Weekly Horoscope: ಈ ರಾಶಿಯವರ ಅದೃಷ್ಟವೇ ಬದಲಾಗುವ ವಾರ, ಧನಲಾಭದಿಂದ ನೆಮ್ಮದಿ, ವ್ಯಾಪಾರದಲ್ಲಿ ಯಶಸ್ಸು

Weekly Horoscope 29 June to 5 July: ವೈದಿಕ ಜ್ಯೋತಿಷ್ಯದ ಪ್ರಕಾರ, ಜೂನ್ ತಿಂಗಳು ಗ್ರಹಗಳ ಚಲನೆಯ ದೃಷ್ಟಿಕೋನದಿಂದ ಬಹಳ ವಿಶೇಷವಾಗಿದೆ. ಅದರ ಪ್ರಕಾರ, ಈ ತಿಂಗಳು ಅನೇಕರ ಜೀವನದಲ್ಲಿ ಮಹತ್ವದ ತಿರುವು ಕಾಣಿಸಿಕೊಳ್ಳುವುದು. ಈ ವಾರ ಜೂನ್ 29 ರಿಂದ ಜುಲೈ 5ರವರೆಗೆ, ಅಂದರೆ ಮುಂದಿನ 7 ದಿನಗಳಲ್ಲಿ, ಅನೇಕ ದೊಡ್ಡ ಗ್ರಹಗಳ ಸಂಚಾರವಾಗುತ್ತದೆ. ಇದರಿಂದಾಗಿ ಕೆಲವು ರಾಶಿಯವರ ಅದೃಷ್ಟ ಬೆಳಗುವುದು. ಕೆಲವರಿಗೆ ಆರ್ಥಿಕ ಸಮಸ್ಯೆ ಎದುರಾಗಬಹುದು. ಜೂನ್ ಹೊಸ ವಾರವು ನಿಮ್ಮ ರಾಶಿ ಪ್ರಕಾರ ಹೇಗಿರಲಿದೆ ಎನ್ನುವ ಮಾಹಿತಿ ಇಲ್ಲಿದೆ.

ಮೇಷ ರಾಶಿ (Aries):

ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರಲಿದ್ದು, ಮೇಲಾಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ವ್ಯಾಪಾರಸ್ಥರಿಗೆ ಹೊಸ ಗ್ರಾಹಕರು ಅಥವಾ ಡೀಲ್‌ಗಳು ಸಿಗುವ ಸಾಧ್ಯತೆಯಿದೆ. ಆದಾಯ ಹೆಚ್ಚಾಗಲಿದೆ, ಆದರೆ ಅನಗತ್ಯ ವೆಚ್ಚಗಳ ಮೇಲೆ ನಿಗಾ ಇರಿಸಿ. ಸಂಗಾತಿಯೊಂದಿಗೆ ಮಾತುಕತೆ ನಡೆಸುವ ಮೂಲಕ ತಪ್ಪು ತಿಳುವಳಿಕೆಗಳನ್ನು ದೂರ ಮಾಡಿಕೊಳ್ಳಿ. ಆರೋಗ್ಯ ಉತ್ತಮವಾಗಿರಲಿದೆ, ಆದರೆ ಕೆಲಸದ ಒತ್ತಡದಿಂದ ಸುಸ್ತು ಕಾಡಬಹುದು.

Weekly Horoscope

ವೃಷಭ ರಾಶಿ (Taurus):

ಈ ವಾರ ನಿಮಗೆ ಸ್ಥಿರತೆ ಮತ್ತು ನೆಮ್ಮದಿಯನ್ನು ನೀಡಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ಉದ್ಯೋಗದಲ್ಲಿ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳುತ್ತವೆ. ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ, ಉಳಿತಾಯದ ಕಡೆ ಗಮನ ಹರಿಸಿ. ವೈವಾಹಿಕ ಜೀವನದಲ್ಲಿ ಪರಸ್ಪರ ನಂಬಿಕೆ ಮತ್ತು ಸಾಮೀಪ್ಯ ಹೆಚ್ಚಾಗಲಿದೆ. ಆರೋಗ್ಯದ ದೃಷ್ಟಿಯಿಂದ ಆಹಾರ ಪದ್ಧತಿಯಲ್ಲಿ ಎಚ್ಚರ ವಹಿಸಿ, ಅಜೀರ್ಣದಂತಹ ಸಣ್ಣ ಸಮಸ್ಯೆಗಳು ಕಾಡಬಹುದು.

ಮಿಥುನ ರಾಶಿ (Gemini):

ಜುಲೈ ಮೊದಲ ವಾರವು ನಿಮಗೆ ಉತ್ತಮ ಅವಕಾಶಗಳನ್ನು ಹೊತ್ತು ತರಲಿದೆ. ವೃತ್ತಿಜೀವನದಲ್ಲಿ ಹೊಸ ಯೋಜನೆಗಳು ಕೈಗೂಡಲಿವೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ದೃಷ್ಟಿಯಿಂದ ಕಾಲ ಬಹಳ ಅನುಕೂಲಕರವಾಗಿದೆ. ಇದ್ದಕ್ಕಿದ್ದಂತೆ ಆರ್ಥಿಕ ಲಾಭವಾಗುವ ಸಾಧ್ಯತೆಗಳಿವೆ. ಏಕಾಂಗಿಯಾಗಿರುವವರಿಗೆ ಸಂಗಾತಿ ಸಿಗುವ ಯೋಗವಿದೆ. ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಮಾನಸಿಕ ಒತ್ತಡ ಕಡಿಮೆಯಾಗಲಿದೆ.

