ಗುಜರಾತ್ -ಹಿಮಾಚಲ: ಯಾರು ಗೆದ್ದರು? ಯಾರು ಬಿದ್ದರು?
ಬೆಂಗಳೂರು, ಡಿಸೆಂಬರ್ 18: ಭಾರತೀಯ ಜನತಾ ಪಕ್ಷವು ಗುಜರಾತ್ ಉಳಿಸಿಕೊಂಡು, ಹಿಮಾಚಲ ಪ್ರದೇಶವನ್ನು ಕಾಂಗ್ರೆಸ್ಸಿನಿಂದ ಕಸಿದುಕೊಂಡಿದೆ. ಸೋತ-ಗೆದ್ದ ಪ್ರಮುಖರ ಬಗ್ಗೆ ವರದಿ ಇಲ್ಲಿದೆ..
ಯಾವ ಕ್ಷೇತ್ರದಲ್ಲಿ ಯಾರು ಗೆದ್ದರು? ಯಾರು ಸೋತರು?. ಯಾವ ಪ್ರಮುಖ ನಾಯಕರು ಸೋಲಿನ ರುಚಿ ಸವಿದರು, ಯಾವ ನಾಯಕರ ಗೆಲುವಿನ ನಗೆ ಬೀರಿದರು ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ
ಹಿಮಾಚಲದಲ್ಲಿ ಸರ್ಕಾರದ ಭಾಗವಾಗಿದ್ದ ಹಲವು ಸಚಿವರು ಚುನಾವಣೆಯಲ್ಲಿ ಸೋತು ಮನೆ ಸೇರಿದರು. ಬಿಜೆಪಿ ಐತಿಹಾಸಿಕ ಫಲಿತಾಂಶದೊಂದಿಗೆ ಅಧಿಕಾರ ಸ್ಥಾಪನೆಗೆ ಮುಂದಾಗಿದೆ. ಆದರೆ, ಮುಖ್ಯಮಂತ್ರಿ ಅಭ್ಯರ್ಥಿ ಪ್ರೇಮ್ ಕುಮಾರ್ ಧುಮಾಲ್ ಅವರು ಸೋಲಿನ ಕಹಿ ಅನುಭವಿಸಿದ್ದಾರೆ.
ಗುಜರಾತ್ ಗೆದ್ದವರು:
* ಜಿಗ್ನೇಶ್ ಮೇವಾನಿ, ಪಕ್ಷೇತರ, ಬನಸ್ಕಾಂತ ಜಿಲ್ಲೆಯ ವಡ್ಗಮ್ ಕ್ಷೇತ್ರದಿಂದ ಗೆಲುವು
* ವಿಜಯ್ ರೂಪಾನಿ, ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ, ರಾಜ್ ಕೋಟ್ ಪಶ್ಚಿಮ
* ನಿತಿನ್ ಪಟೇಲ್, ಬಿಜೆಪಿ ಡಿಸಿಎಂ, ಮೆಹ್ಸನಾದಲ್ಲಿ ಹಿನ್ನಡೆ ಅನುಭವಿಸಿ ನಂತರ ಗೆಲುವು.
ಸೋತವರು:
* ಇಂದ್ರ ನೀಲ್ ರಾಜ್ಯಗುರು, ಅತ್ಯಂತ ಶ್ರೀಮಂತ ಅಭ್ಯರ್ಥಿ, ರಾಜ್ ಕೋಟ್ ಪಶ್ಚಿಮ
ಇನ್ನಷ್ಟು ನಿರೀಕ್ಷಿಸಿ

ಜಿಗ್ನೇಶ್ ಮೇವಾನಿ
ದಲಿತ ಮುಖಂಡ ಜಿಗ್ನೇಶ್ ಮೇವಾನಿ ಪಕ್ಷೇತರರಾಗಿ ಗುಜರಾತಿನ ಬನಸ್ಕಾಂತ ಜಿಲ್ಲೆಯ ವಡ್ಗಮ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಬಿಜೆಪಿಯ ವಿಜಯ್ ಚಕ್ರವರ್ತಿ ವಿರುದ್ಧ 19. 696 ಮತಗಳ ಅಂತರದಿಂದ ಗೆಲುವು ಸಾಧಿಸರು.
ಕಾಂಗ್ರೆಸ್ ಬೆಂಬಲಿತನಾಗಿ ಕಣಕ್ಕಿಳಿದು 95497 ಮತಗಳನ್ನು ಬಾಚಿಕೊಂಡರು ಎಸ್ ಸಿ ಮೀಸಲು ಕ್ಷೇತ್ರದಲ್ಲಿ ದಲಿತರ ದನಿಯಾಗಿ ಕಾಣಿಸಿಕೊಂಡಿದ್ದಾರೆ.

