Sharath BR: ಐಪಿಎಲ್‌ನಲ್ಲಿ ಮಿಂಚಲು ಸಿದ್ದವಾದ ಮತ್ತೊಬ್ಬ ಕನ್ನಡಿಗ
ಐಪಿಎಲ್‌ನಲ್ಲಿ ಮಿಂಚಲು ಮತ್ತೊಬ್ಬ ಕನ್ನಡಿಗ ಸಿದ್ದವಾಗಿದ್ದಾನೆ. ಕರ್ನಾಟಕ ವಿಕೆಟ್ ಕೀಪರ್ ಬ್ಯಾಟರ್ ಶರತ್ ಬಿ.ಆರ್. ಗುಜರಾತ್ ಟೈಟಾನ್ಸ್ ತಂಡಕ್ಕಾಗಿ ಪದಾರ್ಪಣೆ ಮಾಡಿದ್ದಾರೆ.
ಲಕ್ನೋದ ಏಕಾನ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಶರತ್ ಬಿ.ಆರ್. ಗುಜರಾತ್ ಟೈಟಾನ್ಸ್ ತಂಡಕ್ಕಾಗಿ ಪದಾರ್ಪಣೆ ಮಾಡಿದರು.

ಕೊನೆಯ ಹಂತದಲ್ಲಿ ಜಿಟಿ ತಂಡಕ್ಕೆ ಸೇರ್ಪಡೆಯಾಗಿದ್ದ ಶರತ್, ಕೊನೆಗೂ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ವೃದ್ಧಿಮಾನ್ ಸಾಹಾ ಅವರು ಗಾಯದಿಂದ ಬಳಲುತ್ತಿರುವ ಕಾರಣ ಶರತ್ ಬಿಆರ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದರು.
ಜಾರ್ಖಂಡ್‌ನ ರಾಬಿನ್ ಮಿಂಜ್ ಅವರನ್ನು ಗುಜರಾತ್ ಟೈಟಾನ್ಸ್ 2024ರ ಐಪಿಎಲ್ ಹರಾಜಿನಲ್ಲಿ ₹3.6 ಕೋಟಿ ನೀಡಿ ಖರೀದಿ ಮಾಡಿತ್ತು. ಸ್ಫೋಟಕ ಬ್ಯಾಟರ್, ವಿಕೆಟ್ ಕೀಪರ್ ಮೇಲೆ ಭರವಸೆ ಇಟ್ಟಿದ್ದ ಗುಜರಾತ್ ಟೈಟಾನ್ಸ್, ಅವರನ್ನು ವೃದ್ಧಿಮಾನ್ ಸಾಹಾ ಅವರಿಗೆ ಬ್ಯಾಕಪ್ ಪ್ಲೇಯರ್ ಆಗಿ ಯೋಜಿಸಿತ್ತು.
ಐಪಿಎಲ್ ಆರಂಭಕ್ಕೆ ಕೆಲವು ದಿನಗಳಿರುವಾಗ ರಾಬಿನ್ ಮಿಂಜ್ ಅಪಘಾತದಲ್ಲಿ ಗಾಯಗೊಂಡ ಕಾರಣ, ಅವರು ಐಪಿಎಲ್‌ಗೆ ಅಲಭ್ಯರಾಗಿದ್ದರು, ಗುಜರಾತ್ ಟೈಟಾನ್ಸ್ ಅವರ ಬದಲಾಗಿ ಕರ್ನಾಟಕದ ವಿಕೆಟ್ ಕೀಪರ್ ಶರತ್ ಬಿಆರ್ ಅವರನ್ನು ಮೂಲಬೆಲೆ ₹20 ಲಕ್ಷ ನೀಡಿ ಖರೀದಿ ಮಾಡಿತು.
ಭರವಸೆಯ ವಿಕೆಟ್ ಕೀಪರ್ ಬ್ಯಾಟರ್
ಶರತ್ ಬಿಆರ್ ಭರವಸೆಯ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದಾರೆ. 28 ಟಿ20 ಪಂದ್ಯಗಳನ್ನಾಡಿರುವ ಅವರು 15.61 ಸರಾಸರಿ ಮತ್ತು 118.84 ಸ್ಟ್ರೈಕ್‌ರೇಟ್‌ನಲ್ಲಿ 328 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಅರ್ಧಶತಕ ಕೂಡ ಸೇರಿದೆ. 20 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಅವರು 23.69 ಸರಾಸರಿಯಲ್ಲಿ 616 ರನ್ ಗಳಿಸಿದ್ದಾರೆ.












Click it and Unblock the Notifications