Hardik Pandya: ಪಾಂಡ್ಯರನ್ನು ತಡೆಯಲು ನಾನು ಪ್ರಯತ್ನಿಸಲಿಲ್ಲ: ಕೋಚ್‌ ಆಶಿಶ್ ನೆಹ್ರಾ

2024 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್‌ಗೆ ಮುಂಚಿತವಾಗಿ, ಗುಜರಾತ್ ಟೈಟಾನ್ಸ್‌ನ ಮುಖ್ಯ ಕೋಚ್ ಆಶಿಶ್ ನೆಹ್ರಾ, ಮಾಜಿ ನಾಯಕ ಹಾರ್ದಿಕ್ ಪಾಂಡ್ಯ ತಂಡದಿಂದ ಹೊರ ಹೋಗುವ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಫ್ರಾಂಚೈಸಿಯಲ್ಲಿ ಉಳಿಯುವಂತೆ ಹಾರ್ದಿಕ್ ಪಾಂಡ್ಯರ ಮನವೊಲಿಸುವ ಪ್ರಯತ್ನ ಮಾಡಿಲ್ಲ ಎಂದು ನೆಹ್ರಾ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ನೆಹ್ರಾ, "ನಾನು ಎಂದಿಗೂ ಹಾರ್ದಿಕ್‌ಗೆ ಗುಜರಾತ್ ಟೈಟನ್ಸ್ ತಂಡದಲ್ಲೇ ಉಳಿಯುವಂತೆ ಮನವೊಲಿಸಲು ಪ್ರಯತ್ನಿಸಲಿಲ್ಲ. ಈ ಕ್ರೀಡೆಯು ಬೆಳವಣಿಗೆ ಆಗುತ್ತಿರುವ ರೀತಿ ನೊಡಿದರೆ, ಫುಟ್ಬಾಲ್‌ ಅಂತರರಾಷ್ಟ್ರೀಯ ಕ್ಲಬ್ ಮಾರುಕಟ್ಟೆಯಲ್ಲಿ ನಡೆಯುವಂತೆ ಹೆಚ್ಚಿನ ವರ್ಗಾವಣೆಗಳನ್ನು ನಾವು ನೋಡುತ್ತೇವೆ." ಎಂದು ಹೇಳಿದ್ದಾರೆ.

Ashish Nehra Shares Insights on Hardik Pandya s IPL 2024 Absence in GT

"ಗುಜರಾತ್ ಟೈಟಾನ್ಸ್ ತಂಡವು ಹಾರ್ದಿಕ್ ಪಾಂಡ್ಯ ಅವರನ್ನು ಮಿಸ್ ಮಾಡಿಕೊಳ್ಳುತ್ತದೆ. ಆದರೆ ಇದು ಅವರಿಗೆ ಹೊಸ ಅವಕಾಶ. ಪ್ರತಿ ವರ್ಷ ಐಪಿಎಲ್ ನಿಮಗೆ ಹೊಸದನ್ನು ಕಲಿಸುತ್ತದೆ ಮತ್ತು ಈ ವರ್ಷವೂ ಹೊಸದನ್ನು ಕಲಿಯಲು ಇರುತ್ತದೆ. ನಮ್ಮ ಕಡೆಯಿಂದ ಹಾರ್ದಿಕ್ ಪಾಂಡ್ಯ ಅವರಿಗೆ ಶುಭಾಶಯಗಳು." ಎಂದು ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ಸೇರಿಕೊಂಡ ಪಾಂಡ್ಯ

ಹಾರ್ದಿಕ್ ಪಾಂಡ್ಯ 2024 ರ ಋತುವಿನಲ್ಲಿ ಮುಂಬೈ ಇಂಡಿಯನ್ಸ್ (MI) ತಂಡಕ್ಕೆ ಮರಳಿದರು, ಇದು ಐಪಿಎಲ್ ಇತಿಹಾಸದಲ್ಲಿ ವ್ಯಾಪಕವಾಗಿ ಚರ್ಚಿಸಿದ ವ್ಯಾಪಾರ ಒಪ್ಪಂದವಾಗಿದೆ. ಹಾರ್ದಿಕ್ ಪಾಂಡ್ಯ ರೋಹಿತ್ ಶರ್ಮಾ ಬದಲಿಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ನೇಮಕವಾಗಿದ್ದಾರೆ. ಇದು ರೋಹಿತ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಮುಂಬೈ ಇಂಡಿಯನ್ಸ್‌ನಿಂದ ಬಿಡುಗಡೆಯಾದ ನಂತರ ಹಾರ್ದಿಕ್ ಆರಂಭದಲ್ಲಿ 2022 ರ ಋತುವಿನಲ್ಲಿ ಗುಜರಾತ್ ಟೈಟಾನ್ಸ್‌ಗೆ ಸೇರಿದರು. ಅವರ ನಾಯಕತ್ವದಲ್ಲಿ ಟೈಟಾನ್ಸ್ ತಂಡ ಚೊಚ್ಚಲ ಋತುವಿನಲ್ಲಿ ಪ್ರಶಸ್ತಿ ಗೆದ್ದಿತು, 2023ರ ಐಪಿಎಲ್‌ನಲ್ಲಿ ರನ್ನರ್ ಅಪ್ ಆಗಿತ್ತು.

ಶುಭಮನ್ ಗಿಲ್‌ಗೆ ನಾಯಕತ್ವ

ಐಪಿಎಲ್ 2024 ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಲು ಶುಭಮನ್ ಗಿಲ್‌ಗೆ ನೆಹ್ರಾ ಉತ್ಸುಕರಾಗಿದ್ದಾರೆ. ನಾಯಕನಾಗಿ ಶುಭ್‌ಮನ್ ಗಿಲ್ ಅವರ ಪ್ರದರ್ಶನದ ಬಗ್ಗೆ ಕೋಚ್ ಆಶಿಶ್ ನೆಹ್ರಾ ಕುತೂಹಲ ವ್ಯಕ್ತಪಡಿಸಿದ್ದಾರೆ, "ಶುಭ್‌ಮನ್ ಗಿಲ್ ನಾಯಕನಾಗಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ನೋಡಲು ನಾನು ಆಸಕ್ತಿ ಹೊಂದಿದ್ದೇನೆ ಆದರೆ ನಾನು ಮಾತ್ರವಲ್ಲದೆ ಇಡೀ ಭಾರತವು ಅದನ್ನು ನೋಡಲು ಕಾಯುತ್ತಿದೆ" ಎಂದು ಹೇಳಿದರು.

ಹಾರ್ದಿಕ್ ಪಾಂಡ್ಯ ಮತ್ತು ಗಾಯಗೊಂಡಿರುವ ಮೊಹಮ್ಮದ್ ಶಮಿ ಇಬ್ಬರಿಗೂ ಪರ್ಯಾಯವನ್ನು ಹುಡುಕುವ ಸವಾಲಿನ ಬಗ್ಗೆ ನೆಹ್ರಾ ಒಪ್ಪಿಕೊಂಡರು. "ಕ್ರೀಡೆಯಲ್ಲಿ ನೀವು ಮುಂದುವರಿಯಬೇಕು ಆದರೆ ಹಾರ್ದಿಕ್ ಪಾಂಡ್ಯ ಮತ್ತು ಮೊಹಮ್ಮದ್ ಶಮಿಯಂತಹ ಆಟಗಾರರನ್ನು ಬದಲಾಯಿಸುವುದು ಸುಲಭವಲ್ಲ" ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+