Indian Army Recruitment 2024: ಪರೀಕ್ಷೆಯಿಲ್ಲದೆ ಸೇನೆಯಲ್ಲಿ ಅಧಿಕಾರಿಯಾಗಿ 2,50,000 ರೂ.ವರೆಗೆ ಸಂಬಳ ಪಡೆಯಿರಿ!
ನವದೆಹಲಿ, ಏಪ್ರಿಲ್. 23: ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಬೇಕು ಎಂಬ ಕನಸು ಕಾಣುವ ಲಕ್ಷಾಂತರ ಮಂದಿಯಿದ್ದಾರೆ. ಸರ್ಕಾರಿ ಕೆಲಸ ಮಾಡುವುದು ಕೋಟ್ಯಾಂತರ ಮಂದಿಯ ಕನಸಾಗಿದ್ದರೇ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕು ಎಂಬುದು ಮತ್ತಷ್ಟು ಜನರ ಅಭಿಲಾಷೆ. ಅಂತಹವರಿಗೆ ಈಗ ಒಳ್ಳೆ ಸುವರ್ಣಾವಕಾಶವಿದೆ.
ಭಾರತೀಯ ಸೇನಾ ನೇಮಕಾತಿ 2024 ಅಧಿಸೂಚನೆ ಹೊರಡಿಸಿದ್ದು, ನೀವು ಎಂಜಿನಿಯರಿಂಗ್ ಪದವೀಧರರಾಗಿದ್ದರೆ ಮತ್ತು ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಬೇಕೆಂದು ಕನಸು ಕಾಣುತ್ತಿದ್ದರೆ, ಇದು ನಿಮಗೆ ಉತ್ತಮ ಅವಕಾಶವಾಗಿದೆ. ಇದಕ್ಕಾಗಿ ಭಾರತೀಯ ಸೇನೆಯು 140ನೇ ತಾಂತ್ರಿಕ ಪದವಿ ಕೋರ್ಸ್ (TGC-140) ಗಾಗಿ ಖಾಲಿ ಹುದ್ದೆಯ ಅಧಿಸೂಚನೆ ಬಿಡುಗಡೆ ಮಾಡಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಭಾರತೀಯ ಸೇನೆಯ ಈ ನೇಮಕಾತಿ ಮೂಲಕ ಒಟ್ಟು 30 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಈ ಪೋಸ್ಟ್‌ಗಳಲ್ಲಿ ಉದ್ಯೋಗ ಪಡೆಯಲು ಬಯಸುವ ಯಾವುದೇ ಅಭ್ಯರ್ಥಿಯು ಮೇ 9 ಅಥವಾ ಅದಕ್ಕೂ ಮೊದಲು ಅರ್ಜಿ ಸಲ್ಲಿಸಬಹುದು. ಇದರ ಹೊರತಾಗಿ, ಈ ಪೋಸ್ಟ್‌ಗಳಲ್ಲಿ ಕೆಲಸ ಮಾಡಲು ಸಿದ್ಧರಿರುವ ಅಭ್ಯರ್ಥಿಗಳು ಈ ವಿಷಯಗಳನ್ನು ಎಚ್ಚರಿಕೆಯಿಂದ ಓದಬೇಕು.
ಭಾರತೀಯ ಸೇನೆಯಲ್ಲಿ ಯಾವ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ?
* ಸಿವಿಲ್ - 07 ಹುದ್ದೆಗಳು
* ಕಂಪ್ಯೂಟರ್ ಸೈನ್ಸ್ - 07 ಹುದ್ದೆಗಳು
* ಎಲೆಕ್ಟ್ರಿಕಲ್ - 03 ಹುದ್ದೆಗಳು
* ಎಲೆಕ್ಟ್ರಾನಿಕ್ಸ್ - 04 ಹುದ್ದೆಗಳು
* ಮೆಕ್ಯಾನಿಕಲ್ - 07 ಹುದ್ದೆಗಳು
* ವಿವಿಧ ಇಂಜಿನಿಯರಿಂಗ್ ಸ್ಟ್ರೀಮ್ - 02 ಹುದ್ದೆಗಳು

ಭಾರತೀಯ ಸೇನೆಯಲ್ಲಿ ಉದ್ಯೋಗ ಪಡೆಯಲು ಇರುವ ಅರ್ಹತೆ
* ಭಾರತೀಯ ಸೇನಾ ನೇಮಕಾತಿ 2024 ರ ಅಡಿಯಲ್ಲಿ ಅರ್ಜಿ ಸಲ್ಲಿಸಲು ಯೋಚಿಸುತ್ತಿರುವ ಅಭ್ಯರ್ಥಿಗಳ ಕನಿಷ್ಠ ವಯಸ್ಸಿನ ಮಿತಿ 20 ವರ್ಷಗಳು ಮತ್ತು ಗರಿಷ್ಠ ವಯಸ್ಸಿನ ಮಿತಿ 27 ವರ್ಷಗಳು ಇರಬೇಕು.
* ಅಧಿಕೃತ ಅಧಿಸೂಚನೆಯ ಪ್ರಕಾರ, ಈ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ಸಂಬಂಧಿತ ವಿಷಯದಲ್ಲಿ ಎಂಜಿನಿಯರಿಂಗ್ ಪದವಿಯನ್ನು ಹೊಂದಿರಬೇಕು.
* ಭಾರತೀಯ ಸೇನೆಯಲ್ಲಿ ಆಯ್ಕೆಯಾದ ಮೇಲೆ ಸಂಬಳ ನೀಡಲಾಗುವುದು
* ಭಾರತೀಯ ಸೇನೆಯಲ್ಲಿ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೋ ಅವರಿಗೆ ಉದ್ಯೋಗದ ಆಧಾರದಲ್ಲಿ ಸಂಬಳ ನೀಡಲಾಗುತ್ತದೆ. ಈ ಸಂಬಳ 56,100 ರಿಂದ 2,50,000 ರೂಪಾಯಿವರೆಗೂ ಇರಲಿದೆ.
* SSB ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದಕ್ಕಾಗಿ, ಆಯ್ಕೆ ಕೇಂದ್ರಗಳಲ್ಲಿ ಒಂದರಲ್ಲಿ ಕಟ್ಆಫ್ ಶೇಕಡಾವಾರು ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಿದ ಅರ್ಹ ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಯನ್ನು ಸೇನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸಲು ಬಯಸುವವರು www.joinindianarmy.nic.in/Authentication.aspx ಗೆ ಭೇಟಿ ನೀಡಿ.












Click it and Unblock the Notifications