5 ಲಕ್ಷ ಮಂದಿಗೆ ಉದ್ಯೋಗ? ಆ್ಯಪಲ್ 3 ವರ್ಷದ ಪ್ಲ್ಯಾನ್ ಸೂಪರ್!

ಐಫೋನ್ ಅಂದ್ರೆ ಸಿಕ್ಕಾಪಟ್ಟೆ ಸೇಫ್ ಅನ್ನೋ ಮಾತು ಇದೆ. ಇದೇ ಕಾರಣಕ್ಕೆ ಜನರು, ಐಫೋನ್ ಬಳಸಲು ಬಯಸುತ್ತಾರೆ. ಅದ್ರಲ್ಲೂ ಶ್ರೀಮಂತರು ತಮ್ಮ ಗೌಪ್ಯ ಮಾಹಿತಿ ಕಾಪಾಡಿಕೊಳ್ಳಲು ಈ ರೀತಿಯಾಗಿ ಐಫೋನ್ ಮೊರೆ ಹೋಗ್ತಾರೆ. ಹೀಗಿದ್ದಾಗ ಐಫೋನ್ ತಯಾರಿಸುವ ಸಂಸ್ಥೆಯಾದ 'ಆ್ಯಪಲ್' ಕಂಪನಿ ಭಾರತದಲ್ಲೇ ಬೃಹತ್ ಪ್ರಮಾಣದಲ್ಲಿ ಐಫೋನ್ ತಯಾರಿಸಲು, ಕಳೆದ ಕೆಲವು ವರ್ಷಗಳಿಂದ ಕ್ರಮ ಕೈಗೊಂಡಿದೆ. ಈ ಸಮದಯಲ್ಲೇ, ಮತ್ತೊಂದು ಗುಡ್ ನ್ಯೂಸ್ ಕೂಡ ಸಿಕ್ಕಿದೆ. ಭಾರತದಲ್ಲಿ ಲಕ್ಷ ಲಕ್ಷ ಉದ್ಯೋಗ ಸೃಷ್ಟಿ ಆಗೋದು ಗ್ಯಾರಂಟಿ ಆಗಿದೆ.

5 ಲಕ್ಷ ಜನರಿಗೆ ಉದ್ಯೋಗ?

ಒಂದು ಕಾಲ ಇತ್ತು ಐಫೋನ್ ತಗೊಬೇಕು ಅಂದರೆ ತುಂಬಾ ಕಷ್ಟ ಆಗುತ್ತಿತ್ತು. ಅದರಲ್ಲಿಯೂ ಐಫೋನ್ ಅಂದ್ರೆ ಅದು ಶ್ರೀಮಂತರ ಫೋನ್ ಎಂಬ ಮಾತು ಕೂಡ ಕೇಳಿಬರುತ್ತಿತ್ತು. ಆದ್ರೆ ಈಗ ಜಮಾನ ಬದಲಾಗಿದೆ ಕಾಲ ಬದಲಾಗಿ ಹೋಗಿದೆ. ಯಾರು ಬೇಕಾದ್ರೂ, ಐಫೋನ್ ಸುಲಭವಾಗಿ ಖರೀದಿ ಮಾಡಬಹುದು. ಅದ್ರಲ್ಲೂ ಬಜೆಟ್ ಫ್ರೆಂಡ್ಲಿಯಾಗಿ ಐಫೋನ್‌ ಖರೀದಿ ಮಾಡಬಹುದು. ಇಷ್ಟೆಲ್ಲಾ ಸೌಕರ್ಯ ನೀಡುತ್ತಿರುವ 'ಆ್ಯಪಲ್' ಭಾರತದಲ್ಲೇ ತನ್ನ ತಯಾರಿಕ ಘಟಕಗಳನ್ನ ವಿಸ್ತರಣೆ ಮಾಡಲು ಮುಂದಾಗುತ್ತಿದ್ದು, ಇದರಿಂದ ಭರ್ಜರಿ ಲಾಭವೂ ಸಿಗುತ್ತಿದೆ. ಭಾರತದ 5 ಲಕ್ಷ ಜನರಿಗೆ ಉದ್ಯೋಗ ಸಿಗುವುದು ಬಹುತೇಕ ಪಕ್ಕಾ ಆಗುತ್ತಿದೆ.

Apple Company May Appoint Nearly 5 Lakh New Employees In India For Their iPhone Unites

ಭಾರತದಲ್ಲಿಯೇ ಫ್ಯಾಕ್ಟರಿ ಸ್ಥಾಪನೆ?

