ಯೋಗಿ ನಾಡಲ್ಲಿ 'ಸೈಕಲ್' ಚಕ್ರದಡಿ ನಲುಗಿದ ಕಮಲ

Subscribe to Oneindia Kannada

ಲಕ್ನೋ, ಮಾರ್ಚ್ 14: ಬಿಜೆಪಿಯ ಫೈರ್ ಬ್ರಾಂಡ್ ನಾಯಕ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ತವರು ಕ್ಷೇತ್ರದಲ್ಲೇ ಮುಗ್ಗರಿಸಿದ್ದಾರೆ. ಯೋಗಿ ತವರು ಗೋರಖ್ ಪುರ್ ಮತ್ತು ಇಲ್ಲಿನ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಪ್ರತಿನಿಧಿಸುತ್ತಿದ್ದ ಫುಲ್ಪುರ್ ಲೋಕಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ.

ಎಸ್ಪಿ, ಬಿಎಸ್ಪಿ ಮೈತ್ರಿಗೆ ಕಮಲ ಅಪ್ಪಚ್ಚಿ

ಎರಡೂ ಕ್ಷೇತ್ರಗಳಲ್ಲಿ ಅಚ್ಚರಿಯ ರೀತಿಯಲ್ಲಿ ಸಮಾಜವಾದಿ ಪಕ್ಷ ಗೆಲುವು ಕಂಡಿದೆ. ಫುಲ್ಪುರ್ ನಲ್ಲಿ ಸಮಾಜವಾದಿ ಪಕ್ಷದ ನಾಗೇಂದ್ರ ಪ್ರತಾಪ್ ಸಿಂಗ್ ಪಟೇಲ್ 59,613 ಮತಗಳಿಂದ ಜಯ ಸಾಧಿಸಿದ್ದಾರೆ. ಅವರಿಲ್ಲಿ 3,37,683 ಮತಗಳನ್ನು ಪಡೆದರೆ ಬಿಜೆಪಿಯ ಕೌಶಲೇಂದ್ರ ಸಿಂಗ್ ಪಟೇಲ್ 2,80,535 ಮತಗಳನ್ನು ಪಡೆದು ಸೋಲೊಪ್ಪಿಕೊಂಡಿದ್ದಾರೆ. 2014ರಲ್ಲಿ ಇಲ್ಲಿ 5,03,564 ಮತಗಳನ್ನು ಪಡೆದು ಕೇಶವ್ ಪ್ರಸಾದ್ ಮೌರ್ಯ ಜಯ ಸಾಧಿಸಿದ್ದರು.

BJP lost both Gorakhpur and Phulpur bypoll to SP

ಇನ್ನು ಯೋಗಿ ಆದಿತ್ಯನಾಥ್ ತವರು ಗೋರಖ್ ಪುರದಲ್ಲೂ ಬಿಜೆಪಿ ಸೋಲೊಪ್ಪಿಕೊಂಡಿದೆ. ಇಲ್ಲಿ ಎಸ್ಪಿಯ ಪ್ರವೀಣ್ ಕುಮಾರ್ ನಿಷಾದ್ ಬಿಜೆಪಿ ಅಭ್ಯರ್ಥಿ ಉಪೇಂದ್ರ ದತ್ ಶುಕ್ಲಾರನ್ನು 21,881 ಮತಗಳಿಂದ ಸೋಲಿಸಿದ್ದಾರೆ. ಇಲ್ಲಿ 2014ರಲ್ಲಿ 5,39,127 ಮತಗಳನ್ನು ಪಡೆದು ಯೋಗಿ ಗೆಲುವು ಸಾಧಿಸಿದ್ದರು ಎಂಬುದು ಗಮನಾರ್ಹ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಈ ಚುನಾವಣೆಯಲ್ಲಿ ಎಸ್ಪಿಗೆ ಬಿಎಸ್ಪಿ ಬೆಂಬಲ ನೀಡಿತ್ತು. ಹೀಗಾಗಿ ಆನೆ ಬಲದೊಂದಿಗೆ ಸೈಕಲ್ ಕಮಲ ಪಕ್ಷಕ್ಕೆ ಸೋಲುಣಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bharatiya Janata Party lost both the Gorakhpur and Phulpur lok sabha bypoll to Samajwadi Party. In both the lok sabha constituencies SP won the election with the help of BSP.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