Hardik Pandya: ಹಾರ್ದಿಕ್ ಪಾಂಡ್ಯ ವಿರುದ್ಧ ಅಬ್ಬರಿಸಿದ ಗುಜರಾತ್ ಟೈಟಾನ್ಸ್ ಅಭಿಮಾನಿಗಳು
ಇಂಡಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು ಹಾರ್ದಿಕ್ ಪಾಂಡ್ಯ. ಎರಡು ವರ್ಷ ಗುಜರಾತ್ ಜೈಂಟ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಅವರು, ಬಳಿಕ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ್ದರು. ಇದು ಗುಜರಾತ್ ಟೈಟಾನ್ಸ್ ತಂಡದ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತು.
ಗುಜರಾತ್ ಟೈಟಾನ್ಸ್ ಮಾತ್ರವಲ್ಲ ರೋಹಿತ್ ಶರ್ಮಾ ಅಭಿಮಾನಿಗಳು ಕೂಡ ಪಾಂಡ್ಯ ವಿರುದ್ಧ ಕೋಪಗೊಂಡಿದ್ದರು. ಮುಂಬೈ ಇಂಡಿಯನ್ಸ್ ತಂಡಕ್ಕೆ ಪಾಂಡ್ಯ ಬಂದ ಬಳಿಕ ರೋಹಿತ್ ಶರ್ಮಾ ನಾಯಕತ್ವ ಕಳೆದುಕೊಂಡಿದ್ದು, ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತು.

ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ವೇಳೆ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಬಂದಾಗ ಅಭಿಮಾನಿಗಳು ಜೋರಾಗಿ ಕೂಗುವ ಮೂಲಕ ತಮ್ಮ ಸಿಟ್ಟು ಹೊರಹಾಕಿದರು.
ಎರಡು ವರ್ಷ ಯಶಸ್ವಿ ನಾಯಕ
ಇದು ಅನಿರೀಕ್ಷಿತ ಏನೂ ಆಗಿರಲಿಲ್ಲ. 2 ವರ್ಷಗಳ ಹಿಂದೆ ಹಾರ್ದಿಕ್ ಪಾಂಡ್ಯ ತಂಡವನ್ನು ಬದಲಾಯಿಸಿದ್ದರು. ಅವರು ಹೊಸದಾಗಿ ಸೇರ್ಪಡೆಗೊಂಡ ಗುಜರಾತ್ ಟೈಟಾನ್ಸ್ ತಂಡವನ್ನು ಸೇರಲು ಮುಂಬೈ ಇಂಡಿಯನ್ಸ್ ತೊರೆದರು. ಅದೇ ವರ್ಷ ತಮ್ಮ ತಂಡವನ್ನು ಚಾಂಪಿಯನ್ ಮಾಡಿದ್ದರು. ಎರಡನೇ ವರ್ಷ ಕೂಡ ಗುಜರಾತ್ ಟೈಟಾನ್ಸ್ ಫೈನಲ್ ತಲುಪಿತ್ತು, ಆದರೆ ಸಿಎಸ್‌ಕೆ ತಂಡ ಚಾಂಪಿಯನ್ ಆಗಿತ್ತು.
Hardik Pandya got booed by Ahemdabad crowd 🔥🤣 pic.twitter.com/arJTRooT47
— Abhishek (@be_mewadi) March 24, 2024
ಐಪಿಎಲ್ 2024ರ ಹರಾಜಿನ ದಿನದಂದು, ಹಾರ್ದಿಕ್ ಪಾಂಡ್ಯ ತಂಡವನ್ನು ಬದಲಾಯಿಸಿದರು. ಅವರು ಮುಂಬೈ ಇಂಡಿಯನ್ಸ್‌ಗೆ ಮತ್ತೆ ಸೇರಿಕೊಂಡರು, ಈ ಬಾರಿ ತಂಡದ ನಾಯಕರಾಗಿ ಬಡ್ತಿ ಪಡೆದಿದ್ದರು.
ಭಾರತದ ಮಾಜಿ ಕ್ರಿಕೆಟಿಗ, ಆಕಾಶ್ ಚೋಪ್ರಾ ಅವರು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಂದ ಪಾಂಡ್ಯ ಅವರನ್ನು ಬೂಯಿಂಗ್ ಮಾಡಲು ಬಯಸಿದ್ದರು ಎಂದು ಹೇಳಿಕೊಂಡರು. ಅದೇ ರೀತಿ ಅವರ ಮೊದಲ ಪಂದ್ಯದಲ್ಲೇ ಸಂಭವಿಸಿದೆ.












Click it and Unblock the Notifications