ವಿಶ್ವದ ಅತಿ ದೊಡ್ಡ ಮನೆ ಹೊಂದಿರುವ ಭಾರತೀಯ ಮಹಿಳೆ ಯಾರು? ಈ ಮನೆಯ ಮುಂದೆ ಅಂಬಾನಿ ಬಂಗಲೆಯೂ ಚಿಕ್ಕದು
ಇದು ವಿಶ್ವದ ಅತ್ಯಂತ ದೊಡ್ಡ ಮನೆ, ಈ ಮನೆ ಮುಂದೆ ವಿಶ್ವದ ಎಲ್ಲ ಮನೆಗಳೂ ಚಿಕ್ಕದೆನಿಸುತ್ತವೆ. ಮುಂಬೈನಲ್ಲಿರುವ ಮುಖೇಶ್ ಅಂಬಾನಿ ಒಡೆತನದ ಆಂಟಿಲಿಯಾ ಎಂದುಕೊಂಡರೆ ಅದು ತಪ್ಪು. ಹೌದು ಈ ದೊಡ್ಡ ಮನೆ ಇರುವುದು ಭಾರತದಲ್ಲೇ, ಆದರೆ ಮುಂಬೈನಲ್ಲಿ ಅಲ್ಲ ಬದಲಾಗಿ ವಡೋದರಾದಲ್ಲಿ.
ಗುಜರಾತ್‌ನ ವಡೋದರಾದಲ್ಲಿರುವ ಲಕ್ಷ್ಮಿ ವಿಲಾಸ್ ಅರಮನೆಯನ್ನು ವಿಶ್ವದ ಅತಿ ದೊಡ್ಡ ಖಾಸಗಿ ನಿವಾಸ ಎಂದು ಗುರುತಿಸಲಾಗಿದೆ. ಈ ಅರಮನೆಯು ಬರೋಡಾದ ಗಾಯಕ್‌ವಾಡ್‌ಗಳ ಒಡೆತನದಲ್ಲಿದೆ. ಇಂಗ್ಲೆಂಡಿನ ಬಕಿಂಗ್ಹ್ಯಾಮ್ ಅರಮನೆಯ ನಾಲ್ಕು ಪಟ್ಟು ದೊಡ್ಡದಾಗಿದೆ.

ಐತಿಹಾಸಿಕವಾಗಿ ಈ ಪ್ಯಾಲೇಸ್ ಮಹತ್ವದ ಸ್ಥಾನ ಹೊಂದಿದೆ, ಗಾಯಕ್ವಾಡ್‌ಗಳು ಒಮ್ಮೆ ಬರೋಡಾದ ಆಡಳಿತಗಾರರಾಗಿದ್ದರು ಮತ್ತು ಸ್ಥಳೀಯ ಸಮುದಾಯವು ಅವರನ್ನು ಇನ್ನೂ ಗೌರವದಿಂದಲೇ ನೋಡುತ್ತದೆ. ಪ್ರಸ್ತುತ ಹೆಚ್‌ಆರ್ ಹೆಚ್ ಸಮರ್ಜಿತ್ ಸಿಂಗ್ ಗಾಯಕ್ವಾಡ್ ಮತ್ತು ಅವರ ಪತ್ನಿ ರಾಧಿಕರಾಜೆ ಗಾಯಕ್ವಾಡ್ ಅವರ ಒಡೆತನದಲ್ಲಿದೆ. ಅರಮನೆಯು 3,04,92,000 ಚದರ ಅಡಿ ವಿಸ್ತಾರವಾದ ಪ್ರದೇಶವನ್ನು ಒಳಗೊಂಡಿದೆ.
