Rain News: ಕಲಬುರಗಿಯಲ್ಲೂ ದರ್ಶನ ಕೊಟ್ಟ ಮಳೆ
ಸುಡುವ ಬಿಸಿಲಿನ ನಡುವೆಯೂ ಕರ್ನಾಟಕದ ಹಲವು ಕಡೆಗಳಲ್ಲಿ ಲಘು ಮಳೆಯಾಗುತ್ತಿದೆ. ಕೊಡಗು, ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳ ಹಲವು ಕಡೆ ಮಳೆಯಾದ ಬಳಿಕ ಶನಿವಾರ ಸಂಜೆ ಕಲಬುರಗಿಯಲ್ಲಿ ಲಘು ಮಳೆಯಾಗಿದೆ.
ಶನಿವಾರ ನಗರದಲ್ಲಿ 37 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಇತ್ತು. ಸಂಜೆ ಕಲಬುರಗಿ ನಗರದ ಹಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣ ಇತ್ತು. ಕೆಲವು ಕಡೆ 10 ನಿಮಿಷಗಳ ಸಾಧಾರಣ ಮಳೆಯಾಗಿದೆ.

ಸುಡುವ ಬಿಸಿಲಿನ ನಡುವೆ ಹೀಗೆ 10- 15 ನಿಮಿಷ ಮಳೆಯಾದರೆ ಸೆಖೆ ಮತ್ತಷ್ಟು ಹೆಚ್ಚುತ್ತದೆ. ಹೀಗೆ ರಾಜ್ಯದ ಹಲವು ಕಡೆಗಳಲ್ಲಿ ಸಾಧಾರಣ ಮಳೆಯಾಗುತ್ತಿರುವುದು ಉತ್ತಮ ಮುಂಗಾರು ಆಗಮನ ಮುನ್ಸೂಚನೆ ಎನ್ನಲಾಗುತ್ತಿದೆ.
4 ದಿನ 4 ಜಿಲ್ಲೆಗಳಲ್ಲಿ ಮಳೆರಾಯನ ದರ್ಶನ
ಕಳೆದ ವಾರ ನಾಲ್ಕು ದಿನಗಳಲ್ಲಿ ನಾಲ್ಕು ಜಿಲ್ಲೆಗಳ ವಿವಿಧ ಕಡೆಗಳಲ್ಲಿ ಮಳೆ ದರ್ಶನ ನೀಡಿದೆ. ಬುಧವಾರ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಿಗ್ಗಾಲು, ಸೋಮವಾರಪೇಟೆ ಸೇರಿದಂತೆ ಹಲವು ಕಡೆಗಳಲ್ಲಿ ಮಳೆಯಾಗಿತ್ತು. ಬಳಿಕ ಗುರುವಾರ ಚಿಕ್ಕಮಗಳೂರು ತಾಲೂಕಿನ ಕೊಳಗಾವೆ ಗ್ರಾಮದಲ್ಲಿ ಉತ್ತಮ ಮಳೆಯಾಗಿತ್ತು.
ಮಳೆ ಬಂತೋ ಮಳೆ ರಾಯ
— shrinidhi kulkarni (@squirrel__1234) March 16, 2024
ಗುಡಿ ಕಟ್ಟೋ ಶಿವರಾಯ#Kalaburgirains pic.twitter.com/6mfdMRBmmA
ಶುಕ್ರವಾರ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಲ್ಲರೆಯಲ್ಲಿ 27 ಮಿಮೀ ಮಳೆಯಾಗಿತ್ತು. ಹೆಗ್ಗಡಹಳ್ಳಿ 9.5 ಮಿಮೀ, ಹಾಡ್ಯ 3.5 ಮಿಮೀ, ಕಲ್ಲಂಬಾಳು 3.5 ಮಿಮೀ ಮಳೆ ಸುರಿದಿತ್ತು. ಶನಿವಾರ ಕಲಬುರಗಿಯಲ್ಲಿ ಲಘು ಮಳೆಯಾಗಿದೆ.
ಮಾರ್ಚ್ 20ರ ನಂತರ ಮಳೆ ಸಾಧ್ಯತೆ
ರಾಜ್ಯದ ಹಲವು ಕಡೆಗಳಲ್ಲಿ ಮಾರ್ಚ್ 20ರ ಬಳಿಕ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ರಾಜ್ಯದ ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ, ಪಶ್ಚಿಮ ಘಟ್ಟಗಳಲ್ಲಿ ಚದುರಿದಂತೆ ಸಾಧಾರಣೆ ಮಳೆ ಸುರಿಯುವ ಸಾಧ್ಯತೆ ಇದೆ.
ಮಾರ್ಚ್ ಅಂತ್ಯದ ವೇಳೆಗೆ ಮತ್ತು ಉಗಾದಿ ಹಬ್ಬದ ಸಂದರ್ಭದಲ್ಲಿ ಉತ್ತಮ ಮಳೆ ಬೀಳುವ ಅಂದಾಜಿದೆ. ಸದ್ಯದ ಹವಾಮಾನಾ ಮುನ್ಸೂಚನೆ ಪ್ರಕಾರ ಏಪ್ರಿಲ್ ಎರಡನೇ ವಾರ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಹೆಚ್ಚಾಗಿದೆ.












Click it and Unblock the Notifications