ವಿಜಯ್ ರೂಪಾನಿ
ಗುಜರಾತಿನ ಹಾಲಿ ಸಿಎಂ ವಿಜಯ್ ರೂಪನಿ ಅವರು ಮೋದಿ ಅವರು ಪ್ರಪ್ರಥಮ ಬಾರಿಗೆ ಚುನಾವಣೆ ಎದುರಿಸಿದ್ದ ರಾಜ್ ಕೋಟ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. 52,155 ಮತಗಳನ್ನು ವಿಜಯ್ ಗಳಿಸಿದರು. ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ, 141 ಕೋಟಿ ಆಸ್ತಿ ಹೊಂದಿರುವ ಇಂದ್ರನೀಲ್ ರಾಜ್ಯಗುರು ಅವರು 29,000 ಮತಗಳನ್ನು ಪಡೆದು ಎರಡನೇ ಸ್ಥಾನ ಗಳಿಸಿತು.

ನಿತಿನ್ ಪಟೇಲ್
ಗುಜರಾತಿನ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ಕೊನೆಗೂ ಗೆಲುವಿನ ನಿಟ್ಟುಸಿರು ಬಿಟ್ಟಿದ್ದಾರೆ. ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದ ನಿತಿನ್ ಅವರು ಮೆಹ್ಸಾನಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಪ್ರಧಾನಿ ಮೋದಿ ಅವರು ಮೋದಿ ಅವರ ತವರೂರು ವಡ್ನಗರ್ ಕೂಡಾ ಹೊಂದಿದೆ.

ಜಯನಾರಾಯಣ್ ವ್ಯಾಸ್
ಗುಜರಾತಿನ ಕ್ಯಾಬಿನೆಟ್ ಸಚಿವರಾಗಿದ್ದ ಜಯನಾರಾಯಣ್ ವ್ಯಾಸ್ ಅವರು ಸಿಧ್ ಪುರ್ ನಲ್ಲಿ ಸೋಲು ಅನುಭವಿಸಿದ್ದಾರೆ.

ಶಕ್ತಿ ಸಿಂಗ್ ಗೋಹಿಲ್
ಕಾಂಗ್ರೆಸ್ ನ ಪ್ರಮುಖ ನಾಯಕ ಶಕ್ತಿ ಸಿಂಗ್ ಗೋಹಿಲ್ ಅವರು ಮಾಂಡ್ವಿ ಕಛ್ ಪ್ರದೇಶದಿಂದ ಸೋಲು ಕಂಡಿದ್ದಾರೆ.

ಅಲ್ಪೇಶ್ ಠಾಕೂರ್
ಹಿಂದುಳಿದ ವರ್ಗಗಳ ನಾಯಕ, ಬಿಜೆಪಿ ವಿರುದ್ಧ, ಮೋದಿ ವಿರುದ್ಧ ವಾಕ್ಸಮರ ಸಾರಿದ್ದ ಅಲ್ಪೇಶ್ ಠಾಕೂರ್ ಅವರು ಕಾಂಗ್ರೆಸ್ ಟಿಕೆಟ್ ಪಡೆದು ರಾಧಾನ್ನಗರ್ ನಿಂದ ಸ್ಪರ್ಧಿಸಿ ಗೆದ್ದಿದ್ದಾರೆ.

ಅರ್ಜುನ್ ಮೋಧ್ವಾಡಿಯಾ
ಕಾಂಗ್ರೆಸ್ಸಿನ ಹಿರಿಯ ನಾಯಕ ಅರ್ಜುನ್ ಮೋಧ್ವಾಡಿಯಾ ಅವರು ಪೋರ್ ಬಂದರ್ ಕ್ಷೇತ್ರದಿಂದ ಸೋಲು ಕಂಡಿದ್ದಾರೆ.

ವೀರಭದ್ರ ಸಿಂಗ್
ಹಿಮಾಚಲ ಪ್ರದೇಶದ ಹಾಲಿ ಸಿಎಂ, ಕಾಂಗ್ರೆಸ್ ನಾಯಕ ವೀರಭದ್ರ ಸಿಂಗ್ ಅವರು ಅರ್ಕಿ ಕ್ಷೇತ್ರದಲ್ಲಿ ಗೆಲುವಿನ ಹೊಸ್ತಿಲಲ್ಲಿದ್ದಾರೆ. 17,500 ಕ್ಕ ಅಧಿಕ ಅಂತರದ ಮುನ್ನಡೆ ಪಡೆದಿದ್ದಾರೆ.

ಪ್ರೇಮ್ ಕುಮಾರ್ ಧುಮಾಲ್
ಹಿಮಾಚಲ ಪ್ರದೇಶದ ಬಿಜೆಪಿಯ ಸಿಎಂ ಅಭ್ಯರ್ಥಿ ಪ್ರೇಮ್ ಕುಮಾರ್ ಧುಮಾಲ್ ಅವರು ಸುಜಾನ್ ಪುರದಲ್ಲಿ ಸೋಲಿನ ಭೀತಿ ಅನುಭವಿಸುತ್ತಿದ್ದು ಕಾಂಗ್ರೆಸ್ಸಿನ ರಾಜೀಂದರ್ ರಾಣಾ ಅವರು 15,600ಕ್ಕೂ ಅಧಿಕ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.












Click it and Unblock the Notifications