Gold Price: 3 ದಿನಗಳ ಕುಸಿತಕ್ಕೆ ಬ್ರೇಕ್! ಚಿನ್ನದ ಬೆಲೆ ಮತ್ತೆ ಏರಿಕೆ, ಬೆಳ್ಳಿಯಲ್ಲೂ ಭಾರೀ ಜಿಗಿತ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಇಂದು ಒಂದೇ ದಿನಕ್ಕೆ ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗಿದೆ. ನಿರಂತರವಾಗಿ ಇಳಿಕೆಯತ್ತ ಸಾಗಿದ್ದ ಚಿನ್ನ-ಬೆಳ್ಳಿ ಬೆಲೆಯಲ್ಲಿ ಶುಕ್ರವಾರ (ಜೂನ್ 26) ಏರಿಕೆ ಆಗಿದೆ. ನಗರವಾರು ಬಂಗಾರದ ಬೆಲೆ ಮಾಹಿತಿ ಇಲ್ಲಿದೆ.

ಮೂರು ದಿನಗಳಿಂದ ಇಳಿಮುಖವಾಗಿದ್ದ ಚಿನ್ನದ ದರದಲ್ಲಿ ದಿಢೀರ್ ಅಲ್ಪ ಹೆಚ್ಚಳವಾಗಿದೆ. 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 25 ರೂಪಾಯಿ ಹಾಗೂ 24 ಕ್ಯಾರಟ್ ಬಂಗಾರದ ದರ 27 ರೂಪಾಯಿ ಏರಿಕೆ ಆಗಿದ್ದರೆ, 18 ಕ್ಯಾರಟ್‌ನ ಒಂದು ಗ್ರಾಂ ಚಿನ್ನಕ್ಕೆ 20 ರೂ.ನಷ್ಟು ಹೆಚ್ಚಳವಾಗಿದೆ.

Gold Rate

* 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆಯಲ್ಲಿ 250 ರೂಪಾಯಿ ಏರಿಕೆ ಆಗುವ ಮೂಲಕ ಒಟ್ಟು ದರ ಇಂದು 1,29,800 ರೂಪಾಯಿ ತಲುಪಿದೆ.

* 24 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆಯಲ್ಲಿ 270 ರೂಪಾಯಿ ಹೆಚ್ಚಾಗಿದ್ದು, ಈ ಮೂಲಕ ಒಟ್ಟು ದರ 1,41,600 ರೂಪಾಯಿ ಮುಟ್ಟಿದೆ.

* 18 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆಯಲ್ಲಿ 200 ರೂಪಾಯಿ ಏರಿಕೆ ಆಗುವ ಮೂಲಕ ಒಟ್ಟು ಬೆಲೆ ಇಂದು 1,06,200 ರೂಪಾಯಿ ತಲುಪಿದೆ ಎಂದು ವರದಿ ಆಗಿದೆ.

Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, ಚಿನ್ನಾಭರಣ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, ಚಿನ್ನಾಭರಣ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ

ಜೂನ್ 23ರಿಂದ ನಿರಂತರವಾಗಿ ಹೆಚ್ಚಿನ ಪ್ರಮಾಣದಲ್ಲಿ ಇಳಿಕೆ ಕಂಡಿದ್ದ ಚಿನ್ನದ ಬೆಲೆಯು ಇಂದು ಅಲ್ಪ ಏರಿಕೆ ಕಾಣುವ ಮೂಲಕ ಗ್ರಾಹಕರಿಗೆ ಆಘಾತ ನೀಡಲು ಮುಂದಾಗಿದೆ. ಏರಿಕೆ ಪ್ರಮಾಣಕ್ಕಿಂತ ದರ ಕುಸಿಯುವ ಪ್ರಮಾಣ ಅಧಿಕವಾಗಿದೆ.

ಬೆಳ್ಳಿ ದರದಲ್ಲೂ ಗಣನೀಯ ಏರಿಕೆ

ಬಿಳಿ ಲೋಹ ಬೆಳ್ಳಿ ದರದಲ್ಲಿ ಏರಿಳಿತ ಮುಂದುವರಿದಿದ್ದು, ನೆನ್ನೆ 10,000 ರೂಪಾಯಿ ಕುಸಿತ ಕಂಡಿದ್ದ ಬೆಳ್ಳಿಯ ಮೌಲ್ಯ ಇಂದು 100 ಗ್ರಾಮ ಬೆಳ್ಳಿಗೆ 500 ರೂ. ನಂತೆ ಒಂದು ಕೆಜಿ ಬೆಳ್ಳಿಯ ದರ ಬರೋಬ್ಬರಿ 5000 ರೂಪಾಯಿ ಏರಿಕೆ ಆಗಿದೆ. ಕೈಗಾರಿಕೆ, ಚಿನ್ನಾಭರಣ ಉದ್ದೇಶಕ್ಕೆ ಹೆಚ್ಚಾಗಿ ಬಳಸುವ ಬೆಳ್ಳಿಯು ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ. ಈ ವಾರಾಂತ್ಯ ಪೂರ್ಣ ದರ ಏರುಗತಿಯಲ್ಲಿ ಸಾಗುವ ಲಕ್ಷಣಗಳು ಇವೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

22 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ

ಚೆನ್ನೈ: 13,220 ರೂಪಾಯಿ

ಮುಂಬೈ: 13,980 ರೂಪಾಯಿ

ದೆಹಲಿ: 12,995 ರೂಪಾಯಿ

ಕೊಲ್ಕತ್ತ: 13,980 ರೂಪಾಯಿ

ಬೆಂಗಳೂರು: 13,980 ರೂಪಾಯಿ

ಹೈದರಾಬಾದ್: 13,980 ರೂಪಾಯಿ

ಕೇರಳ: 13,980 ರೂಪಾಯಿ

ಪುಣೆ: 13,980 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+