ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ ಉಳುವಿಗಾಗಿ ಸೆಣಸಾಟ: ಕಾಂಗ್ರೆಸ್ ಅವಕಾಶಕ್ಕಾಗಿ ಹೋರಾಟ

ಕರ್ನಾಟಕದಲ್ಲಿ ಚುನಾವಣಾ ಬಿಸಿ ಆರಂಭವಾಗಲಿದೆ. ಇನ್ನು ಮೂರು ದಿನದಲ್ಲಿ ರಾಜ್ಯ ಮೊದಲ ಹಂತದ ಮತದಾನಕ್ಕೆ ಸಾಕ್ಷಿ ಆಗಲಿದೆ. ಕರ್ನಾಟಕದ ಹಳೆ ಮೈಸೂರು ಪಾಂತ್ರದಲ್ಲಿ ಎಲ್ಲ ಪಕ್ಷಗಳು ಕಣ್ಣು ನೆಟ್ಟಿವೆ. ಈ ಪ್ರಾಂತ್ಯವನ್ನು ತಮ್ಮ ವಶಕ್ಕೆ ಪಡೆಯಲು ಜೆಡಿಎಸ್‌ ಹಾಗೂ ಕಾಂಗ್ರೆಸ್ ಪಕ್ಷಗಳು ಕಾದಾಟ ನಡೆಸಲಿವೆ.

ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಕ್ಕಲಿಗರು ಇದ್ದಾರೆ. ಇವರು ಸಾಮನ್ಯವಾಗಿ ಜೆಡಿಎಸ್‌ ಪಕ್ಷಕ್ಕೆ ಬೆಂಬಲವನ್ನು ಸೂಚಿಸುತ್ತಾರೆ. ದೇವೇಗೌಡ ಕುಟುಂಬ ಈ ಕ್ಷೇತ್ರದಲ್ಲಿ ಬಿಗಿ ಹಿಡಿತವನ್ನು ಹೊಂದಿದೆ. ಹಾಸನ ಹಾಗೂ ಮಂಡ್ಯ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಬಿಗ್ ಪ್ಲ್ಯಾನ್ ಮಾಡಿದೆ. 2004ರಲ್ಲಿ ಹಾಸನ ಕ್ಷೇತ್ರದಲ್ಲಿ ಜೆಡಿಎಸ್‌ ತನ್ನ ಪ್ರಾಭಲ್ಯ ಹೊಂದಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಮಂಡ್ಯದಲ್ಲಿ ಮುಖಭಂಗ ಅನುಭವಿಸಿತ್ತು. ಈ ಕ್ಷೇತ್ರದಲ್ಲಿನ ಪಕ್ಷೇತರ ಅಭ್ಯರ್ಥಿಗೆ ಬಿಜೆಪಿ ಬೆಂಬಲ ಸೂಚಿಸಿತ್ತು.

JDS Faces Uphill Battle in Old Mysore Opportunity for Congress Amidst Struggle

ಯಾರ ಕೈ ಮೇಲು?

ಮೈಸೂರು ಹಾಗೂ ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಜಿದ್ದಾಜಿದ್ದಿನ ಫೈಟ್‌ ಏರ್ಪಟ್ಟಿತ್ತು. ಆದರೆ ಕಳೆದ ಚುನಾವಣೆಯಲ್ಲಿ ಚಾಮರಾಜನಗರದಲ್ಲಿ ಬಿಜೆಪಿ ಮೊದಲ ಬಾರಿಗೆ ಜಯ ಸಾಧಿಸಿ, ಇತಿಹಾಸ ನಿರ್ಮಿಸಿತ್ತು. ಇನ್ನು ಮೈಸೂರು-ಕೊಡಗು ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಎರಡು ಬಾರಿ ಗೆದ್ದು ಅಬ್ಬರಿಸಿದ್ದರು.

ಬಿಜೆಪಿ ಹಾಗೂ ಜೆಡಿಎಸ್‌ ಜೊತೆಗಿನ ಮೈತ್ರಿ ಹಾಸನ, ಚಾಮರಾಜನಗರ, ಮಂಡ್ಯ, ಕೋಲಾರ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗುತ್ತದಾ ಎಂಬುದೇ ದೊಡ್ಡ ಪ್ರಶ್ನೆ ಆಗಿದೆ. ಕಾಂಗ್ರೆಸ್ ಸಹ ತಾನು ಈ ಕ್ಷೇತ್ರದಲ್ಲಿ ಬೇರುಗಳನ್ನು ತಳ ಮಟ್ಟಕ್ಕೆ ಬೀರಲು ಪ್ರಯತ್ನ ನಡೆಸುತ್ತಿವೆ.