ಅಂದಹಾಗೆ ಈಗ ಇರುವ ಮಾಹಿತಿ ಪ್ರಕಾರ 'ಆ್ಯಪಲ್' ಫೋನ್‌ಗಳ ಖರೀದಿ ಹೆಚ್ಚಾಗುತ್ತಿದ್ದು, ಭಾರತದಲ್ಲಿ ಈ ಕ್ರೇಜ್ ಇದೀಗ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಇದೇ ಕಾರಣಕ್ಕೆ ಐಫೋನ್ ತಯಾರಿಕೆಗೆ 'ಆ್ಯಪಲ್' ಕಂಪನಿ ಭಾರತದಲ್ಲಿಯೇ ಫ್ಯಾಕ್ಟರಿ ಸ್ಥಾಪಿಸುತ್ತಿದೆ. ಸದ್ಯಕ್ಕೆ ಐಫೋನ್‌ ತಯಾರಿಸುವ ಕಂಪನಿ ಆ್ಯಪಲ್, ತನ್ನ ಬಿಡಿಭಾಗ ತಯಾರಿಸಿ ಪೂರೈಸುವ ಸಂಸ್ಥೆಗಳ ಮೂಲಕ ಮುಂದಿನ 3 ವರ್ಷದಲ್ಲಿ ಒಟ್ಟಾರೆ 5 ಲಕ್ಷ ಉದ್ಯೋಗಿಗಳ ನೇಮಕಕ್ಕೆ ನಿರ್ಧರಿಸಿದೆ ಎಂಬ ವಿಚಾರ ಈಗ ಹಲ್‌ಚಲ್ ಎಬ್ಬಿಸಿದೆ. ಹಾಗೇ ಉದ್ಯೋಗ ಆಕಾಂಕ್ಷಿಗಳಿಗು ಕೂಡ, ಇದರಿಂದ ಭರ್ಜರಿ ನ್ಯೂಸ್ ಸಿಕ್ಕಂತಾಗಿದೆ.

3.32 ಲಕ್ಷ ಕೋಟಿ ರೂಪಾಯಿ ಬಂಡವಾಳ?

ಮತ್ತೊಂದು ಕಡೆ ಭಾರತದಲ್ಲಿ ಟಾಟಾ ಎಲೆಕ್ಟ್ರಾನಿಕ್ಸ್‌ ಕಂಪನಿ 'ಐಫೋನ್‌' ತಯಾರಿಕೆಯನ್ನ ಮಾಡುತ್ತಿದೆ. ಇದೇ ಕಾರಣಕ್ಕೆ ಅಂತಾ ಇದೀಗ ಟಾಟಾ ಎಲೆಕ್ಟ್ರಾನಿಕ್ಸ್‌ ಕಂಪನಿ ಭಾರತದಲ್ಲೇ 2 ಘಟಕ ಸ್ಥಾಪನೆ ಮಾಡಿದೆ. ಇಲ್ಲಿ ಆ್ಯಪಲ್ ಕಂಪನಿಯ ಉತ್ಪನ್ನ ಸಿದ್ಧವಾಗುತ್ತಿವೆ. ಹೀಗೆ, ಭಾರತದಲ್ಲೇ ಆ್ಯಪಲ್ ಕಂಪನಿಯ ಉತ್ಪನ್ನ ತಯಾರಿಸುತ್ತಿರುವ ಹಿನ್ನೆಲೆ ಲಾಭವೂ ಸಖತ್ ಆಗಿದೆ. ಹೀಗಾಗಿ ಭಾರತದಲ್ಲೇ ಮತ್ತಷ್ಟು ತಯಾರಿಕಾ ಘಟಕಗಳನ್ನು ವಿಸ್ತರಣೆ ಮಾಡೋಕೆ, ಆ್ಯಪಲ್ ಕಂಪನಿ ನಿರ್ಧಾರ ಮಾಡಿದೆ ಎನ್ನಲಾಗಿದೆ. ಸದ್ಯಕ್ಕೆ 1.5 ಲಕ್ಷ ಉದ್ಯೋಗಿಗಳು ಕೆಲಸ ಮಾಡುತ್ತಿದ್ದು, ಹೀಗೆ ಮುಂದಿನ 3-4 ವರ್ಷಗಳಲ್ಲಿ 'ಆ್ಯಪಲ್' ಸಂಸ್ಥೆ ಭಾರತದಲ್ಲಿ 5 ಪಟ್ಟು ಉತ್ಪಾದನೆ ಸಾಮರ್ಥ್ಯ ಹೆಚ್ಚಿಸಲು ನಿರ್ಧಾರ ಮಾಡಿದೆ. ಇದೇ ಕಾರಣಕ್ಕೆ, ₹3.32 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಲು ನಿರ್ಧಾರ ಕೂಡ ಮಾಡಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+