ಅಂಬಾನಿ ಮನೆ ಕೂಡ ಚಿಕ್ಕದು
Housing.com ಪ್ರಕಾರ, ಇದು ಬಕಿಂಗ್ಹ್ಯಾಮ್ ಅರಮನೆಯ ಪ್ರದೇಶಕ್ಕಿಂತೆ ಹೆಚ್ಚುನ ಪ್ರದೇಶದಲ್ಲಿ ನಿರ್ಮಾಣವಾಗಿದೆ. ಬಕಿಂಗ್ಹ್ಯಾಮ್ ಅರಮನೆ 828,821 ಚದರ ಅಡಿಗಳನ್ನು ವ್ಯಾಪಿಸಿದೆ. ಮುಖೇಶ್ ಅಂಬಾನಿಯವರ ಆಂಟಿಲಿಯಾ, 15,000 ಕೋಟಿ ರೂಪಾಯಿಗಳ ವಿಶ್ವದ ಅತ್ಯಂತ ದುಬಾರಿ ಮನೆ, ಆದರೆ ಇದರ ವ್ಯಾಪ್ತಿ 48,780 ಚದರ ಅಡಿ ಪ್ರದೇಶ. ಅರಮನೆಗೆ ಹೋಲಿಕೆ ಮಾಡಿದರೆ ಇದು ತುಂಬಾ ಚಿಕ್ಕದಾಗಿ ಕಾಣಿಸುತ್ತದೆ.
ಭವ್ಯವಾದ ಲಕ್ಷ್ಮಿ ವಿಲಾಸ್ ಅರಮನೆಯು 170 ಕೊಠಡಿಗಳನ್ನು ಹೊಂದಿದೆ ಮತ್ತು ಗಾಲ್ಫ್ ಕೋರ್ಸ್ ಅನ್ನು ಒಳಗೊಂಡಿದೆ. ಮಹಾರಾಜ ಸಯಾಜಿರಾವ್ ಗಾಯಕ್ವಾಡ್ III ಅವರು 1890 ರಲ್ಲಿ ಸುಮಾರು 180,000 ಯುಕೆ ಪೌಂಡ್ ವೆಚ್ಚದಲ್ಲಿ ಈ ಶ್ರೀಮಂತ ಅರಮನೆಯ ನಿರ್ಮಾಣವನ್ನು ಪ್ರಾರಂಭಿಸಿದರು.
ಜುಲೈ 19, 1978 ರಂದು ಜನಿಸಿದ ರಾಧಿಕರಾಜೆ ಗಾಯಕ್ವಾಡ್ ಅವರು ಗುಜರಾತ್‌ನ ವಾಂಕನೇರ್ ರಾಜ್ಯದವರು. ಆಕೆಯ ತಂದೆ ಡಾ ಎಂ ಕೆ ರಂಜಿತ್‌ಸಿನ್ಹ್ ಝಾಲಾ ಅವರು ಐಎಎಸ್ ಅಧಿಕಾರಿಯಾಗಿ ವೃತ್ತಿಜೀವನವನ್ನು ಮುಂದುವರಿಸಲು ರಾಜಮನೆತನದ ಪಟ್ಟವನ್ನು ತ್ಯಜಿಸಲು ನಿರ್ಧರಿಸಿದರು.
ಓದುವ ಮತ್ತು ಬರೆಯುವ ಉತ್ಸಾಹಕ್ಕೆ ಹೆಸರುವಾಸಿಯಾದ ರಾಧಿಕರಾಜೆ ಗಾಯಕ್ವಾಡ್ ಅವರು ದೆಹಲಿ ವಿಶ್ವವಿದ್ಯಾಲಯದ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಭಾರತೀಯ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. 2002 ರಲ್ಲಿ ಮಹಾರಾಜ್ ಸಮರ್ಜಿತ್ ಸಿಂಗ್ ಗಾಯಕ್ವಾಡ್ ಅವರನ್ನು ಮದುವೆಯಾಗುವ ಮೊದಲು ಅವರು ಪತ್ರಕರ್ತೆಯಾಗಿ ಕೆಲಸ ಮಾಡಿದರು. 2012 ರಲ್ಲಿ, ಲಕ್ಷ್ಮಿ ವಿಲಾಸ್ ಅರಮನೆಯಲ್ಲಿ ನಡೆದ ಸಾಂಪ್ರದಾಯಿಕ ಸಮಾರಂಭದಲ್ಲಿ ಬರೋಡಾ ಕಿರೀಟವನ್ನು ಸಮರ್ಜಿತ್ ಸಿಂಗ್ ಗಾಯಕ್ವಾಡ್ ಅವರಿಗೆ ವರ್ಗಾಯಿಸಲಾಯಿತು.












Click it and Unblock the Notifications