JDS Faces Uphill Battle in Old Mysore Opportunity for Congress Amidst Struggle

ಜೆಡಿಎಸ್‌ ಪ್ರಭಾವ ಹೇಗಿದೆ

ಜೆಡಿಎಸ್‌ ಪಕ್ಷಕ್ಕೆ ಈ ಚುನಾವಣೆ ಅಳಿವು ಉಳಿವಿನ ಚುನಾವಣೆ. ದೇವೇಗೌಡ ಕುಟುಂಬದವರೇ ಹಾಸನ ಹಾಗೂ ಮಂಡ್ಯ ಕ್ಷೇತ್ರದಲ್ಲಿ ಕಣಕ್ಕೆ ಇಳಿದಿದ್ದಾರೆ. ಮಾಜಿ ಮುಖ್ಯ ಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮಂಡ್ಯ ಚುನಾವಣಾ ಕಣದಲ್ಲಿದ್ದಾರೆ. ಕಳೆದ ಬಾರಿ ಈ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು, ಸುಮಲತಾ ಅಂಬರೀಷ್ ವಿರುದ್ಧ ನಿಂತಿದ್ದರು. ಪಕ್ಷೇತರ ಅಭ್ಯರ್ಥಿಯಾದ ಸುಮಲತ ಈ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು. ಇನ್ನು ತವರು ಕ್ಷೇತ್ರದಲ್ಲಿ ದೇವೇಗೌಡ ತಮ್ಮ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟು ಕೊಟ್ಟರು. ಪ್ರಜ್ವಲ್‌ ರೇವಣ್ಣ ಈ ಕ್ಷೇತ್ರವನ್ನು 2019ರಲ್ಲಿ ಸುಲಭವಾಗಿ ಗೆದ್ದು ಕೊಂಡಿದ್ದರು.

ಮಂಡ್ಯದಲ್ಲಿ ಜೆಡಿಎಸ್ ತನ್ನ ಕೋಟೆಯನ್ನು ಮತ್ತಷ್ಟು ಭದ್ರ ಪಡಿಸಿಕೊಳ್ಳುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ವತಃ ಈ ಕ್ಷೇತ್ರದಲ್ಲಿ ಕಣಕ್ಕೆ ಇಳಿದಿದ್ದಾರೆ. ಈ ಚುನಾವಣೆಯಲ್ಲಿ ಜೆಡಿಎಸ್‌ ಕೈ ಮೇಲಾದಂತೆ ಕಾಣಲು ಮೂರು ಕಾರಣಗಳಿವೆ. ಮೊದಲನೆಯದ್ದು ಸ್ವತಃ ಕುಮಾರಸ್ವಾಮಿ ಈ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ವಕ್ಕಲಿಗ ನಾಯಕ ಎಂದೇ ಗುರುತಿಸಿಕೊಂಡಿರುವ ಕುಮಾರಸ್ವಾಮಿ ಈ ಕ್ಷೇತ್ರದ ಮತದಾರರ ಮನ ಒಲಿಸಬಹುದು. ಇನ್ನು ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಸಹ ಇವರಿಗೆ ವರವಾಗಬಹುದು. ಕಳೆದ ಬಾರಿ ನಿಖಿಲ್ ಕುಮಾರಸ್ವಾಮಿ ಈ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ವಿರುದ್ಧ ಸೋಲಲು, ಸುಮಲತಾಗೆ ಬಿಜೆಪಿ ನೀಡಿದ್ದ ಬೆಂಬಲವೂ ಕಾರಣ. ಮೂರನೇಯದಾಗಿ ಕುಮಾರಸ್ವಾಮಿ ಪ್ರಚಾರ ಭಾಷಣದಲ್ಲಿ ಕಾವೇರಿ ವಿಚಾರವಾಗಿ ಮಾತನಾಡುತ್ತಿರುವುದು ಅವರತ್ತ ಜನರ ಗಮನ ಹರಿಸುವಂತೆ ಮಾಡಿದೆ.

ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಬಿಜೆಪಿ 2019ರಲ್ಲಿ ಗೆಲುವು ಸಾಧಿಸುತ್ತಾ ಬಂದಿದೆ. ಹಾಲಿ ಸಂಸದರಿಗೆ ಟಿಕೆಟ್ ನೀಡದ ಬಿಜೆಪಿಗೆ ಮಣೆ ಹಾಕಿದೆ. ಮೈಸೂರು ಕ್ಷೇತ್ರದಲ್ಲಿ ಬಿಜೆಪಿ ಮೈಸೂರು ರಾಜಮನೆತನದ ಯದುವೀರ ವಡೇಯರ್ ಅವರನ್ನು ಕಣಕ್ಕೆ ಇಳಿಸಿದೆ. ಚಾಮರಾಜನಗರದಿಂದ ಎಸ್‌ ಬಾಲಾರಜಾರನ್ನು ಕಮಲ ಪಡೆ ಕಣಕ್ಕೆ ಇಳಿಸಿದೆ. ಕಾಂಗ್ರೆಸ್ ಸಹ ಈ ಕ್ಷೇತ್ರಗಳನ್ನು ಕಬ್ಜಾ ಮಾಡಲು ಮಾಸ್ಟರ್‌ ಪ್ಲ್ಯಾನ್ ಮಾಡಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+