ಕಟಕ ರಾಶಿ (Cancer):

ಈ ವಾರ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ ಅಥವಾ ಹೆಚ್ಚುವರಿ ಜವಾಬ್ದಾರಿಗಳು ದೊರೆಯಲಿವೆ. ವ್ಯಾಪಾರದಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಆರ್ಥಿಕವಾಗಿ ಖರ್ಚು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹಣವನ್ನು ಸರಿಯಾಗಿ ಹೊಂದಿಸಿಕೊಳ್ಳಿ. ಸಂಗಾತಿಯೊಂದಿಗೆ ಭಾವನಾತ್ಮಕ ಬಂಧ ಗಟ್ಟಿಯಾಗಲಿದೆ. ಕೀಲು ನೋವು ಅಥವಾ ಬೆನ್ನು ನೋವಿನ ಬಗ್ಗೆ ಎಚ್ಚರವಿರಲಿ.

ಸಿಂಹ ರಾಶಿ (Leo):

ಈ ವಾರ ನಿಮಗೆ ಯಶಸ್ಸು ಮತ್ತು ಪ್ರತಿಷ್ಠೆಯನ್ನು ತಂದುಕೊಡಲಿದೆ. ನಿಮ್ಮ ನಾಯಕತ್ವದ ಗುಣಗಳಿಂದ ಮಹತ್ವದ ಕೆಲಸಗಳು ಪೂರ್ಣಗೊಳ್ಳಲಿವೆ. ದೊಡ್ಡ ವ್ಯವಹಾರಗಳು ಲಾಭದಾಯಕವಾಗಿರಲಿದೆ. ಆರ್ಥಿಕ ಲಾಭದ ಹೊಸ ದಾರಿಗಳು ತೆರೆದುಕೊಳ್ಳಲಿವೆ. ಹಳೆಯ ಬಾಕಿ ಹಣ ವಾಪಸ್ ಬರಬಹುದು. ಆರೋಗ್ಯ ಉತ್ತಮವಾಗಿರುತ್ತದೆ. ಆದರೆ ಅತಿಯಾದ ಕೆಲಸದ ಒತ್ತಡದ ಬಗ್ಗೆ ಗಮನವಿರಲಿ.

ಕನ್ಯಾ ರಾಶಿ (Virgo):

ಪ್ರಗತಿಯ ದೃಷ್ಟಿಯಿಂದ ಈ ವಾರ ನಿಮಗೆ ಶುಭವಾಗಿರಲಿದೆ. ಕೆಲಸದ ಸ್ಥಳದಲ್ಲಿ ಹೊಸ ಅವಕಾಶಗಳು ಲಭ್ಯವಾಗಲಿದೆ. ಮೇಲಾಧಿಕಾರಿಗಳ ಸಂಪೂರ್ಣ ಬೆಂಬಲ ಸಿಗಲಿದೆ. ವ್ಯಾಪಾರ ವಿಸ್ತರಣೆಗೆ ಇದು ಸಕಾಲ. ಆರ್ಥಿಕವಾಗಿ ಸ್ಥಿರತೆ ಇರಲಿದ್ದು, ದೀರ್ಘಕಾಲೀನ ಹೂಡಿಕೆಗಳು ಲಾಭದಾಯಕವಾಗಲಿವೆ. ಸಂಗಾತಿಯೊಂದಿಗಿನ ಸಂವಾದದಿಂದ ಸಂಬಂಧದಲ್ಲಿ ನಂಬಿಕೆ ಹೆಚ್ಚಾಗಲಿದೆ. ಹೊಟ್ಟೆಗೆ ಸಂಬಂಧಿಸಿದ ಸಣ್ಣಪುಟ್ಟ ಸಮಸ್ಯೆಗಳು ಕಾಣಿಸಿಕೊಳ್ಳಬಹುದು, ಎಚ್ಚರವಿರಲಿ.

ತುಲಾ ರಾಶಿ (Libra):

ಜುಲೈ ಮೊದಲ ವಾರ ತುಲಾ ರಾಶಿಯವರಿಗೆ ಅತ್ಯಂತ ಲಾಭದಾಯಕವಾಗಿರಲಿದೆ. ಈ ಅವಧಿಯಲ್ಲಿ ತೆಗೆದುಕೊಳ್ಳುವ ಸ್ವಂತ ನಿರ್ಧಾರಗಳು ಭವಿಷ್ಯಕ್ಕೆ ದಾರಿದೀಪವಾಗಲಿವೆ. ನೀವು ಶುರು ಮಾಡುವ ಹೊಸ ವ್ಯಾಪಾರ-ವ್ಯವಹಾರಗಳಲ್ಲಿ ಯಶಸ್ಸು ಕಟ್ಟಿಟ್ಟಬುತ್ತಿ. ಗುರಿಯತ್ತ ಗಮನಹರಿಸಿದರೆ ನಿರೀಕ್ಷಿತ ಫಲ ಲಭ್ಯವಾಗಲಿದೆ.

