ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತಿಗೆ ವಿಜಯ್ ರೂಪಾನಿ ಸಿಎಂ, ನಿತಿನ್ ಪಟೇಲ್ ಡಿಸಿಎಂ

By Mahesh
|
Google Oneindia Kannada News

ಅಹಮದಾಬಾದ್, ಆಗಸ್ಟ್ 5: ಆನಂದಿಬೆನ್ ರಾಜೀನಾಮೆಯಿಂದ ತೆರವಾಗಿರುವ ಗುಜರಾತ್ ಸಿಎಂ ಸ್ಥಾನಕ್ಕೆ ವಿಜಯ್ ರೂಪಾನಿ ಅವರನ್ನು ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದೆ. ಗುಜರಾತಿನ ಮುಂದಿನ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಆಯ್ಕೆಯಾಗಿದ್ದು, ನಿತಿನ್ ಭಾಯಿ ಪಟೇಲ್ ಅವರು ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಶುಕ್ರವಾರ ಬಿಜೆಪಿ ಘೋಷಿಸಿದೆ.

ಗುಜರಾತ್ -ಹಿಮಾಚಲ: ಯಾರು ಗೆದ್ದರು? ಯಾರು ಬಿದ್ದರು?ಗುಜರಾತ್ -ಹಿಮಾಚಲ: ಯಾರು ಗೆದ್ದರು? ಯಾರು ಬಿದ್ದರು?

ಸಿಎಂ ಸ್ಥಾನಕ್ಕೆ ಆರೋಗ್ಯ ಸಚಿವ ನಿತಿನ್ ಪಟೇಲ್ ಹೆಸರು ಬಹುತೇಕ ಅಂತಿಮವಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ವಿಜಯ್ ರೂಪಾನಿ ಅವರ ಹೆಸರನ್ನು ಅಧಿಕೃತ ಘೊಷಣೆ ಮಾಡಲಾಗಿದೆ. [ಗುಜರಾತ್ ಮುಂದಿನ ಸಿಎಂ ಅಮಿತ್ ಶಾ ಅಲ್ವಂತೆ!, ಮತ್ತ್ಯಾರು?]

BJP announces Vijay Rupani as next Gujarat Chief Minister Nitin Patel as his deputy

ವಿಜಯ್ ರೂಪಾನಿ ಹಾಗೂ ನಿತಿನ್ ಪಟೇಲ್ ಸಿಎಂ ಹುದ್ದೆಯ ಅಂತಿಮ ಸ್ಪರ್ಧೆಯಲ್ಲಿದ್ದರು. ಆದರೆ, ವಿಜಯ್ ರೂಪಾನಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳಲು ಹಿರಿಯ ನಾಯಕರು ಸೂಚನೆ ನೀಡಿದ್ದಾರೆ.[ಆರೆಸ್ಸೆಸ್ ನಡೆಸಿದ ಆಂತರಿಕ ಸಮೀಕ್ಷೆಯಿಂದ ಬಿಜೆಪಿಗೆ ನಡುಕ]

ಶುಕ್ರವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವ ನಿತಿನ್ ಗಡ್ಕರಿ ಹಾಗೂ ಸರೋಜ್ ಪಾಂಡೆ ವೀಕ್ಷಕರಾಗಿ ಪಾಲ್ಗೊಂಡಿದ್ದರು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ಸೇರಿದ್ದ ವಿಜಯ್ ರೂಪಾನಿ ಅವರು ವಿದ್ಯಾರ್ಥಿ ಜೀವನದಲ್ಲಿ ಸಂಘಟನಾ ಚತುರ ಎನಿಸಿದ್ದರು. ಗುಜರಾತಿನ ಈ ಹಿಂದಿನ ಮುಖ್ಯಮಂತ್ರಿಗಳಾದ ಕೇಶುಭಾಯಿ ಪಟೇಲ್, ನರೇಂದ್ರ ಮೋದಿ, ಅನಂದಿಬೆನ್ ಪಟೇಲ್ ಅವರ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಯಾವುದೇ ಹಗರಣಗಳಲ್ಲಿ ರೂಪಾನಿ ಹೆಸರು ಕೇಳಿ ಬಂದಿಲ್ಲ.

ಜೈನ ಸಮುದಾಯದ ವಿಜಯ್ ರೂಪಾನಿ ಅವರು ಗುಜರಾತ್ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ, ಸಂಸದರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಆಗಸ್ಟ್ 3ರಂದು 61ನೇ ಹುಟ್ಟುಹಬ್ಬ ಆಚರಿಸಿಕೊಂಡ ವಿಜಯ್ ಅವರಿಗೆ ಹುಟ್ಟುಹಬ್ಬದ ಗಿಫ್ಟ್ ಸಿಕ್ಕಿದೆ.

English summary
BJP today (Aug 05) announced Vijay Rupani as next Gujarat Chief Minister Nitin Patel as his deputy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X