್ಲಿ ಹೋಗುವ ಪ್ರಯಾಣಿಕರು ಕಲ್ಯಾಣ ರಥ (ವೋಲ್ಲೋ ಮಲ್ಟಿ ಎಕ್ಸೆಲ್ ಎ.ಸಿ ಸ್ವೀಪರ್) ಬಸ್ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಾರಿಗೆ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ.












Click it and Unblock the Notifications