ವೃಶ್ಚಿಕ ರಾಶಿ (Scorpio):

ಈ ವಾರವು ವೃಶ್ಚಿಕ ರಾಶಿಯವರಿಗೆ ಆತ್ಮವಿಶ್ವಾಸ ಮತ್ತು ಬದಲಾವಣೆಯ ಕಾಲವಾಗಿದೆ. ಬಾಕಿ ಉಳಿದಿರುವ ಹಣ ಕೈ ಸೇರಲಿದೆ. ಮಕ್ಕಳ ಸಾಧನೆ ಕುಟುಂಬದಲ್ಲಿ ಸಂತಸ ಮೂಡಿಸಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಆದರೆ, ವಾರದ ಕೊನೆಯಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗುವ ಸಾಧ್ಯತೆ ಇರುವುದರಿಂದ, ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅಗತ್ಯ.

ಧನು ರಾಶಿ (agitarius):

ವಾರದ ಆರಂಭವು ಧನು ರಾಶಿಯವರಿಗೆ ಅತ್ಯಂತ ಶುಭದಾಯಕವಾಗಿದೆ. ಧನಾತ್ಮಕ ಚಿಂತನೆಗಳು ನಿಮ್ಮ ವ್ಯಕ್ತಿತ್ವವನ್ನು ಉನ್ನತೀಕರಿಸಲಿವೆ. ದೂರದೂರಿಗೆ ಪ್ರಯಾಣದ ಯೋಗವಿದ್ದು, ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಇದು ಸಕಾಲ. ನಿಮ್ಮ ಗುರಿಗಳನ್ನು ತಲುಪಲು ಈ ವಾರ ಪೂರಕವಾಗಿದೆ.

ಮಕರ ರಾಶಿ (Capricorn):

ಮಕರ ರಾಶಿಯವರಿಗೆ ಈ ವಾರ ಮಿಶ್ರಫಲಗಳನ್ನು ನೀಡುವ ನಿರೀಕ್ಷೆಯಿದೆ. ಕೆಲಸದ ಸ್ಥಳದಲ್ಲಿನ ಜವಾಬ್ದಾರಿಗಳು ಹೆಚ್ಚಾಗಲಿವೆ. ಆರ್ಥಿಕ ಸ್ಥಿತಿ ಸುಧಾರಿಸಲಿದ್ದು, ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ವೃತ್ತಿಪರ ಕೆಲಸಗಳಿಗಾಗಿ ಅನಿವಾರ್ಯವಾಗಿ ಹೆಚ್ಚಿನ ಪ್ರಯಾಣ ಮಾಡಬೇಕಾಗಬಹುದು.

ಕುಂಭ ರಾಶಿ (Aquarius):

ಕುಂಭ ರಾಶಿಯವರಿಗೆ ಜುಲೈ ಮೊದಲ ವಾರ ಅದೃಷ್ಟದ ಬಾಗಿಲು ತೆರೆಯಲಿದೆ. ನೂತನ ಕಾರ್ಯಗಳಿಗೆ ಕೈಹಾಕಲು ಇದು ಸಕಾಲ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು, ದಾಂಪತ್ಯ ಜೀವನದಲ್ಲಿ ಸಾಮರಸ್ಯ ಇರಲಿದೆ. ಉದ್ಯೋಗಿಗಳಿಗೆ ಬಡ್ತಿ ಅಥವಾ ವೇತನ ಹೆಚ್ಚಳದ ಸಿಹಿ ಸುದ್ದಿ ಸಿಗುವ ಸಾಧ್ಯತೆಯಿದೆ.

ಮೀನ ರಾಶಿ (Pisces):

ಹೊಸ ವಾರವು ಮೀನ ರಾಶಿಯವರಿಗೆ ಶುಭಾರಂಭವನ್ನು ನೀಡಲಿದೆ. ನಿಮ್ಮ ಸಕಾರಾತ್ಮಕ ಧೋರಣೆ ಕೆಲಸದಲ್ಲಿ ಯಶಸ್ಸು ತಂದುಕೊಡಲಿದೆ. ಹೊಸ ಯೋಜನೆಗಳಿಗೆ ಚಾಲನೆ ನೀಡಲು ಇದು ಸೂಕ್ತ ಸಮಯ. ಸ್ನೇಹಿತರ ಭೇಟಿ ಮತ್ತು ಸಹೋದ್ಯೋಗಿಗಳ ಬೆಂಬಲದಿಂದ ಕೆಲಸಗಳು ಸುಗಮವಾಗಿ ನಡೆಯಲಿವೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+